ಭಾರತದ ಸ್ವರ್ಗ ಎಂದೇ ಖ್ಯಾತಿ ಹೊಂದಿರುವ ಗೋವಾದ ಪ್ರಮುಖ ಟೂರಿಸ್ಟ್ ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತು?

0
2655

ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಕೆಲವು ಬೀಚುಗಳು ಗೋವದಲ್ಲಿವೆ. ಕಲಾಂಗೂಟೆ, ಕೋಲ್ವ, ದೋನಾ ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚುಗಳಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

ಗೋವಾ ತನ್ನ ರಿಸಾರ್ಟ್‌ ಮತ್ತು ಕಡಲತೀರಗಳಿಗೆ ಖ್ಯಾತವಾಗಿದೆ.

ಗೋವಾ ಭಾರತದಲ್ಲಿ ಅತಿ ಪ್ರಖ್ಯಾತ ಪ್ರವಾಸಿ ಸ್ಥಳಗಳಲ್ಲೊಂದು. ಇದು ಮುಂಚೆ ಪೋರ್ಚುಗಲ್‌ ದೇಶದ ವಸಾಹತು ಆಗಿತ್ತು. ಉತ್ಕೃಷ್ಟ ಕಡಲತೀರಗಳು, ಪೋರ್ಚುಗೀಸ್‌ ಚರ್ಚ್‌ಗಳು, ಹಿಂದೂ ದೇವಾಲಯಗಳು ಮತ್ತು ಅಭಯಾರಣ್ಯಗಳಿಗೆ ಗೋವಾ ಖ್ಯಾತವಾಗಿದೆ. ಬೊಮ್ ಜೀಸಸ್‌ ಬೆಸಿಲಿಕಾ, ಮಂಗುವೆಷಿ ದೇವಾಲಯ, ದೂಧ್‌ಸಾಗರ್‌ ಜಲಪಾತ ಮತ್ತು ಶಾಂತಾದುರ್ಗಾ ಗೋವಾದ ಪ್ರೇಕ್ಷಣೀಯ ಸ್ಥಳಗಳಾಗಿವೆ. ಇತ್ತೀಚೆಗೆ, ವ್ಯಾಕ್ಸ್‌ ವರ್ಲ್ಡ್‌ ಎಂಬ ಒಂದು ಮೇಣದ ವಸ್ತುಸಂಗ್ರಹಾಲಯವನ್ನು ಹಳೆ ಗೋವಾದಲ್ಲಿ ತೆರೆಯಲಾಯಿತು. ಇದು ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಹಲವು ಖ್ಯಾತನಾಮರ ಮೇಣ ಪ್ರತಿಕೃತಿಗಳನ್ನು ಹೊಂದಿದೆ.

ಗೋವಾ ಕಾರ್ನಿವಾಲ್‌ (ಜಾತ್ರೆ, ಉತ್ಸವ ಸಮಾರಂಭಗಳು) ವಿಶ್ವವಿಖ್ಯಾತವಾದುದು. ಬಣ್ಣ-ಬಣ್ಣದ ವೇಷಭೂಷಣಗಳು, ತೇಲಾಡುವ ಅಲಂಕಾರಿಕ ಬಂಡಿಗಳು ಮತ್ತು ಎಲ್ಲೆಡೆ ಮೊಳಗುವ ಸಂಗೀತ, ಸಂಭ್ರಮ ಹಾಗೂ ನೃತ್ಯ ಪ್ರದರ್ಶನಗಳನ್ನು ಈ ಜಾತ್ರೆ ಒಳಗೊಂಡಿರುತ್ತದೆ. ಮೂರು ದಿನ ನಡೆಯುವ ಈ ಉತ್ಸವ ಮೂರನೆ ದಿನವಾದ ಮಂಗಳವಾರದಂದು ಕಾರ್ನಿವಾಲ್‌ ಪೆರೇಡ್‌ (ಪಥಸಂಚಲನ), ಮೆರವಣಿಗೆಯೊಂದಿಗೆ ಅಂತ್ಯಗೊಳ್ಳುತ್ತದೆ.

ಉತ್ತಮಮವಾದ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಸರಳವಾಗಿ ತಲುಪಬಹುದಾದ ಗೋವಾ, ಮಕ್ಕಳಿಂದ ಹಿಡಿದು ವಯಸ್ಕರವರೆಗೂ ರಜೆ ಅಥವಾ ವಿರಾಮದ ಸಮಯವನ್ನು ಅತ್ಯಾನಂದದಿಂದ ಕಳೆಯಬಹುದಾದ ತಾಣವಾಗಿದೆ. ಶಾಂತಿ ಹಾಗು ನಿಧಾನಗತಿಯ ಜೀವನ ಶೈಲಿಗೆ ಹೆಸರುವಾಸಿಯಾಗಿರುವ ಗೋವಾ ದೇಶಿಯ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನು ವಿದೇಶಿಯರು ಇಲ್ಲಿರುವ ಸ್ವಾತಂತ್ರ್ಯ, ವಿಸ್ಮಯಭರಿತ ಜೀವನಶೈಲಿಗೆ ಮನಸೋಲದೆ ಇರಲಾರರು.ನೀವೆನಾದರು ಸಾಹಸ ಪ್ರವೃತ್ತಿಯವರಾಗಿದ್ದರೆ ಚಿಂತಿಸಲೆ ಬೇಡಿ. ಅವರಿಗೆಂದೆ ಹಲವಾರು ಸೌಲಭ್ಯಗಳು ಬೀಚ್ ಗಳಲ್ಲಿ ಲಭ್ಯವಿದ್ದು ಬೇಕಾದರೆ ಶ್ಯಾಕ (ಕಚ್ಚಾವಾಗಿ ನಿರ್ಮಿಸಲ್ಪಟ್ಟ ಪುಟ್ಟ ಕುಟಿರ ಅಥವಾ ಕ್ಯಾಬಿನ್)ಗಳನ್ನು ಬಾಡಿಗೆಗೆ ಪಡೆದು ಸ್ಥಳೀಯ ಸಂಸ್ಕೃತಿಯ ಅವಲೋಕನ ಮಾಡಬಹುದು.