ಬೀದಿಯಲ್ಲಿ ರೊಟ್ಟಿ ಮಾರುವ ಈ ಯುವ ಮಹಿಳೆ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾಳೆ, ಆನಂದ್ ಮಹಿಂದ್ರ ಇವರ ಸಾಧನೆಗೆ ಏನಂದ್ರು ಗೊತ್ತಾ?

0
4373

ರಾಗಿ, ಜೋಳ, ಅಕ್ಕಿ ರೊಟ್ಟಿಯೊಂದಿಗೆ ಬಿಸಿಬೇಳೆಬಾತ್, ಟೊಮೊಟೋ ರೈಸ್, ಮೆಂತಿ ರೈಸ್, ತಟ್ಟೆ ಇಡ್ಲಿ ಜತೆಗೆ ವಾರಕ್ಕೊಮ್ಮೆ ರಾಗಿಮುದ್ದೆ ಇದು ಶಿಲ್ಪಾ ಅೆರ ಮೊಬೈಲ್ ಕ್ಯಾಂಟೀನ್ ನಲ್ಲಿ ಸಿಗುವ ಮೆನು.

ಕರಾವಳಿ ಜನರಿಗೆ ರೊಟ್ಟಿ ರುಚಿ ತೋರಿಸಿ ಜೈ ಎನಿಸಿಸಿಕೊಂಡಿರುವ ಶಿಲ್ಪಾ ಮೂಲತಃ ಹಾಸನದವರು. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ 2005ರಲ್ಲಿ ಮದುವೆಯಾಗಿ ಮಂಗಳೂರಿಗೆ ಬಂದ ಶಿಲ್ಪಾಗೆ ಒಂದು ಮಗುವಿದೆ. ಆದರೆ ಗಂಡ ಒಂದು ದಿನ ಹಣ ತರೋದಾಗಿ ಹೇಳಿ ಬೆಂಗಳೂರಿಗೆ ಬಂದವರು ವಾಪಸ್ ಹೋಗಲೇ ಇಲ್ಲ. ಪಿಯುಸಿ ಓದಿರುವ ಶಿಲ್ಪಾ ಮೂರು ವರಿಷದ ಮಗುವಿನೊಂದಿಗೆ ಅನಾಥೆಯಂತೆ ಬದುಕುವಂತಾಯ್ತು. ಜೀವನಕ್ಕೆ ಆದಾಯವಿಲ್ಲದೆ ಕೊರಗುತ್ತಿದ್ದರು.

ಆದರೆ ಶಿಲ್ಪಾಗೆ ತನ್ನ ತಾಯಿ ಹೇಳಿಕೊಟ್ಟ ಅಡುಗೆಯನ್ನೇ ಮೂಲವಾಗಿಟೇಟುಕೊಂಡು ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಿದರು. ಕೈಯಲ್ಲಿ ಹಣವಿಲ್ಲದೇ ಕನಸು ಕಾಣುವುದು ಸುಲಭವಲ್ಲ. ಹಣಕ್ಕಾಗಿ ಬ್ಯಾಂಕ್‌ಗಳಲ್ಲಿಗೆ ಅಲೆದಾಟ ಪ್ರಾರಂಭವಾಯಿತು. ಬ್ಕಾಂಕ್‌ಗಳಿಗೆ ಶ್ಯೂರಿಟಿ ನೀಡದಿದ್ದರೆ ಸಾಲ ಸಿಗುವುದಿಲ್ಲ ಗೊತ್ತಿಲ್ಲದ ಊರಿನಲ್ಲಿ ಯಾರು ಶ್ಯೂರಿಟಿ ನಿಲ್ಲುತ್ತಾರೆ. ಕಡೆಗೆ ಮಗನ ವಿದ್ಯಾಭ್ಯಾಸಕ್ಕೆಂದು ಬ್ಯಾಂಕಿನಲ್ಲಿಟ್ಟಿದ ಒಂದು ಲಕ್ಷ ರೂಪಾಯಿಯನ್ನೇ ಮೂಲ ಬಂಡವಾಳವನ್ನಾಗಿ ಸಿಕೊಳ್ಳಲು ನಿರ್ಧರಿಸಿದರು ಶಿಲ್ಪಾ. ಎಲ್ಲವೂು ಸೇರಿ ಒಂದು ಬೊಲೆರೊ ಗಾಡಿ ತೆಗೆದುಕೊಂಡು ಜತೆಗೆ ಮಹಿಳಾ ಸ್ವಸಹಾಯ ಸಂಘದ ನೆರವು ಅದನ್ನು ಮೊಬೈಲ್ ಕ್ಯಾಂಟೀನ್ ಮಾಡಲು ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡರು. ಬಯಲು ಸೀಮೆಯ ರೊಟ್ಟಿಗಳು ಮಂಗಳೂರಿಗರ ಮನ ಗೆದ್ದಿತು. ಈ ಕ್ಯಾಂಟೀನ್ ಗೆ ಹಳ್ಳಿ ಮನೆ ರೋಟಿಸ್ ಎಂದು ಹೆಸರಿಸಿದರು.

ಮೊದಲು ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ಬಳಿ ಮೊದಲು ಆರಂಭಿಸಿದ್ದರು. ಅಲ್ಲಿ ಕೆಲವು ಅಡಚಣೆಗಳು ಬಂದ ನಂತರ ಅಲ್ಲಿಂದ ಮಂಗಳಾ ಸ್ಟೇಡಿಯಂ ಬಳಿಯ ಈಜು ಕೊಳದ ಪಕ್ಕಕ್ಕೆ, ಅಲ್ಲಿಂದ ಈಗ ಮಣ್ಣಗುಡ್ಡೆಯ ಸಂಘ ನಿಕೇತನಕ್ಕೆ ಹೋಗುವ ದಾರಿ ಪಕ್ಕಕ್ಕೆ ಶಿಫ್ಟ್ ಆದರು.

ಸಂಜೆ 5 ಗಂಟೆಯಿಂದ ರಾತ್ರಿ 10.00ರ ತನಕ ಕ್ಯಾಂಟೀನ್‌ನಲ್ಲಿ ಮಲೆನಾಡ ರೊಟ್ಟಿಗಳನ್ನು ತಯಾರಿಸಿ ಕೊಡುವ ಶಿಲ್ಪಾ ಅವರ ದಿನಚರಿ ಬೆಳಗ್ಗೆ 5.00ಕ್ಕೆ ಪ್ರಾರಂಭವಾಗುತ್ತದೆ. ಬೆಳಗ್ಗೆ ಮಾರುಕಟ್ಟೆಗೆೆ ಹೋಗಿ ಬೇಕಾದ ತರಕಾರಿ ತಂದು ಮನೆಯಲ್ಲಿ ಬೇಕಾದ ಪದಾರ್ಥಗಳನ್ನು ಮಾಡಿಕೊಳ್ಳುವ ಇವರು ಸಂಜೆ ಹೊತ್ತಿಗೆ ಎಲ್ಲವನ್ನು ತಯಾರಿ ಮಾಡಿಕೊಂಡು ಬರುತ್ತಾರೆ.

ಶಿಲ್ಪಾ ಅವರ ರೊಟ್ಟಿಯ ರುಚಿಗೆ ಇಲ್ಲಿಯ ಎಲ್ಲರು ಫಿದಾ ಅಗಿದ್ದಾರೆ. ಡಾಕ್ಟರ್‌ಗಳು, ಬಿಲ್ಡರ್‌ಗಳು, ಉದ್ಯ ಮಿಗಳು ಸೇರಿದಂತೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯಿರುವ ಎಲ್ಲರು ಶಿಲ್ಪಾ ಅವರ ರಾಗಿಮದ್ದೆ, ಜೋಳದ ರೊಟ್ಟಿಗೆ ಮಾರುಹೋಗಿದ್ದಾರೆ. ಭಾನುವಾರ ಮಾತ್ರ ಕೊಡುತ್ತಿದ್ದ ರಾಗಿ ಮುದ್ದೆಯನ್ನು ಗ್ರಾಹಕರ ಒತ್ತಾಯದ ಮೇರೆಗೆ ಈಗ ಬುಧವಾರವೂ ನೀಡುತ್ತಿದ್ದಾರೆ.

ಖಡಕ್ ಚಟ್ನಿಯ ಖದರ್ ಶಿಲ್ಪಾ ಅವರ ಕ್ಯಾಂಟೀನ್‌ನಲ್ಲಿ ಸಿಗುವ ಖಡಕ್ ಚಟ್ನಿ ಎಲ್ಲರಿಗೂ ಫೇವರಿಟ್. ರೊಟ್ಟಿಯೊಂದಿಗೆ ಖಡಕ್ ಚಟ್ನಿ. ಈ ಚಟ್ನಿಯ ರೆಸಿಪಿಯನ್ನು ಮಂಗಳೂರಿನ ಅನೇಕ ಹೋಟೆಲ್‌ಗಳು, ಗ್ರಾಹಕರು ಕೇಳಿದ್ದರೂ ಶಿಲ್ಪ ಅವರು ಇದರ ಗುಟ್ಟನ್ನು ಯಾರಿಗೂ ಬಿಟ್ಟುಕೊಡಲಿಲ್ಲ. ಜತೆಗೆ ತಟ್ಟೆ ಇಡ್ಲಿಗೆ ಇವರು ನೀಡುವ ಹುರಿಕಡ್ಲೆ ಚಟ್ನಿಯೂ ತುಂಬಾ ಫೇಮಸ್.

ಹಾಸನದ ಹಿಟ್ಟು ಶಿಲ್ಪಾ ಅವರು ರೊಟ್ಟಿಗಾಗಿ ತಮ್ಮ ತವರು ಹಾಸನದಿಂದಲೇ ಅಕ್ಕಿ ಮತ್ತು ಜೋಳದ ಹಿಟ್ಟನ್ನು ತರಿಸುತ್ತಿದ್ದಾರೆ. ಗುಣಮಟ್ಟದ ಆಹಾರ ನೀಡಬೇಕು ಎನ್ನುವ ಉದ್ದೇಶದಿಂದ ಯಾವುದೇ ಕಲಬೆರಕೆ ಇಲ್ಲದ ವಿಶೇಷವಾದ ಹಿಟ್ಟನ್ನು ತರಿಸಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಸವಿಯಾದ ರೊಟ್ಟಿಯನ್ನು ನೀಡಲು ಸಾಧ್ಯವಾಗುತ್ತಿದೆ ಎನ್ನುವುದು ಇವರ ಅಭಿಪ್ರಾಯ.

ಆದರೆ ಈಗ ಹೊಸ ಸುದ್ದಿ ಏನೆಂದರೆ, ಮಹೀಂದ್ರಾ ಕಂಪೆನಿಯ ಮಾಲೀಕರಾದ ಆನಂದ ಮಹಿಂದ್ರಾ ಅವರು ಶಿಲ್ಪಾರ ಯಶಸ್ವಿ ಕಥೆ ಅಂತರ್ಜಾಲದಲ್ಲಿ ಗಮನಿಸಿದ್ದು, `ಶಿಲ್ಪಾ ಅವರು ಇನ್ನೊಂದು ಮೊಬೈಲ್ ಕ್ಯಾಂಟೀನ್ ತೆರೆಯಲಿಚ್ಚಿಸಿದರೆ ಅವರಿಗೆ ಬೊಲೆರೋ ವಾಹನ ಕೊಡುವ ಮೂಲಕ ನಾನೂ ಅವರ ಉದ್ದಿಮೆಯಲ್ಲಿ ಹೂಡಿಕೆ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಬೃಹತ್‌ ಉದ್ಯಮಿಯೊಬ್ಬರು ಸಾಮಾನ್ಯರ ಬಗ್ಗೆ ಟ್ವೀಟ್‌ ಮಾಡಿರುವುದು ಶಿಲ್ಪಾ ಅವರು ಮತ್ತೆ ಜನಪ್ರಿಯತೆ ಪಡೆಯುವಂತೆ ಮಾಡಿದೆ.

ಮಹಿಳೆಯಾಗಿ ಸ್ವಾವಲಂಬಿ ಜೀವನ ಮಾಡಿ ಯಶಸ್ವಿಯಾಗಿರುವುದು ಅತೀವ ಖುಷಿ ತಂದಿದೆ. ಶಿಲ್ಪಾರ ಯಶಸ್ಸಿನಲ್ಲಿ ಬೊಲೊರೋದ ಪಾತ್ರವೂ ಇದೆ ಎಂಬುದನ್ನು ಕೇಳಿ ಸಂತೋಷ ಇಮ್ಮಡಿಯಾಗಿದೆ. ಇದಕ್ಕಾಗಿಯೇ ಶಿಲ್ಪಾಗೆ ಮತ್ತೊಂದು ಕ್ಯಾಂಟೀನ್ ತೆರೆಯಲು ಪ್ರೋತ್ಸಾಹದ ನುಡಿಗಳನ್ನಾಡಿ ಟ್ವೀಟ್ ಮಾಡಿದ್ದಾರೆ. ಅವರ ಈ ನಿಲುವಿಗೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಲ್ಪಾ ಕೂಡಾ ಆನಂದ್ ಮಹೀಂದ್ರಾದ ಪ್ರೋತ್ಸಾಹದ ಮಾತುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟೊಂದು ಬ್ಯುಸಿಯಿದ್ದರೂ ಜನಸಾಮಾನ್ಯರ ಕಡೆಗೂ ದೃಷ್ಟಿ ಹಾಯಿಸಿದ್ದಾರೆಂಬುದೇ ನನಗೆ ನಂಬಲಾಗುತ್ತಿಲ್ಲ. ಅವರಿಂದ ಇನ್ನೂ ಕರೆ ಬಂದಿಲ್ಲ. ಹಾಗೇನಾದರೂ ಅವರು ಮಾತನಾಡಿದರೆ ನಾನು ಇನ್ನೊಂದು ಕ್ಯಾಂಟೀನ್ ತೆರೆಯಲು ರೆಡಿ ಎಂದಿದ್ದಾರೆ ಶಿಲ್ಪಾ.