ದೊಡ್ಡ ಗೌಡರ ಚಾಣಾಕ್ಷ ನಡೆಗೆ ಬೆರಗಾದ ಮೋಹನ್ ಕಾತರಕಿ ! ಕಾನೂನು ಪರಿಣಿತರು ಹೊಳೆಯದಿದ್ದದ್ದು ದೇವೆಗೌಡರಿಗೆ ಹೊಳೆಯಿತು

0
23056

ತನ್ನ ಅಗಾಧವಾದ ರಾಜಕೀಯ ಅನುಭವದಿಂದ ಕರ್ನಾಟಕಕ್ಕೆ ಅದ್ಭುತವಾದ ಸಲಹೆಯನ್ನು ನೀಡಿ, ಕಾವೇರಿಯನ್ನು ಬಿಡದಂತೆ ಸೂಚಿಸಿ ಕನ್ನಡಿಗರ ಮನದಲ್ಲಿ ಶಾಶ್ವಾತವಾಗಿ ದೇವೆಗೌಡರು ಉಳಿದಿದ್ದಾರೆ.

ವಿಶೇಷ ಅಧಿವೇಶನ ಕರೆದು ಅಲ್ಲಿ ಸರ್ವಾನುಮತದಿಂದ ಕಾವೇರಿ ಬಿಡದಿರಲು ನಿರ್ಣಯ ಮಂಡನೆ ಮಾಡಿ ಅದನ್ನು ಅಂಗೀಕರಿಸುವ ಮೂಲಕ ಸೇಫ್ ಗೇಮ್ ಆಡುವುದಲ್ಲದೆ ನ್ಯಾಯಾಂಗ ನಿಂದನೆ ತಪ್ಪಿಸುವ ಒಂದು masterstroke ಎಂದು ಕಾನೂನು ಮತ್ತು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.

ವಿಧಾನ ಸಭೆಯಲ್ಲಿ ನಿರ್ಧಾರ ಮಂಡನೆ ಮಾಡುವುದರಿಂದ ಈ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸುವಂತಿಲ್ಲ. ಈ ಸಲಹೆ ಕಾನೂನು ಪಂಡಿತರಿಗೂ ಹೊಳೆದಿರಲಿಲ್ಲ. ಸಿದ್ಧಣ್ಣನ ಜೊತೆ ಮೋಹನ್ ಕಾತರಕಿ -ದೇವೆಗೌಡರನ್ನು ಭೇಟಿ ಮಾಡಿ ಕಾವೇರಿ ಸಮಸ್ಯೆಯ ಕುರಿತು ಸುಧೀರ್ಘವಾಗಿ ಚರ್ಚಿಸಿದ್ದರು. ಇದಕ್ಕೆ ದೇವೇಗೌಡರ ಹೇಳಿದ್ದು ಒಂದೇ ” ಈ ಕೂಡಲೇ ಅಧಿವೇಶನ ಕರೆಯರಿ, ಅಧಿವೇಶನದಲ್ಲಿ ಕೈಗೊಂಡ ನಿರ್ಣಯವನ್ನು ಕೈಗೊಂಡ ನಿರ್ಣಯವನ್ನು ಪ್ರಶ್ನಿಸುವಂತಿಲ್ಲ. ಅದು ‘ಹಕ್ಕುಚ್ಯುತಿ’ ಯಾಗುತ್ತೆ ಎಂದು ಹೇಳಿದ್ದು ಸನ್ಮಾನ್ಯ ದೇವೆಗೌಡ್ರು. House ನಲ್ಲಿ ಮಂಡನೆಯಾದ ನಿರ್ಧಾರವು ನ್ಯಾಯಾಂಗ ನಿಂದನೆಯಾಗುವುದಿಲ್ಲ ವೆಂದು ಕಾನೂನು ಪಂಡಿತರು ಹೇಳುತ್ತಾರೆ.

ಈ ಅಂಕಣ ಬರೆಯುವ ಹೊತ್ತಿಗೆ ‘ಕರಡು ಪ್ರತಿ’ ತಯಾರಾಗಿದೆ. ನಿಯಮ 159 ರ ಅಡಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ರವರು ನಿರ್ಣಯವನ್ನು ಮಂಡಿಸಲಿದ್ದಾರೆ. ಮುಖ್ಯ ಮಂತ್ರಿಗಳ ‘ಕುಚಿಕು’ ಗೆಳೆಯನಾದ ಎಚ್.ಡಿ.ರೇವಣ್ಣ ರವರ ಸಲಹೆಯ ಮೇರೆಗೆ: ‘ರಾಹು ಕಾಲ’ ವಾದ ಮೇಲೆ ಸದನ ಪ್ರಾರಂಭವಾಗಲಿದೆ. ಅಧಿವೇಶನದಲ್ಲಿ ಕೈಗೊಳ್ಳುವ ನಿರ್ಧಾರವನ್ನು ಯಾರಿಗೆ ಕಳುಹಿಸಬೇಕೆಂಬುದನ್ನು ಸ್ಪೀಕರ್ ಕಚೇರಿಯಲ್ಲಿ ಮು.ಮಂತ್ರಿಗಳು, ಸ್ಪೀಕರ್ ಕೋಳಿವಾಡ, ಜಗದೀಶ್ ಶೆಟ್ಟರ್, ಟಿ.ಬಿ.ಜಯಚಂದ್ರ, ರಮೇಶ್ ಕುಮಾರ್, ಈಶ್ವರಪ್ಪ ಸ್ಪೀಕರ್ ಕೊಠಡಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ.