ಗಿಣ್ಣುಮಾಡುವ ವಿಧಾನ

0
2338

ಬೇಕಾಗುವ ಸಮಾಗ್ರಿಗಳು:

*ಹಸುವಿನ ಹಾಲು ½ ಲೀ

*ಬೆಲ್ಲ ¼ ಕೆ.ಜಿ

*ಕೊಬ್ಬರಿ ತುರಿ ಒಂದು ಚಿಕ್ಕ ಬೌಲ್

*ನೆನಸಿದ ಅಕ್ಕಿ ಅರ್ಧ ಬೌಲ್

*ಏಲಕ್ಕಿ

*ಹಾಲು 1 ಬೌಲ್

ಗಿಣ್ಣುಮಾಡುವ ವಿಧಾನ : ಹಸಿಹಾಲಲ್ಲಿ ಬೆಲ್ಲವನ್ನು ಅರ್ಧಗಂಟೆ ಮುಂಚಿತವಾಗಿ ನೆನೆಹಾಕಬೇಕು. ನಂತರ ನೆನಸಿದ ಅಕ್ಕಿ, ಕೊಬ್ಬರಿ ತುರಿ, ಏಲಕ್ಕಿ ಈ ಎಲ್ಲವನ್ನು ಸಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿದ ಮಿಶ್ರಣವನ್ನು ಗಿಣ್ಣದ ಹಾಲಿಗೆ ಮಿಶ್ರಣ ಮಾಡಬೇಕು. ಇದನ್ನು ಒಂದು ದೊಡ್ಡಪಾತ್ರೆಯಲ್ಲಿ ಅರ್ಧ ಲೀಟರ್ ನೀರು ಹಾಕಿ ಅದರಲ್ಲಿ ಈ ಮಿಶ್ರಣಮಾಡಿದ ಹಾಲಿನ ಪಾತ್ರೆಯನ್ನು ನೀರಿರುವ ಪಾತ್ರೆಯಲ್ಲಿಟ್ಟು ಬೆಯಿಸ ಬೇಕು ಅದು ಗಟ್ಟಿಯಾದ ನಂತರ ಗಿಣ್ಣು ತಯಾರಾಗಿರುತ್ತದೆ. ಇದು ಸವಿಯಲು ತುಂಬಾ ರುಚಿಯಾಗಿರುತ್ತದೆ.

*ಗಿಣ್ಣ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ದೇಹದಲ್ಲಿ ಬಿಳಿರಕ್ತ ಕಣಗಳು ಹೆಚ್ಚಾಗುತ್ತದೆ.