ಅಜೀರ್ಣಕ್ಕೆ, ಪಿತ್ತದೋಷಕ್ಕೆ ಶುಂಠಿಗಿಂತ ಔಷಧಿ ಬೇಕಾ??

0
1964

ಶುಂಠಿಯು ಅತ್ಯುತ್ತಮ ಜೀರ್ಣಕಾರಕ ಗುಣವುಳ್ಳ ವಸ್ತು. ಶುಂಠಿ ಸೇವಿಸುವುದರಿಂದ ಜಠರದ ಕ್ರಿಯಾಶಕ್ತಿ ಹೆಚ್ಚುವುದು. ಒಣಶುಂಠಿಗಿಂತ ಹಸಿ ಶುಂಠಿ ಹೆಚ್ಚು ಪರಿಣಾಮಕಾರಿ. ಹಸಿ ಶುಂಠಿ ಸೇವಿಸಿದರೆ ಹೆಚ್ಚು ಹೆಚ್ಚು ಜಠರ ರಸ ಉತ್ಪತ್ತಿಯಾಗುವುದುನತ್ತು ಜೀರ್ಣಶಕ್ತಿ ಹೆಚ್ಚುವುದು. ನಿಯಮಿತ ಶುಂಠಿ ಸೇವನೆಯಿಂದ ಪಿತ್ತದೋಷ ನಿವಾರಣೆಯಾಗುವುದು.

1. ಪ್ರತಿದಿನ ಊಟದ ನಂತರ ಒಂದು ಚೂರು ಸುಂಟಿ ಅಗೆದು ಚಪ್ಪರಿಸುತ್ತಿದ್ದರೆ ಅಜೀರ್ಣ, ಹೊಟ್ಟೆ ಹುಣ್ಣು, ಹೊಟ್ಟೆಯುಬ್ಬರ ಮುಂತಾದ ರೋಗಗಳ ಭಯವಿರುವುದಿಲ್ಲ.

2. ಶುಂಠಿ ಸೇವಿಸುತ್ತಿದ್ದರೇ ಜಠರದ/ಕರುಳಿನ ಜಂತು ಹುಳುಗಳ ತೊಂದರೆ ನಿವಾರಣೆಯಾಗುತ್ತದೆ.

3. ಊಟ ಸೇರದೆ ಇದ್ದಾಗ ಒಂದು ಚೂರು ಹಸಿ ಶುಂಠಿ, ನಾಲ್ಕೈದು ಜೀರಿಗೆ ಕಾಳು, ಸ್ವಲ್ಪ ಕಲ್ಲು ಸಕ್ಕರೆ ಅಗೆದು ಚೆನ್ನಾಗಿ ಚಪ್ಪರಿಸಿದ್ದಲ್ಲಿ ಹಸಿವು ಹೆಚ್ಚಾಗುತ್ತದೆ.

4. ಒಂದು ಟೀ ಚಮಚ ಹಸಿ ಶುಂಠಿ, ಎರಡು ಟೀ ಚಮಚ ನಿಂಬೆ ರಸ, ಎರಡು ಟೀ ಚಮಚ ಪುದಿನಾ ಸೊಪ್ಪಿನ ರಸ ಮತ್ತು ಆರು ಟೀ ಚಮಚ ಜೇನುತುಪ್ಪ ಮಿಶ್ರ ಮಾಡಿ ದಿನಕ್ಕೆ ಮೂರು ಸಲ ಸೇವಿಸುವುದರಿಂದ ಸಂಧಿವಾತ, ಮೂಲವ್ಯಾಧಿ, ಕಾಮಾಲೆ, ಹೊಟ್ಟೆ ತೊಳೆಸುವಿಕೆ, ಹೊಟ್ಟೆ ಉಬ್ಬರ, ಅಜೀರ್ಣ, ಮಲಬದ್ಧತೆ, ಗಂಟಲು ಕೆರೆತ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ.

5. ತಲೆ ನೋವು ಇದ್ದಲ್ಲಿ ಹಸಿ ಶುಂಠಿಯನ್ನು ನೀರಿನಲ್ಲಿ ತೇದು, ಆ ಗಂಧವನ್ನು ಹಣೆಗೆ ಹಚ್ಚಿದ್ದಲ್ಲಿ ನೋವು ಶಮನವಾಗುತ್ತದೆ.

6. ತಣ್ಣೇರಿನ ಸ್ನಾನ, ಮಳೆಯಲ್ಲಿ ತೋಯ್ದು ದೇಹಾಲಸ್ಯ ಮತ್ತು ನೆಗಡಿ ಉಂಟಾಗಿದ್ದರೆ ಹಸಿ ಶುಂಠಿಯ ಕಷಾಯ ತಯಾರಿಸಿ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಿದ್ದಲ್ಲಿ ಜಡ್ಡು ನಿವಾರಣೆಯಾಗುವುದು.

7. ಕಫ ನಿವಾರಣೆಗೆ: ಮೆಂತ್ಯೆ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿ ಶುಂಠಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.

8. ಗಂಟಲು ಒಡೆದು ಮಾತನಾಡಲು ಆಗದಿದ್ದರೆ ಒಂದು ಚೂರು ಹಸಿ ಶುಂಠಿ, ಒಂದು ಲವಂಗ, ಮತ್ತು ಒಂದು ಹರಳು ಉಪ್ಪು ಅಗೆದು ಚಪ್ಪರಿಸುವುದರಿಂದ ಗುಣವಾಗುವುದು.

9. ಹಲ್ಲು ನೋವು ಶಮನಕ್ಕಾಗಿ: ಒಣ ಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಈ ಚೂರ್ಣಕ್ಕೆ ಉಪ್ಪಿನ ಪುಡಿ ಸೇರಿಸಿ ಹಲ್ಲು ತಿಕ್ಕುವುದರಿಂದ ನೋವು ಕಡಿಮೆಯಾಗುವುದು.

ಅಜೀರ್ಣವಾದಾಗ:

  • ಒಣ ಶುಂಠಿ ಮತ್ತು ಜೀರಿಗೆಯನ್ನು ಜಜ್ಜಿ ಪುಡಿ ಮಾಡಿ ನಾಲ್ಕು ಬಟ್ಟಲು ನೀರಿಗೆ ಬೆರೆಸಿ ಚೆನ್ನಾಗಿ ಕುದಿಸಿ ಶೋಧಿಸಿ ಸೇವಿಸಬೇಕು.
  • ನೂರು ಗ್ರಾಂ ಕೊತ್ತಂಬರಿ ಬೀಜ ಮತ್ತು ಇಪ್ಪತೈದು ಗ್ರಾಂ ನಷ್ಟು ಒಣಶುಂಠಿಯನ್ನು ಕೆಂಪಗೆ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಅಜೀರ್ಣವಾದಾಗ ಒಂದು ಬಟ್ಟಲು ಕುದಿಯುವ ನೀರಿಗೆ ಎರಡು ಚಮಚ ಚೂರ್ಣ ಮತ್ತು ಬೆಲ್ಲ ಬೆರೆಸಿ ಕುದಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ.
  • ಒಂದು ಅಂಗುಲ ಹಸಿ ಶುಂಠಿಯನ್ನು ನೀರಿನಲ್ಲೂ ಅರೆದು ಅದರ ರಸಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯಿರಿ.
  • ಊಟಕ್ಕೆ ಮುಂಚೆ ಶುಂಠಿ ಮತ್ತು ನಾಲ್ಕು ಹರಳು ಉಪ್ಪು ಸೇವಿಸಿದ್ದಲ್ಲಿ ಅಜೀರ್ಣ ನಿವಾರಣೆಯಾಗುತ್ತದೆ.
  • ಒಂದು ಟೀ ಚಮಚ ಒಣ ಶುಂಠಿಯ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ಒಂದು ವಾರದ ವರೆಗೆ ಸೇವಿಸಿದ್ದಲ್ಲಿ ಅರಿಶಿನ ಕಾಮಾಲೆ ದೂರವಾಗುತ್ತದೆ.