ತುಪ್ಪದಲ್ಲಿರುವ ಆರೋಗ್ಯಕರ ಗುಣಗಳನ್ನು ನೀವು ತಿಳಿದುಕೊಂಡರೆ, ಪ್ರತೀ ದಿನ ಬಳಸಲು ಶುರು ಮಾಡ್ತೀರ..

0
2216

Kannada News | Health tips in kannada

ಭಾರತದಲ್ಲಿ ಜನ ಎಣ್ಣೆಯ ನಂತರ ಹೆಚ್ಚಾಗಿ ಬಳಸುವ ಪದಾರ್ಥವೆಂದರೆ ಅದು ತುಪ್ಪ. ಸಿಹಿ ತಿಂಡಿಗಂತೂ ತುಪ್ಪ ಅತ್ಯಂತ ಅವಶ್ಯಕ.ಕೇವಲ ಅಡುಗೆಗೆ ಮಾತ್ರವಲ್ಲದೆ ಹೋಮ , ಹವನ , ದೇವರ ಅಭಿಷೇಕ ಮತ್ತು ಇತರೆ ಧಾರ್ಮಿಕ ಕಾರ್ಯಗಳಿಗೂ ಇದು ಬೇಕು. ತುಪ್ಪವನ್ನು ನೀವು ಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ , ಎಷ್ಟು ದಿನ ಬೇಕಾದರೂ ನ್ನೆವು ಹಾಗೆಯೇ ಸಂಗ್ರಹಿಸಡಬಹುದು. ಇದು ದೀರ್ಘ ಕಾಲ ಬಾಳಿಕೆ ಬರುತ್ತದೆ. ಇಂತಹ ತುಪ್ಪದಲ್ಲಿ ನಿಮಗೆ ತಿಳಿಯದಿರುವ ಸಾಕಷ್ಟು ಆರೋಗ್ಯಕರ ಅಂಶಗಳಿವೆ.

ತುಪ್ಪದಲ್ಲಿ ಎ,ಡಿ,ಇ,ಕೆ ಮುಂತಾದ ವಿಶೇಷ ವಿಟಮಿನ್‌ಗಳಿದ್ದು ಇವು ಶರೀರಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ನಿಮ್ಮ ಪ್ರತಿದಿನದ ವಿಟಮಿನ್‌ಗಾಗಿ ಆಹಾರದಲ್ಲಿ ತುಪ್ಪವನ್ನು ಬಳಸಿ. ವಿಟಮಿನ್ ಇ ಕೆಂಪು ರಕ್ತ ಕಣಗಳನ್ನು ಹಾಳಾಗುವದರಿಂದ ರಕ್ಷಿಸುತ್ತದೆ , ವಿಟಮಿನ್ ಕೆ ನಿಮ್ಮ ಮೂಳೆ ಗಳಿಗೆ ಒಳ್ಳೆಯದು. ಇಷ್ಟೆಲ್ಲ ವಿಟಮಿನ್ ಗಳು ಕೇವಲ ನಿತ್ಯವೂ ಒಂದು ಸ್ಪೂನ್ ತುಪ್ಪ ಬಳಸುವದರಿಂದ ಸಿಗುತ್ತದೆ.

ತುಪ್ಪದಲ್ಲಿ ಚೈನ್ ಫ್ಯಾಟಿ ಆಸಿಡ್ಸ್ ಇರುವದರಿಂದ ನೀವು ಸದಾ ಚೈತನ್ಯವಾಗಿ , ಉಲ್ಲಾಸದಿಂದ ಇರುತ್ತೀರಾ ಇದೊಂದು ಎನರ್ಜಿ ಬೂಸ್ಟರ್ ಆಗಿದೆ.

ಇನ್ನೊಂದು ಪ್ರಯೋಜನವೆಂದರೆ ತುಪ್ಪವು ದೇಹದಲ್ಲಿ ಅಧಿಕವಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಅದರೊಂದಿಗೆ ಹೋರಾಡುತ್ತದೆ. ಚಯಾಪಚಯಕ್ಕಾಗಿ ಬೇಕಾದ ಪೋಷಕಾಂಶಗಳನ್ನು ಅಧಿಕಗೊಳಿಸಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.

ತುಪ್ಪದಲ್ಲಿ ಆಂಟಿಆಕ್ಸಿಡೆಂಟ್, ಕಂಜ್ಯೂಗೇಟೆಡ್ ಲಿನೋಲಿಕ್ ಏಸಿಡ್ (ಸಿಎಲ್‌ಎ) ಅಧಿಕವಾಗಿದ್ದು, ಕೊಬ್ಬು ಕರಗಿಸುವ ಅಂಶಗಳಿಂದ ಹೇರಳವಾಗಿದೆ ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದರಿಂದ ನಿಮ್ಮ ಅಧಿಕ ಕೊಬ್ಬಿನ ಸಮಸ್ಯೆ ಕಡಿಮೆಯಾಗುತ್ತದೆ.

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ತುಪ್ಪ ಮಾಡುತ್ತದೆ. ಬೆಳೆಯುವ ಮಕ್ಕಳಿಗೆ ನೀಡುವ ಆಹಾರದಲ್ಲಿ ತುಪ್ಪವನ್ನು ಬಳಸುವುದರಿಂದ ಅವರ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆ ಬೀಳುವ ಸಂಭವ ಕಡಿಮೆ ಇರುತ್ತದೆ.

ತುಪ್ಪ ಮಾಡುವ ವಿಧಾನ:

೧.ಮೊದಲು ಹಸಿ ಬೆಣ್ಣೆ ಯನ್ನುಚೆನ್ನಾಗಿ ತಣ್ಣನೆ ನೀರಿಂದ ತೊಳೆದು ಒಂದು ಪಾತ್ರೆಯಲ್ಲಿ ಹಾಕ ಬೇಕು , ಮಧ್ಯಮ ಹೀಟ್ ನಲ್ಲಿ ಕಾಯಿಸಿ. ಸ್ವಲ್ಪ ಹೊತ್ತಿನ ನಂತರ ನಿಮಗೆ ಗೋಲ್ಡನ್ ಬ್ರೌನ್ ಬಣ್ಣ ಬಂದ ನಂತರ ತುಪ್ಪವನ್ನು ತಣ್ಣಗೆ ಮಾಡಿ ಬಳಸಬಹುದು.

೨.ಹಾಲಿನ ಅಥವಾ ಮಜ್ಜಿಗೆ ಮೇಲಿನ ಕೆನೆಯನ್ನು ಶೇಖರಿಸಿ ನೀವು ಅದನ್ನು ಕೂಡ ಮಧ್ಯಮ ಹೀಟ್ ನಲ್ಲಿ ಪಾತ್ರೆಯಲ್ಲಿ ಕಾಯಿಸಿ ನೀವು ಹೋಂ ಮೇಡ್ ನ್ಯಾಚುರಲ್ ಆಗಿ ತುಪ್ಪ ತಯಾರಿಸಬಹುದು.

Also Read: ಕೆಮ್ಮು ದಮ್ಮು ಉಬ್ಬಸಕ್ಕೆ ಆಡುಸೋಗೆ ಸೊಪ್ಪಿನ ಲೇಹ್ಯಕ್ಕಿಂತ ಔಷಧಿ ಬೇಕಾ?? ಹೇಗ್ ಮಾಡೋದು ಅನ್ನೋದು ನಾವು ಹೇಳ್ತಿವಿ ಮುಂದೆ ಓದಿ…

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522