ರುಚಿ ರುಚಿಯಾದ ಗರಂ ಗೋಬಿ ಮಂಚೂರಿ ನಿಮ್ಮ ಮನೆಯಲ್ಲಿ ತುಂಬಾ ಸುಲಭವಾಗಿ ರೆಡಿ ಮಾಡಿ ಸೇವಿಸಿ..!

0
4692

ಮನೆಯಲ್ಲಿ ಮಕ್ಕಳು ದೊಡ್ಡವರು ಎಲ್ಲರು ಇಷ್ಟಪಡುವ ಆಹಾರ ಇದು. ನೀವು ಸುಮ್ಮನೆ ಹೊರಗಡೆ ಹೋಗಿ ತಿಂದು ನಿಮ್ಮ ಅರೋಗ್ಯ ಹಾಳುಮಾಡಿಕೊಳ್ಳುವ ಬದಲು ನಿಮ್ಮ ಮನೆಯಲ್ಲಿಯೇ ನೀವು ಸುಲಭವಾಗಿ ನಿಮ್ಮ ರುಚಿಗೆ ತಕ್ಕಂತೆ ಮಾಡಿ ಸೇವಿಸಬಹುದು. ಇನ್ನು ಗರಂ ಗೋಬಿ ಮಂಚೂರಿ ಮಾಡುವ ವಿಧಾನ ಇಲ್ಲಿದೆ ನೋಡಿ.

source:Tourism and Food

ಗೋಬಿ ಮಂಚೂರಿಗೆ ಬೇಕಾಗುವ ಸಾಮಾನುಗಳು:

1 ಹೂ ಕೋಸು
1 ಕಪ್ ಮೈದಾ
4 ಟೇಬಲ್ ಸ್ಪೂನ್ ಜೋಳದ ಹಿಟ್ಟು
ಉಪ್ಪು ರುಚಿಗೆ,
1 ಟೇಬಲ್ ಸ್ಪೂನ್ ಹಚ್ಹ ಕಾರದ ಪುಡಿ,
2 ಈರುಳ್ಳಿ,
4 ರಿಂದ 5 ಹಸಿ ಮೆಣಸಿನ ಕಾಯಿ,
1 ಬೆಳ್ಳುಳ್ಳಿ, ಎಣ್ಣೆ,
ವಿನೆಗರ್
1 ಟೇಬಲ್ ಸ್ಪೂನ್ ಸೋಯ ಸಾಸ್
2 ಟೇಬಲ್ ಸ್ಪೂನ್ ಚಿಲ್ಲಿ ಸಾಸ್
3 ಟೇಬಲ್ ಸ್ಪೂನ್ ಟೊಮ್ಯಾಟೊ ಸಾಸ್
ಕೊತಂಬರಿ ಸೊಪ್ಪು,

ಇದನ್ನು ತಯಾರಿಸುವ ವಿಧಾನ:

source:Veg Recipes of India

ಹೂ ಕೋಸನ್ನು ಚೆನ್ನಾಗಿ ತೊಳೆದು,ಚಿಕ್ಕದಾಗಿ ಕತ್ತರಿಸಿ ಕೊಳ್ಳಬೇಕು.ಒಂದು ಪಾತ್ರೆ ಯಲ್ಲಿ 1 ಕಪ್ ಮೈದಾ ಉಪ್ಪು,ಹಚ್ಚ ಕಾರದ ಪುಡಿ,2 ಟೇಬಲ್ ಸ್ಪೂನ್ ಜೋಳದ ಹಿಟ್ಟು ಗೆ ನೀರು ಹಾಕಿ ಕಲೆಸಿ ಕೊಳ್ಳಬೇಕು.ಇದಕ್ಕೆ ಹುಕೊಸನ್ನು ಹಾಕಿ ಎಣ್ಣಿ ಯಲ್ಲಿ ಕರಿದು ಕೊಳ್ಳಬೇಕು.

source:Indian Healthy Recipes

ಈಗ ಒಲೆಯ ಮೇಲೆ ದೊಡ್ಡ ಬಾಣಲೆ ಯನ್ನು ಇಟ್ಟು,ಅದಕ್ಕೆ 2 ರಿಂದ 3 ಟೇಬಲ್ ಸ್ಪೂನ್ ಎಣ್ಣೆ ಹಾಕಬೇಕು,ನಂತರ ಅದಕ್ಕೆ ಚಿಕ್ಕದಾಗಿ ಕತ್ಹರಿಸಿದ ಈರುಳ್ಳಿ,ಹಸಿ ಮೆಣಸಿನ ಕಾಯಿ,ಬೆಳ್ಳುಳ್ಳಿ ಯನ್ನು ಹಾಕಬೇಕು,ನಂತರ ಇದಕ್ಕೆ 1 ಟೇಬಲ್ ಸ್ಪೂನ್ ವಿನೆಗರ್,೧ ಟೇಬಲ್ ಸ್ಪೂನ್ ಸೋಯ ಸಾಸ್,2 ಟೇಬಲ್ ಸ್ಪೂನ್ ಚಿಲ್ಲಿ ಸಾಸ್ ,3 ಟೇಬಲ್ ಸ್ಪೂನ್ ಟೊಮ್ಯಾಟೊ ಸಾಸ್,2 ಟೇಬಲ್ ಸ್ಪೂನ್ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.ಈಗ ಇದಕ್ಕೆ ಕರಿದ ಗೋಬಿ ಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.


ಇದಾದ ಮೇಲೆ ಗೋಬಿ ಮಂಚೂರಿ ಸೇವಿಸಲು ಸಿದ್ಧವಾಗಿರುತ್ತದೆ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಸೇವಿಸಿ.