ದೇಹಕ್ಕೆ ಶಕ್ತಿ ನೀಡುವ ಕಡ್ಲೆಕಾಯಿ ತಿನ್ನುತ್ತಿದ್ದೀರಾ

0
892

ಕಡ್ಲೆಕಾಯಿ ಟೈಂಪಾಸ್ ಗೆಂದು ತಿನ್ನುವುದಷ್ಟೆ ಅಲ್ಲ ಆಹಾರದ ಭಾಗವಾಗಿ ತೆಗೆದುಕೊಳ್ಳುವುದು ಒಳ್ಳೆಯದೆನ್ನುತ್ತಾರೆ ಪೋಷಕ ಆಹಾರ ತಜ್ಙರು. ಇವುಗಳಲ್ಲಿ ಬಿ.ಇ.ವಿಟಮಿನ್ ಗಳಿರುತ್ತವೆ.ಮೆಗ್ನೇಷಿಯಂ,ಕಬ್ಬಿಣಾಂಶದಂತಹ ಖನಿಜ ಲವಣಗಳುಪುಷ್ಕಳವಾಗಿ ಇವೆ. ರಕ್ತನಾಳಗಳನ್ನು ಆರೋಗ್ಯವಾಗಿರಿಸಿ ರಕ್ತ ಪ್ರಸರಣ ಕಾರ್ಯ ಚುರುಕುಗೊಳಿಸುವ ಪೈಟೋಕೆಮಿಕಲ್ಸ್ ನೊಂದಿಗೆ ಕೊಬ್ಬನ್ನು ಕಡಿಮೆಗೊಳಿಸುವ ಫೈಡೋಸ್ಪೆರಾಲ್ಸ್, ಫಿನಾಲ್ಸ್ ಇರುತ್ತವೆ.ಇದು ಹೃದಯ ಆರೋಗ್ಯಕ್ಕೆ ಉತ್ತಮ. ಕಡಲೆಕಾಯಿಗಳನ್ನುಕುದಿಸಿ ತಿನ್ನುವುದರಿಂದ ಹೋಟ್ಟು ತೆಗೆಯದೆ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ದಿನವೂ 50 ಗ್ರಾಂ ಕಡಲೆಕಾಯಿ ತಿನ್ನುವುದು ಒಳ್ಳೆಯದೆ.

ಕುರುಕಲು ತಿಂಡಿ ಹಾಗೂ ಅಡುಗೆಯಲ್ಲಿ ಬಹುವಾಗಿ ಉಪಯೋಗಿಸುವ ಕಡಲೆ ನಮಗೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ನೀಡುತ್ತದೆ. ಕಡಲೆಯನ್ನು ಯಾವ ರೀತಿಯಲ್ಲಿ ಬಳಸಿದರೂ ಅದನ್ನು ನೀರಿನಿಂದ ಸ್ವಚ್ಛವಾಗಿ ತೊಳೆದು ರಾತ್ರಿಯೆಲ್ಲ ನೆನೆಸಬೇಕು. ನೆನೆಸಿದ ಕಡಲೆ ಪ್ರೆಷರ್ ಕುಕ್ಕರ್ ನಲ್ಲಿ ಬೇಗ ಬೇಯುತ್ತದೆ. ಕಡಲಡಯಲ್ಲಿ ಕ್ಯಾಲರಿಗಳು ಕಡಿಮೆ ಇರುವುದಷ್ಟೇ ಅಲ್ಲ. ಅನೇಕ ಪ್ರಕಾರದ ಪೋಷಕಗಳು ಇರುತ್ತವೆ. ಶಾಕಾಹಾರಿಗಳಿಗೆ ಇದು ಬಲವರ್ಧಕ ಆಹಾರ. ಶಕ್ತಿ ನೀಡುವ ಕಾರ್ಬೋಹೈಡ್ರೆಟ್ಸ್ ಗಳು ಇದರಲ್ಲುಂಟು. ವಿಟಮಿನ್ ಇ. ಬಿ. ಸಿ.ಗಳ ಮೂಳೆ, ದಂತ ಸದೃಢತೆಗೆ ಅಗತ್ಯವಾದ ಕ್ಯಾಲ್ಸಿಯಂ ಮೆಗ್ನೀಷಿಯಂ ಇವೆ. ಬೆಳಿಗ್ಗೆ ಮೊಳಕೆಯೊಡೆದ ಕಡಲೆ ತಿಂದರೂ ನೆನೆಸಿ ಒಗ್ಗರಣೆ ಹಾಕಿಸಿಕೊಂಡೋ, ಬೆಯಿಸಿಯೋ ಅಡುಗೆಯಲ್ಲೋ ಸೂಪ್ ನಲ್ಲಿ ಸೇರಿಸಿ. ಒಟ್ಟಿನಲ್ಲಿ ಹೇಗೆ ತಿಂದರೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ.