ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಒಳ್ಳೆ ಗುಣಗಳನ್ನು ಹೇಳಿಕೊಡುವ ಅವಶ್ಯಕತೆ ಎಂದಿಗಿಂತ ಇಂದು ಜಾಸ್ತಿ ಇದೆ!!

0
865

ಗುಣಾತ್ಮಕ ಬೋಧನೆಯ ತುರ್ತು ಅಗತ್ಯ

ಶಿಕ್ಷಣದ ಪರಮ ಗುರಿಯೇ ಜ್ಞಾನ. ಈ ಜ್ಞಾನ ಮನುಷ್ಯನಲ್ಲಿಯ ಅಜ್ಞಾನವನ್ನು, ಕೇಡನ್ನು, ಅಸತ್ಯವನ್ನು ಹೊಡೆದೋಡಿಸುವುದೇ ಆಗಿದೆ. ಮನುಷ್ಯನನ್ನು ಪರಿಪೂರ್ಣ-ನನ್ನಾಗಿಸುವುದೇ ಶಿಕ್ಷಣದ ಧ್ಯೇಯ. ಆಧುನಿಕ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಸಹ ಒಬ್ಬ ವಿದ್ಯಾರ್ಥಿಗೆ ಬೋಧಿಸಿದ ವಿಷಯ ಅರ್ಥ ಮಾಡಿಸಲು ಸಾಧ್ಯವಾಗಲಿಲ್ಲ ಎಂದರೆ ಎತ್ತ ಸಾಗುತ್ತಿದೆ ನಮ್ಮ ಶಿಕ್ಷಣದ ಬೋಧನಾ ಪದ್ಧತಿ.? ಈ ರೀತಿಯ ಶಿಕ್ಷಣದಿಂದ ನಮ್ಮ ಯುವಜನತೆಯ ದಾರಿ ಯಾವ ದಿಕ್ಕಿನೆಡೆ ಹೋಗಬಹುದು ಎಂಬುದನ್ನು ಊಹಿಸಲೂ ಅಸಾಧ್ಯ. ನಿಜಕ್ಕೂ ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಹೊಸ ಬಗೆಯ ಬೋಧನಾ ಕ್ರಮ ಅಳವಡಿಸಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಖಂಡಿತಾ ಎದುರಾಗಿದೆ.

ನಮ್ಮಲ್ಲಿನ ಅಸಮಾನತೆ, ಶೋಷಣೆ, ಭ್ರಷ್ಟತೆ, ಅಪ್ರಾಮಾಣಿಕತೆಗಳು ಬೆಳೆದು ನಿಂತಿರುವ ಪರಿ ನೋಡಿದರೆ ಇಲ್ಲಿ ಶಿಕ್ಷಣ ಏನನ್ನು ಕಲಿಸಿದೆ, ಕಲಿಸುತ್ತಿದೆ ಎಂಬ ಅನುಮಾನ ಬರುತ್ತದೆ. ಇಂತಹುಗಳೆಲ್ಲಾ ಮನುಷ್ಯನ ಮೂಲಭೂತ ಗುಣಗಳ ಪ್ರಭಾವ ಎನ್ನುವುದಾದರೆ, ಸಮಾಜದ ಒಳಿತಿಗಾಗಿ ಅವನ್ನು ಮೀರಿ ನಿಲ್ಲುವಷ್ಟು ವಿವೇಕವನ್ನು ಶಿಕ್ಷಣ ನೀಡಬೇಕಿತ್ತಲ್ಲವೆ?

ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣದ ವ್ಯವಸ್ಥೆಯಿರಬೇಕು.ಪಠ್ಯಕ್ರಮ ಕೇಂದ್ರಿತ ಬೋಧನೆಶಿಕ್ಷಣ ಮತ್ತು ಬೋಧನೆ ಎಂದಾಕ್ಷಣ ಮೊದಲಿಗೆ ಕಣ್ಣಮುಂದೆ ಬರುವುದು ಒಬ್ಬ ಶಿಕ್ಷಕ ಅಥವಾ ಉಪನ್ಯಾಸಕ ಮತ್ತು ವಿದ್ಯಾರ್ಥಿ. ಇಲ್ಲಿ ವಿದ್ಯಾರ್ಥಿಯೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದಂತಹ ಪಠ್ಯಗಳನ್ನು ಕೇಂದ್ರವಾಗಿಟ್ಟುಕೊಂಡು ಬೋಧಿಸುವುದು ಶಿಕ್ಷಣ ವ್ಯವಸ್ಥೆಯ ಬದಲಾವಣೆಯಲ್ಲೊಂದು.

ಯಾವುದೇ ಪಠ್ಯ ವಿದ್ಯಾರ್ಥಿಗೆ ವಿದ್ಯಾರ್ಥಿಗಳ ಭವಿಷ್ಯದ ರೂಪುರೇಷೆಗಳನ್ನು ಸಿದ್ಧಪಡಿಸಲು ಸಾದ್ಯವಾಗದೇ ಇದ್ದಲ್ಲಿ ಅದನ್ನು ಬೋಧಿಸಿ ಪ್ರಯೋಜನವಾದರೂ ಏನು? ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಇಷ್ಟಪಡುವಂತಹ ತನ್ನ ಜೀವನವನ್ನು ಬದಲಾಯಿಸಿಕೊಳ್ಳಲು ಅಗತ್ಯವಿರುವ ಪೂರಕ ಪಠ್ಯಕ್ರಮವನ್ನು ಆಧರಿಸಿ ಬೋಧಿಸುವ ಶಿಕ್ಷಣ ಪ್ರಸ್ತುತ ಸಮಾಜಕ್ಕೆ ತೀರಾ ಅಗತ್ಯವಾಗಿದೆ.ಪ್ರಾಯೋಗಿಕ ಬೋಧನೆಶಿಕ್ಷಣದಲ್ಲಿ ಕೇವಲ ಪಠ್ಯಾಧಾರಿತ ಬೋಧನೆಯಷ್ಟೇ ವಿದ್ಯಾರ್ಥಿಯ ಮನಸ್ಸು ಮುಟ್ಟಲು ಸಾಧ್ಯವಿಲ್ಲ.