ಉತ್ತಮ ಜೀವನಕ್ಕೆ ಈ ಇಪ್ಪತ್ತು ಸೂತ್ರಗಳು..ಈ ಕ್ಷಣದಿಂದ ಪ್ರಾರಂಭಮಾಡಿ..

0
2784

1. ದಿನಾಲು 10 ರಿಂದ 30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ.10 ನಿಮಿಷಗಳ ಮೌನ ಆಚರಿಸಿ, ಕನಿಷ್ಠ 6 ಘಂಟೆಗಳ ಕಾಲ ನಿದ್ದೆ ಮಾಡಿ.!!

2. ದಿನಾಲೂ ಮಾಡುವ ಪ್ರಾರ್ಥನೆ, ಧ್ಯಾನವು ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಾಟವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.

3. ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.

4. ಹಗಲು ಧಾರಾಳವಾಗಿ ನೀರು ಕುಡಿಯಿರಿ. ರಾತ್ರಿ ಮಲಗುವಾಗ ನೀರು ಮಿತವಾಗಿರಲಿ.

5. ಮುಂಜಾನೆಯ ತಿಂಡಿ ರಾಜನಂತೆ ತಿನ್ನಿ, ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ, ರಾತ್ರಿ ಊಟ ಭಿಕ್ಷುಕನಂತೆ ಇರಲಿ.

6. ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.

7. ಜಾಸ್ತಿ ಮುಗುಳು ನಗಿ. ಹೆಚ್ಚೆಚ್ಚು ನಕ್ಕುಬಿಡಿ. ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.

8. ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.

9. ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕಳೇಯಬೇಡಿ. ಜೀವನ ಚಿಕ್ಕದು. ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ. ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.

daddys-mother-is-a-beautiful-world-4

10. ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರೊಡನೆ ಕಾಲ ಕಳೆಯಿರಿ.

11. ಎಲ್ಲಾ ವಾದಗಳನ್ನೂ ಗೆಲ್ಲಬೇಕಿಂದಿಲ್ಲ. ಸೋತು ಗೆದ್ದುಬಿಡಿ.

12. ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.

13. ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

14. ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.

15. ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂಪ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು. ಅವರಿಗೆ ಯಾವಾಗಲೂ ಸಮಯ ಕೊಡಿ.

16. ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.

17. ಸಿಟ್ಟು ತನ್ನ ವೈರಿ, ಶಾಂತಿ ಪರರ ವೈರಿ ಎಂಬುದನ್ನು ಎಂದಿಗೂ ಮರೆಯದಿರಿ.

18. ನನ್ನನ್ನು ದ್ವೇಷಿಸುವವರನ್ನು ದ್ವೇಷಿಸಲು ನನಗೆ ಸಮಯವಿಲ್ಲ, ಏಕೆಂದರೆ ನನ್ನನ್ನು ಪ್ರೀತಿಸುವವರ ಪ್ರೀತಿಯಲ್ಲಿ ನಾನು ತುಂಬಾ ಬ್ಯೂಜಿಯಾಗಿದ್ದೇನೆ. ಎಂಬುದು ನಿಮ್ಮ ಮನೋಧೋರಣೆಯಾಗಿರಲಿ.

19. ನೀವು ಬೇಯಿಸುವ ಅನ್ನದ ನೀರು ಅದು ನಿಮ್ಮ ಬೆವರಿನ ಹನಿಯಾಗಿರಬೇಕೆ ಹೊರತು, ಬೇರೆಯವರ ಕಣ್ಣೀರಾಗದಂತೆ ನೋಡಿಕೊಳ್ಳಿ.

20. ಪ್ರತಿ ದಿನವೂ ಇದು ನಮ್ಮ ಕೊನೆಯ ದಿನವೆಂದು ತಿಳಿದು ಗಳಿಸಬೇಕು, ಪ್ರತಿ ದಿನವೂ ಇದು ನಮ್ಮ ಮೊದಲ ದಿನವೆಂದು ತಿಳಿದು ಉಳಿಸಬೇಕು.