ಕೆಲವೇ ತಿಂಗಳಲ್ಲಿ ಭಾರತದ ಅರ್ಧದಷ್ಟು ATM -ಗಳು ಶಾಶ್ವತ ಬಾಗಿಲು ಮುಚ್ಚಲಿವೆ..

0
547

ಜನರಿಗೆ ಅನುಕೂಲವಾಗಲು ATM ವ್ಯವಸ್ಥೆ ಮಾಡಲಾಗಿತ್ತು. ದೇಶದ ಹಳ್ಳಿಗಳಲ್ಲಿವೂ ಕೂಡ ದಿನದ 24 ಘಂಟೆ ಏಟಿಎಂ ಸೇವೆ ದೊರಕುತ್ತಿತು, ಇದರಿಂದ ಜನರಿಗೆ ಬ್ಯಾಂಕ್-ನಲ್ಲಿನ ಅರ್ಧದಷ್ಟು ಕೆಲಸ ತಮ್ಮ ಊರುಗಳಲ್ಲೇ ಆಗುತ್ತಿತು. ಈ ಉಪಯೋಗದಿಂದ ಜನರು ಹಣದ ಚಿಂತೆ ಬಿಟ್ಟು ಅವರಿಗೆ ಬೇಕಾದ ಸಮಯದಲ್ಲಿ ಏಟಿಎಂ ಗೆ ತೆರಳಿ ಹಣ ಪಡೆಯುತ್ತಿದರು. ಇಂತಹ ಉತ್ತಮ ಸೇವೆಯಿಂದ ಪ್ರತಿಯೊಬ್ಬರೂ ಕೂಡ atm ಹೊಂದಿದರು. ಒಂದು ವಿಚಾರವಾಗಿ ನೋಡಿದರೆ ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಏಟಿಎಂ ಬಳಕೆ ಹೆಚ್ಚು ಮಹತ್ವ ಪಡೆದಿದೆ.

Also read: ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

ಹೇಗೆಂದರೆ ಹಳ್ಳಿಯಲ್ಲಿ ಓದಲು ಬರೆಯಲು ಬರದ ಜನರಿಗೂ ಕೂಡ ಏಟಿಎಂ ನೀಡುತ್ತಿದ್ದು. ಇದರಿಂದ ದೊಡ್ಡ ತಾಪತ್ರೆಯಾದ ಬ್ಯಾಂಕ್ ಗಳಿಗೆ ಹೋಗಿ ಬೇರೆಯವರ ಸಹಾಯದಿಂದ ಚಲನ್ ತುಂಬಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುವ ತಲೆನೋವು ತಪ್ಪಿದೆ. ಇದಷ್ಟೇ ಅಲ್ಲದೆ ಕಳ್ಳರ ಹಾವಳಿ ಕೂಡ ಕಡಿಮೆಯಾಗಿದೆ. ಇಷ್ಟೊಂದು ಅವಶ್ಯೇಕತೆ ಹೊಂದಿರುವ atm -ಗಳು ಸದ್ಯದಲ್ಲೇ ಸ್ಥಗಿತಗೊಳ್ಳುತ್ತಿರುವುದು ಜನರಿಗೆ ಆತಂಕ ಮೂಡಿಸಿದೆ.

ಬಾಗಿಲು ಮುಚ್ಚಲಿವೇಯಾ ಏಟಿಎಂ-ಗಳು?

Also read: ATM ಮಷೀನ್ ಮೂಲಕ ಇಷ್ಟೊಂದೆಲ್ಲ ವ್ಯವಹಾರ ಮಾಡಬಹುದೆಂದು ನೀವು ಊಹಿಸಿರಲೇ ಇಲ್ಲ!!

ಇತ್ತೀಚೆಗೆ ಎಟಿಎಂಗಳ ಸಾಪ್ಟ್​ವೇರ್​ ಹಾಗೂ ಹಾರ್ಡ್​ವೇರ್​ಗಳನ್ನು ಅಪ್​ಗ್ರೇಡ್​ ಮಾಡಲಾಗಿತ್ತು. ಇದರಿಂದ ಕೆಲವಷ್ಟು ದಿನಗಳ ಕಾಲ ಎಟಿಎಂಗಳಲ್ಲಿ ಸರಿಯಾಗಿ ಹಣ ಲಭ್ಯವಾಗುತ್ತಿರಲಿಲ್ಲ. ಇದಲ್ಲದೆ, ಎಟಿಎಂ ನಿಯಮಗಳಲ್ಲಿ ಸರ್ಕಾರ ಕೆಲ ಬದಲಾವಣೆ ಮಾಡಿತ್ತು. ಇದರಿಂದಾಗಿ ಇನ್ನೂ ಕೆಲ ಎಟಿಎಂಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಆ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿರುವ ಎಟಿಎಂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚಲಿವೆ. ಆದಕಾರಣ ಎಟಿಎಂ ವ್ಯವಸ್ಥೆಯಲ್ಲಿ ತಂದಿರುವ ಕೆಲ ಹೊಸ ಬದಲಾವಣೆಗಳಿಂದ ಮುಂದಿನ ಮಾರ್ಚ್​​ ವೇಳೆಗೆ ಬರೋಬ್ಬರಿ 1.13 ಲಕ್ಷ ಎಟಿಎಂಗಳು ಸ್ಥಗಿತಗೊಳ್ಳಲಿವೆ ಎಂದು ಎಟಿಎಂ ಉದ್ಯಮದ ಒಕ್ಕೂಟ ತಿಳಿಸಿದೆ.

ಮೂಲ ಕಾರಣವೇನು?

Also read: ಪೇಟಿಎಂ ಈಗ ಕೇವಲ ಮೊಬೈಲ್ ಆಪ್ ಮಾತ್ರ ಅಲ್ಲ, ಹೊಸ ಪೇಟಿಎಂ ಕಾರ್ಡ್-ನಿಂದ ATM ಗಳಲ್ಲಿ ಹಣಾನು ಡ್ರಾ ಮಾಡಬಹುದು, ಹೇಗೆ ಗೊತ್ತಾ?

ಎಟಿಎಂಗಳ ನಿರ್ವಹಣೆಗೆ ತಗಲುತ್ತಿರುವ ವೆಚ್ಛ ದಿನೇ ದಿನೇ ಹೆಚ್ಚುತ್ತಿದೆ. ಎಟಿಎಂ ಸೇವೆ ನೀಡುವವರಿಗೆ ಇದನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಎಟಿಎಂಗಳು ಸ್ಥಗಿತಗೊಳ್ಳಲು ಇದೂ ಒಂದು ಕಾರಣ. ಕೆಲವೊಂದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯವೂ ಏಟಿಎಂ’ ದರೋಡೆಯಾಗುತ್ತಿವೆ, ಕಳ್ಳರು ಹಣ ತೆಗೆಯಿವ ಬರದಲ್ಲಿ ಲಕ್ಷಾಂತರ ಬೆಲೆಯ atm ಯಂತ್ರ ಗಳನ್ನು ಹಾಳುಮಾಡುತ್ತಿರುವುದು ಒಂದು ಕಾರಣವಾಗಿದೆ.

ಇದರ ಪರಿಣಾಮಗಳೇನು?

Also read: ATM ನ ಪಿನ್ ನಂಬರ್ ಮರೆತು ಹೋದರೆ ಅಥವಾ ಪಿನ್ ಅನ್ನು ಬದಲಿಸುವುದು ಹೇಗೆ?? ATM ಕೇಂದ್ರದಲ್ಲೇ ಸುಲಭವಾಗಿ ಪಿನ್ ಅನ್ನು ಪಡೆದುಕೊಳ್ಳಬಹುದು ಹೇಗೆ ಎಂದು ನೋಡಿ..

ದೊಡ್ಡ ಮೊತ್ತದಲ್ಲಿ ಎಟಿಎಂ-ಗಳು ಮುಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಹಣದ ಕೊರತೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಭಾರತದಲ್ಲಿ 2.38 ಲಕ್ಷ ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದು. ಇನ್ನು ಕೆಲವೇ ತಿಂಗಳಲ್ಲಿ ಇದರ ಸಂಖ್ಯೆ ಅರ್ಧಕ್ಕೆ ಇಳಿಮುಖವಾಗಲಿದೆ ಎಂದು ಎಟಿಎಂ ಉದ್ಯಮದ ಒಕ್ಕೂಟ ತಿಳಿಸಿದೆ. ಈ ಬೆಳವಣಿಗೆಯಿಂದ ಸಾವಿರಾರು ಜನರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿ, ಜನರು ಹಣ ಪಡೆಯಲು ಮೊದಲಿನ ಕ್ರಮದಂತೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬರುವುದು ಹತ್ತಿರದಲ್ಲಿದೆ.