ಗುಪ್ತರ ಕಾಲದ ವಿಜ್ಞಾನಿಗಳು

0
3543

1)ಧನ್ವಂತರಿ :- ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧ ವಿದ್ವಾಂಸನಾಗಿದ್ದನು. ಇವನು ಆಯುರ್ವೇದ ಶಾಸ್ತ್ರದ ತಜ್ಞನಾಗಿದ್ದನು. ಭಾರತದ ವೈದ್ಯಶಾಸ್ತ್ರದ ಪಿತಾಮಹ. ಆಯುರ್ವೇದ ನಿಘಂಟುವನ್ನು ವೈದ್ಯಶಾಸ್ತ್ರಕ್ಕೆ ಕೊಡುಗೆಯಾಗಿ ನೀಡಿದನು.

2)ಚರಕ:- ವೈದ್ಯವಿಜ್ಞಾನಿಯಾಗಿದ್ದನು. ‘ಚರಕ ಸಂಹಿತೆ’ ಎಂಬ ಗ್ರಂಥವನ್ನು ರಚಿಸಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.

3)ಶುಶ್ರುತ:- ಶಸ್ತ್ರ ಚಿಕಿತ್ಸಾ ವೈದ್ಯನಾಗಿದ್ದನು. ಭಾರತೀಯ ಪರಂಪರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನೀಡುವ ಕ್ರಮವನ್ನು ಮೊದಲು ತಿಳಿಸಿದವನು ಇವನು, ಅಂದಿನಕಾಲದಲ್ಲಿ ಸೈನಿಕರ ಚಿಕಿತ್ಸೆಗಾಗಿ ಶುಶ್ರುತನು ಪ್ರತ್ಯೇಕ ವಿಭಾಗ ಇತ್ತೆಂದು ತಿಳಿಸಿದ್ದಾನೆ. ಆಧುನಿಕ ಕಾಲದಲ್ಲಿ ನಡೆಸುವ ಶಸ್ತ್ರ ಚಿಕಿತ್ಸೆಗಳಂತೆ ಶುಶ್ರುನು ಶಸ್ತ್ರ ಚಿಕಿತ್ಸೆಯನ್ನು ನಡೆಸುವಲ್ಲಿ ಪ್ರಾವಿಣ್ಯತೆಯನ್ನು ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಗುರುತರವಾದ ಕಾಣಿಕೆ ನೀಡಿದ್ದಾನೆ.

4)ಅರ್ಯಭಟ:- ಈತನು ಖಗೋಳ ಮತ್ತು ಗಣಿತ ಶಾಸ್ತ್ರಗಳ ಪ್ರಖ್ಯಾತ ವಿಜ್ಞಾನಿಯಾಗಿದ್ದನು. ಇವನು ವರಹಮಿಹಿರನ ನಂತರದಲ್ಲಿ ಬರುವ ಪ್ರಮುಖ ವಿಜ್ಞಾನಿಯಾಗಿದ್ದನು. ಈತನು ಖಗೋಳ ಮತ್ತು ಗಣಿತ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಮಹತ್ತರವಾದುದು. ಈ ಕಾರಣಕ್ಕಾಗಿಯೇ ಸರ್ವಶ್ರೇಷ್ಠ ವಿಜ್ಞಾನಿಗಳಿಗೆ ಭಾರತ ಸರ್ಕಾರವು ಆರ್ಯಭಟ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಭಾರತದ ಪ್ರಥಮ ಉಪಗ್ರಹಕ್ಕೂ ಆರ್ಯಭಟನ ಹೆಸರಿಡಲಾಗಿದೆ. ಇವನು ಸೊನ್ನೆಯನ್ನು ಕಂಡುಹಿಡಿದನೆಂದು ಅಭಿಪ್ರಾಯಪಡಲಾಗಿದೆ. ಬೀಜಗಣಿತ ಪದ್ಧತಿಯನ್ನು ಭಾರತದಲ್ಲಿ ಮೊದಲಿಗೆ ತಿಳಿಸಿದವನಾಗಿದ್ದಾನೆ. ಸೂರ್ಯ ಹಾಗೂ ಚಂದ್ರಗ್ರಹಣಗಳಾಗುವುದು ರಾಹುವಿನಿಂದ ಅಲ್ಲ. ಪೃಥ್ವಿಯು ತನ್ನ ಕಕ್ಷೆಯಲ್ಲಿ ಪ್ರತಿದಿನವೂ ಸುತ್ತುತ್ತಾ ಸೂರ್ಯವನ್ನು ಪ್ರದಕ್ಷಿಣೆ ಮಾಡುವುದರಿಂದ ಎಂಬುದನ್ನು ಮನವರಿಕೆ ಮಾಡಿಕೊಟ್ಟನು.

5)ವರಾಹಮಿಹಿರ:- ಇವನು ಪ್ರಖ್ಯಾತ ಖಗೋಳಶಾಸ್ತ್ರಜ್ಞನಾಗಿದ್ದನು. ಪಂಚಸಿದ್ಧಾಂತಿಕಾ ಎಂಬ ಖಗೋಳ ಶಾಸ್ತ್ರದ ಗ್ರಂಥವನ್ನು ರಚಿಸಿದನು. ಈ ಗ್ರಂಥವನ್ನು ‘ಖಗೋಳಶಾಸ್ತ್ರದ ಬೈಬಲ್’ ಎಂದು ಕರೆಯುವರು. ಬೃಹತ್ ಸಂಹಿತಾ, ಬೃಹತ್ ಜಾತಕ, ಲಘು ಜಾತಕ ಎಂಬ ಗ್ರಂಥಗಳನ್ನು ಇವರು ರಚಿಸಿದ್ದಾನೆ. ಖಗೋಳಶಾಸ್ತ್ರ. ಜ್ಯೋತಿಷ್ಯ, ಭೂಗೋಳ, ಹವಮಾನ, ಮುಂತಾದ ಕ್ಷೇತ್ರಗಳಲ್ಲಿ ವಿದ್ವಾಂಸನಾಗಿದ್ದನು.