ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳಲ್ಲಿ ಒಂದಾದ ಘ್ರಷ್ಣೇಶ್ವರ ಜ್ಯೋತಿರ್ಲಿಂಗದ ಮಹಿಮೆ.

0
2270

Kannada News | Karnataka Temple History

ಮಹಾರಾಷ್ಟ್ರದ ಶ್ರೀ ಘ್ರಷ್ಣೇಶ್ವರ ಜ್ಯೋತಿರ್ಲಿಂಗವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಮಹಾರಾಷ್ಟ್ರದ ಔರಂಗಾಬಾದಿನಿಂದ ೩೦ ಕಿ.ಮೀ., ವೆರೂಲಿನಿಂದ ೧೧ ಕಿ.ಮೀ.ದೂರದಲ್ಲಿದೆ. ಎಲ್ಲೋರಾ ಗುಹೆಗಳ ಅರ್ಧ ಕಿ.ಮೀ. ನಷ್ಟು ಸಮೀಪದಲ್ಲಿದೆ. ದೇವಾಲಯ ಬಹಳ ವಿಶಾಲವಾಗಿ ಭವ್ಯವಾಗಿದೆ. ಪುರಾತನ ಶೈಲಿಯ ಕೆತ್ತನೆಯಿಂದ ಕೂಡಿದೆ. ಪ್ರತಿಯೊಂದು ಕಲ್ಲೂ ಕೆತ್ತನೆಯಿಂದ ಕೂಡಿದೆ. ಆವರಣದಲ್ಲಿ ಸುಂದರವಾದ ಕೊಳವಿದೆ. ಕೆಂಪು ಕಲ್ಲಿನಿಂದ ನಿರ್ಮಿತವಾದ ದೇವಾಲಯ, ಐದು ಅಂತಸ್ತುಗಳುಳ್ಳ ಶಿಖರಹೊಂದಿದೆ.

ಘ್ರಷ್ಣೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಹೆಚ್ಚು ಇತಿಹಾಸ ಕಾಣುವುದಿಲ್ಲ. ಇದನ್ನು ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದಳು ಎಂದಷ್ಟೇ ಇದೆ. ಆದರೆ ದೇವಸ್ಥಾನ ಸುಂದರವಾಗಿದೆ. ಈ ದೇವಸ್ಥಾನಕ್ಕೆ ಹೋಗಲು ಔರಂಗಾಬಾದ್ ಸರಿಯಾದ ಸ್ಥಳ. ಇಲ್ಲಿಂದ ಈ ದೇವಸ್ಥಾನಕ್ಕೂ, ಎಲ್ಲೋರಾ ಗುಹೆಗಳಿಗೂ ದೌಲತಾಬಾದಿನ ಬಿವಿಕ ಮಕಬರಾ ನೋಡುವುದಕ್ಕೂ ಹೋಗಬಹುದು. ಈ ದ್ವಾದಶ ಜ್ಯೋತಿರ್ಲಿಂಗ ದರ್ಶನಗಳನ್ನು ಎಲ್ಲರೂ ನಮ್ಮ ಜೀವಿತ ಕಾಲದಲ್ಲಿ ಒಮ್ಮೆಯಾದರೂ ನೋಡಬೇಕು.

watch:

ಈ ದೇವಸ್ಥಾನಕ್ಕೆ ಸುಮಾರು 1,200 ವರ್ಷಗಳ ಇತಿಹಾಸವ ಇದೆ. 9ನೇ ಶತಮಾನದ ದುಷ್ಟಬುದ್ಧಿ ರಾಜನಿಂದ ಹಿಡಿದು ಚಂದ್ರಹಾಸನವರೆಗೆ ದೇವಸ್ಥಾನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿರುವ ಕುರಿತು ಉಲ್ಲೇಖವಿದೆ. ಆದರೆ, ದೇವಸ್ಥಾನದ ಅಭಿವೃದ್ಧಿಗೆ ಸಮಿತಿ ಸದಸ್ಯರ ದೇಗುಲದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಪ್ರಸ್ತುತ ಇದು ಪಾಳುಬಿದ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರ ಅನೇಕ ಬಾರಿ ಈ ಕುರಿತು ಸಮಿತಿ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಈ ದೇವಸ್ಥಾನದಲ್ಲಿ 9 ದೇವರುಗಳಿವೆ. ಶ್ರೀ ಮಹಾಕಾಲೇಶ್ವರ, ಮಾರ್ಕಂಡೇಶ್ವರ, ಗೋದಾವರಿಯ ತ್ರೈಯಂಬಕೇಶ್ವರ, ಡಾಕಿನಿಯ ಭೀಮಾಶಂಕರ, ಘೃಶ್ನೇಶ್ವರ, ಸೇತುಬಂದು ರಾಮೇಶ್ವರ, ಕೇದಾರನಾಥೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ಪಶುಪತಿನಾಥೇಶ್ವರ, ಅಮರನಾಥೇಶ್ವರ ಮೂರ್ತಿಳಿವೆ. ನಿತ್ಯವೂ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ವರಮಾನವಿದ್ದರೂ ದೇವಸ್ಥಾನ ಅಭಿವೃದ್ಧಿ ಸಮಿತಿ ಮಾತ್ರ ನಿರಾಸಕ್ತಿ ತೋರುತ್ತಿದೆ. ಇನ್ನು ಮುಂದಾದರೂ ಈ ದೇವಸ್ಥಾನ ಅಭಿವೃದ್ಧಿ ಹೊಂದಲಿ ಎಂದು ಆಶಿಸೋಣ.

Also Read: 700 ವರ್ಷಗಳ ಇತಿಹಾಸವಿರುವ ಪುರಾತನವಾದ ಮೈಸೂರಿನ ಶ್ರೀವೇಣುಗೋಪಾಲ ಸ್ವಾಮಿ ದೇಗುಲ ಒಮ್ಮೆ ಹೋಗಿ..!