ನಿಮಗೆ ಅರಿವಿಲ್ಲದೆ ಬ್ಯಾಂಕ್ ನವ್ರು ಆ ಸೇವೆ ಈ ಸೇವೆ ಅಂತ ನಿಮ್ಮ ಖಾತೆಯಿಂದ ಹಣ ತೆಗೆದು ಕೊಳ್ಳುತ್ತಿದ್ದಾರೆ, ಎಚ್ಚರ ವಹಿಸಿ ಬ್ಯಾಂಕ್ ನವರನ್ನು ಸಂಪರ್ಕ ಮಾಡಿ..!!

0
1418

ಆಧುನಿಕ ಯುಗದಲ್ಲಿ ಎಲ್ಲವೂ ನಮ್ಮ ಕೈ ಬೆರಳಲ್ಲಿ ಸಿಕ್ಕು ಬಿಡುತ್ತದೆ. ನಿಮ್ಮ ಸ್ಮಾರ್ಟ್ ಫೋನ್​ ಹಾಗೂ ಇಂಟರ್​ನೇಟ್​ ಮೂಲಕ ನೀವು ಯಾವುದೇ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಇನ್ನು ಗ್ರಾಹಕರಿಗೆ ಬ್ಯಾಂಕ್​ ಹೇಗೆ ಕೆಲಸ ಮಾಡುತ್ತದೆ ಎಂಬುದೇ ಇನ್ನು ತಿಳಿಯದ ಹಾಗೇ ಆಗಿದೆ. ಇನ್ನು ರಿಸರ್ವ್​ ಬ್ಯಾಂಕ್​ ಗ್ರಾಹಕರ ಮೇಲೆ ಹೆಚ್ಚಿನ ಹೊಣೆ ಹಾಕುವುದನ್ನು ಬ್ಯಾಂಕ್​​​ಗಳಿಗೆ ನಿರ್ಭಂಧ ವಿಧಿಸಿದೆ. ಇನ್ನು ನಿಮ್ಮ ಖಾತೆಯಲ್ಲಿ ಗ್ರಾಹಕ ಕನಿಷ್ಠ ಉಳಿತಾಯ ಮೊತ್ತ ಇಡದೇ ಇದ್ದ ಕಾರಣದಿಂದ ಎಷ್ಟೋ ಬ್ಯಾಂಕ್​​ಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕಿವೆ. ಇನ್ನು ಕೆಲವು ಗ್ರಾಹಕರಿಗೆ ಬ್ಯಾಂಕ್​ಗೆ ಕುಂದುಕೊರತೆಗಳನ್ನು ನೀಡುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆ ಆಗಿ ಬಿಟ್ಟಿದೆ.

ಇನ್ನು ಉಳಿತಾಯ ಖಾತೆಗಳಲ್ಲಿ ಮೂರು ತಿಂಗಳಿಗೆ ಹಾಗೂ ತಿಂಗಳಿಗೆ ಇಷ್ಟು ಎಂದು ಹಣದ ಮೊತ್ತ ಗೊತ್ತು ಪಡಿಸಲಾಗಿರುತ್ತದೆ.

– ತಿಂಗಳ ಕನಿಷ್ಠ ಉಳಿಯಾ ಮೊತ್ತ ತಿಂಗಳು ಆರಂಭವಾಗಿ ಮುಗಿಯುವವರೆಗೂ ಇರತಕ್ಕದ್ದು

– ಇನ್ನು ತ್ರೈಮಾಸಿಕ ಕನಿಷ್ಠ ಮೊತ್ತವೂ ಸಹ ಇದೇ ತರನಾಗಿದ್ದು, ಇದಕ್ಕೂ ಸಹ ಇಷ್ಟ ಹಣ ಎಂದು ಫಿಕ್ಸ್​ ಮಾಡಿರುತ್ತಾರೆ.
ಸೂಚನೆ

– ಒಂದು ವೇಳೆ ಉಳಿತಾಯ ಖಾತೆ ಶೂನ್ಯ ರೂಪಾಯಿ ಆಗಿದ್ದಲ್ಲಿ, ಆ ಖಾತೆ ದಾರರ ಮೇಲೆ ದಂಡ ವಿಧಿಸದಂತೆ ರಿಸರ್ವ್​​ ಬ್ಯಾಂಕ್​ ಇತ್ತೀಚಿಗೆ ಬಿಡುಗಡೆ ಗೊಳಿಸಿದ ಸೂಚನೆಯಲ್ಲಿ ತಿಳಿಸಿದೆ.

– ಬ್ಯಾಂಕ್​​ಗಳಲ್ಲಿ ವಿವಿಧ ರೀತಿಯ ಖಾತೆಗಳು ಇರುತ್ತವೆ. ನೀವು ಖಾತೆಯನ್ನು ತೆರೆಯುವ ಮುನ್ನ ಒಮ್ಮೆ ಸೂಚನೆಗಳನ್ನು ಸರಿಯಾಗಿ ಓದಬೇಕು/

– ಇನ್ನು dormant account ಗಳ ಮೇಲೆ ದಂಡ ವಿಧಿಸುವುದನ್ನು ಆರ್​ಬಿಐ ನಿರ್ಬಂಧಿಸಿದೆ. (dormant account ಬ್ಯಾಂಕಿನಲ್ಲಿ ತೆರೆಯಲಾದ ಉಳಿತಾಯ ಖಾತೆ ತುಂಬ ತಿಂಗಳುಗಳಿಂದ ವಹಿವಾಟು ನಡೆಸದೆ ಇರೋವಂತಹ ಖಾತೆಗಳು)

ಆರ್​​ಬಿಐ ಸಲಹೆ

– dormant account ಖಾತೆಗಳ ಮೇಲೆ ದಂಡವಿಲ್ಲ

– ಗ್ರಾಹಕ ಹಣ ತೆಗೆಯುವುದು, ATM ಬಳಸದೆ ಇರೋದು, ಚೆಕ್​ ಕೊಡದೆ ಇದ್ದಾಗ, ಫೋನ್​ ಬ್ಯಾಂಕ್​, ಇಂಟರ್​​ನೆಟ್​​ ಮಾಡದೇ ಇದ್ದಲ್ಲಿ ಅಂತಹನ ಗ್ರಾಹಕನ ಖಾತೆಗಳ ಮೇಲೆ ದಂಡ ವಿಧಿಸುವಂತಿಲ್ಲ

– ಸುಮಾರು 24 ತಿಂಗಳಿನಿಂದ ವಹಿವಾಟು ನಡೆಸದ ಖಾತೆಗಳನ್ನು ನಿಷ್ಕ್ರೀಯಗೊಳಿಸುವುದು.

– ಗ್ರಾಹಕರು ತಮ್ಮ ಖಾತೆಯನ್ನು ನೇರವಾಗಿ ಬ್ಯಾಂಕ್​​ಗೆ ಬೇಟಿ ನೀಡಿ ರದ್ದು ಮಾಡಬಹುದು

– ಇಲ್ಲವೇ ಬ್ಯಾಂಕ್​​ ವೆಬ್​ಸೈಟ್​ಗೆ ಭೇಟಿ ನೀಡಿ, ದೂರು ನೀಡಬಹುದು

– ಗ್ರಾಹರ ಬ್ಯಾಂಕ್​ ಶಾಖೆಗೆ ತೆರಳಿ ತಮ್ಮ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಬಹುದು, ಅಲ್ಲದೆ ಅವರಿಂದ ದೂರು ಸ್ವಿಕರಿಸಿದ ಬಗ್ಗೆ ದಾಖಲೆ ಪಡೆಯಬಹುದು

– ಇನ್ನು ಗ್ರಾಹಕ ಬ್ಯಾಂಕ್​​ನ ಉನ್ನತ ಅಧಿಕಾರಿಯನ್ನು ಪತ್ರ ಮೂಲಕವೂ ಸಂಪರ್ಕಿಸಬಹುದು

– ನೀವು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬಾರದೆ ಇದ್ದಲ್ಲಿ ಅಥವಾ 30 ದಿನಗಳಲ್ಲಿ ಉತ್ತರ ಬರದೆ ಇದ್ದಲ್ಲಿ ಬ್ಯಾಂಕ್​ ಓಂಬುಡ್ಸ್ಮನ್ (Ombudsman) ರನ್ನು ಸಂಪರ್ಕಿಸಬಹುದು.

-ಇನ್ನು ನಿಮ್ಮ ದೂರಗಳನ್ನು ಆರ್​​ಬಿಐ ವೆಬ್​ಸೈಟ್​ನಲ್ಲೂ ದಾಖಲಿಸಬಹುದು.