ಮೋದಿ ಸರ್ಕಾರದ ನೂತನ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕ…

0
544

ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ವಿಶ್ವದ ಪ್ರಮುಖ ಹಣಕಾಸು ಮತ್ತು ಆರ್ಥಿಕ ತಜ್ಞರಲ್ಲೊಬ್ಬರೆನಿಸಿದ ಡಾ. ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಜುಲೈ ತಿಂಗಳಲ್ಲಿ ಹುದ್ದೆ ತೊರೆದ ಬಳಿಕ ಕೃಷ್ಣಮೂರ್ತಿ ಸುಬ್ರಮಣಿಯನ್‌ರನ್ನು ನೇಮಕ ಮಾಡಲಾಗಿದ್ದು, ಅವರು 3 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ. ಇವರು ಈಗಾಗಲೇ, ಸೆಬಿಯ ಸಾಂಸ್ಥಿಕ ಆಡಳಿತದ ತಜ್ಞರ ಸಮಿತಿಗಳಲ್ಲಿ ಹಾಗೂ ಆರ್‌ಬಿಐನ ಬ್ಯಾಂಕುಗಳ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕೃಷ್ಣಮೂರ್ತಿ ಸುಬ್ರಮಣಿಯನ್‌ ಇಂಡಿಯನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್ (ISB) ಹೈದರಾಬಾದ್‌ನಲ್ಲಿ ಹಣಕಾಸು ವಿಷಯದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಹಾಗೂ ಐಎಸ್‌ಬಿಯ ಸೆಂಟರ್ ಫಾರ್ ಅನಾಲಿಟಿಕಲ್ ಫೈನಾನ್ಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸುಬ್ರಮಣಿಯನ್‌ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಜುಲೈ ತಿಂಗಳಲ್ಲಿ ಹುದ್ದೆ ತೊರೆದ ಬಳಿಕ ಕೃಷ್ಣಮೂರ್ತಿ ಸುಬ್ರಮಣಿಯನ್‌ರನ್ನು ನೇಮಕ ಮಾಡಲಾಗಿದ್ದು, ಅವರು 3 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಹುದ್ದೆಗೆ ಕೃಷ್ಣಮೂರ್ತಿ ಅರ್ಹತೆ ಏನು?

ಚಿಕಾಗೋ ಬೂತ್‌ನಲ್ಲಿ ಪಿಎಚ್‌ಡಿ ಹಾಗೂ ಪ್ರಮುಖ ಐಐಟಿ – ಐಐಎಂನಲ್ಲಿ ಓದಿರುವ ಅವರು, ಬ್ಯಾಂಕಿಂಗ್, ಕಾರ್ಪೊರೇಟ್‌ ಆಡಳಿತ ಹಾಗೂ ಆರ್ಥಿಕ ನೀತಿಯಲ್ಲಿ ವಿಶ್ವದ ಪ್ರಮುಖ ತಜ್ಞರಲ್ಲಿ ಒಬ್ಬರು ಎಂಬ ಕೀರ್ತಿಗೆ ಗುರಿಯಾಗಿದ್ದಾರೆ. ಈಗಾಗಲೇ, ಸೆಬಿಯ ಸಾಂಸ್ಥಿಕ ಆಡಳಿತದ ತಜ್ಞರ ಸಮಿತಿಗಳಲ್ಲಿ ಹಾಗೂ ಆರ್‌ಬಿಐನ ಬ್ಯಾಂಕುಗಳ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ದೇಶದ ಸಾಂಸ್ಥಿಕ ಆಡಳಿತ ಮತ್ತು ಬ್ಯಾಂಕಿಂಗ್ ಸುಧಾರಣೆಗಳ ಪ್ರಮುಖ ಮುಖ್ಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

ಕೃಷ್ಣಮೂರ್ತಿ ಏನೆಲ್ಲಾ ಪರಿಣಿತಿ ಹೊಂದಿದ್ದಾರೆ?

ಸೆಬಿ ಸ್ಥಾಯಿ ಸಮಿತಿಗಳಲ್ಲಿ ಪರ್ಯಾಯ ಬಂಡವಾಳ ನೀತಿ, ಪ್ರಾಥಮಿಕ ಮಾರುಕಟ್ಟೆಗಳು, ಮಾಧ್ಯಮಿಕ ಮಾರುಕಟ್ಟೆಗಳು ಮತ್ತು ಸಂಶೋಧನೆಯ ವಿಭಾಗಗಳಲ್ಲಿ ಸದಸ್ಯರಾಗಿಯೂ ಕೃಷ್ಣಮೂರ್ತಿ ಸುಬ್ರಮಣಿಯನ್ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು, ತನ್ನ ಶೈಕ್ಷಣಿಕ ವೃತ್ತಿ ಜೀವನ ಆರಂಭಿಸುವ ಮುನ್ನ ಸುಬ್ರಮಣಿಯನ್ ನ್ಯೂಯಾರ್ಕ್‌ನ ಜೆ.ಪಿ. ಮಾರ್ಗನ್‌ ಚೇಸ್‌ನಲ್ಲಿ ಸಲಹೆಗಾರರಲ್ಲಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ಐಸಿಐಸಿಐ ಕಂಪನಿಯಲ್ಲೂ ಕೃಷ್ಣಮೂರ್ತಿ ಸುಬ್ರಮಣಿಯನ್ ಪ್ರಮುಖ ಹುದ್ದೆಯಲ್ಲಿದ್ದರು.

ಈ ಹಿಂದೆ ಅರವಿಂದ್ ಸುಬ್ರಮಣಿಯನ್‌ಗೂ ಮುನ್ನ ರಘುರಾಮ್ ರಾಜನ್ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಬಳಿಕ, 2013ರಲ್ಲಿ ಅವರು ಆರ್‌ಬಿಐ ಗವರ್ನರ್ ಆಗಿ ನೇಮಕವಾದ ಬಳಿಕ ಒಂದು ವರ್ಷ ಆರ್ಥಿಕ ಸಲಹೆಗಾರರ ಹುದ್ದೆ ಖಾಲಿ ಇತ್ತು. ನಂತರ, 2014ರಲ್ಲಿ ಅರವಿಂದ್ ಸುಬ್ರಮಣಿಯನ್ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕವಾಗಿದ್ದು, 2018 ರಲ್ಲಿ ಹುದ್ದೆ ತೊರೆದಿದ್ದರು. ಈಗ ಸ್ಥಾನಕ್ಕೆ ಡಾ. ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರನ್ನು ನೇಮಕ ಮಾಡಲಾಗಿದೆ.