ಹೇರ್ ಟ್ರೀಟಮೆಂಟ್ ಹೋಗುವ ಮುನ್ನ ಒಮ್ಮೆ ಇಲ್ಲಿ ನೋಡಿ ಹೇಗಿದ್ದವನು ಹೇಗಾದ ಅಂತ..!

0
996

ಹೇರ್ ಟ್ರೀಟಮೆಂಟ್ ಹೋಗುವ ಮುನ್ನ ಒಮ್ಮೆ ಇಲ್ಲಿ ನೋಡಿ ಹೇಗಿದ್ದವನು ಹೇಗಾದ ಅಂತ .ಖಾಸಗಿ ಸಂಸ್ಥೆಯ ಹೇರ್ ಇಂಟರನ್ಯಾಶನಲ್ ಸೆಂಟರ್ ಒಂದರಲ್ಲಿ ಯುವಕನೊಬ್ಬ ದುಬಾರಿ ಖರ್ಚು ಮಾಡಿ ಕೂದಲು ಕಸಿ ಮಾಡಿಸಿಕೊಂಡಿದ್ದು, ಚಿಕಿತ್ಸೆ ರಿಯಾಕ್ಷನ್ ಆಗಿ ಸಂಪೂರ್ಣ ಕೂದಲು ಕಳೆದುಕೊಂಡು ಕಂಗಾಲಾಗಿ ನನಗೆ ನ್ಯಾಯ ದೊರಕಿಸಿಕೊಡುವಂತೆ ಮಾಧ್ಯಮದ ಮೊರೆ ಹೋಗಿದ್ದಾನೆ.

ಧಾರವಾಡದ ತಾಲೂಕಿನ ಸೋಮಾಪೂರ ಗ್ರಾಮದ ನಿವಾಸಿ ಬಸವರಾಜ ಹೂಗಾರ ಮೋಸ ಹೋದ ಯುವಕ. ಈತ ವೃತ್ತಿಯಲ್ಲಿ ಛಾಯಾಗ್ರಾಹಕನಾಗಿದ್ದಾನೆ. 2016 ರಲ್ಲಿ ಹುಬ್ಬಳ್ಳಿಯಲ್ಲಿರುವ ಹೇರ್ ಇಂಟರನ್ಯಾಶನಲ್ ಸೆಂಟರ್ ನಲ್ಲಿ 60 ಸಾವಿರ ಹಣ ಖರ್ಚು ಮಾಡಿ ಕೂದಲು ಕಸಿ ಮಾಡಿಸಿಕೊಂಡಿದ್ದಾನೆ. ಆದರೆ ಈತನಿಗೆ ಕೂದಲು ಬೆಳೆಯುವ ಬದಲು ತಲೆ, ಮುಖ, ಮೈ ಕೈ ಮೇಲಿದ್ದ ಕೂದಲು ಸಹ ಉದುರಿ ಹೋಗಿವೆ.

ಇನ್ನೇನು ಮದುವೆ ಆಗಬೇಕೆಂದುಕೊಂಡಿದ್ದ ಯುವಕ ಇದೀಗ ನನ್ನ ಯಾರು ಮದುವೆಯಾಗ್ತಾರೆ ಎನ್ನುವ ಚಿಂತೆಯಲ್ಲಿ ಕುಳಿತಿದ್ದಾನೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಹೇರ್ ಸೆಂಟರ್‌ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಯುವಕ ಆಗ್ರಹಿಸಿದ್ದಾನೆ.

ಆದ್ರೆ ಈಬಗ್ಗೆ ಮಾತನಾಡಿರುವ ಹೇರ್ ಟ್ರೀಟಮೆಂಟ್ ನವರು ಇನ್ನು ಟ್ರೀಟಮೆಂಟ್ ಬಾಕಿ ಇದೆ ಎನ್ನುತ್ತಿದ್ದಾರೆ. ಈ ಹುಡುಗ ಜಾಹೀರಾತು ನಂಬಿ ಮೋಸ ಹೋಗಿರುವ ಯುವಕ ಎಲ್ಲ ಕೂದಲು ಕಳೆದುಕೊಂಡಿದ್ದಾನೆ. ನೋಡಿ ನೀವು ಸಹ ಇಂತಹ ಕೆಲಸಕ್ಕೆ ಹೋಗುವ ಮುನ್ನ ಎಚ್ಚರವಹಿಸಿ.