ಸೋಹನ ಹಲ್ವಾ ಮಾಡುವ ವಿಧಾನ
ಹಲ್ವಾಗಳಲ್ಲಿ ತುಂಬಾವಿಧ ವಿಧವಾದ ಹಲ್ವಾಗಳು ಇವೆ, ಕಾಶಿ ಹಲ್ವ ಶೇಂಗಾ ಸಕ್ಕರೆ ಹಲ್ವ ದುಬಾಯಿ ರಾಮ್ ಹಲ್ವ ಕೊಬ್ಬರಿ ಹಲ್ವ ಮಂಡಕ್ಕಿ ಹಲ್ವ ಹಾಲು ತುಪ್ಪದ ಹಲ್ವ ಗಜ್ಜರಿ/ಕ್ಯಾರೆಟ್ ಹಲ್ವ ಬೂದು ಕುಂಬಳಕಾಯಿ/ ಸೀಮೆ ಬದನೆಕಾಯಿ ಹಲ್ವ ಅವಲಕ್ಕಿ ಹಲ್ವ ಟೊಮೆಟೊ ಹಲ್ವ. ಇವುಗಳಲ್ಲಿ ಅಜ್ಮೀರ್, ರಾಜಸ್ಥಾನದ ಪ್ರಸಿದ್ಧ ಖಾದ್ಯವಾಗಿದೆ.
ಬೇಕಾಗುವ ಸಾಮಗ್ರಿಗಳು:
- 1ಕೆ.ಜಿ. ಕಾರ್ನ್ ಫ್ಲೋರ್,
- 1 ಕೆ.ಜಿ. ಸಕ್ಕರೆ,
- 1 ಕೆ.ಜಿ. ತುಪ್ಪ,
- 1ಕಪ್ ಹಾಲು,
- 100 ಗ್ರಾಂ ಬಾದಾಮಿ,
- 100 ಗ್ರಾಂ ಪಿಸ್ತಾ,
- ಮತ್ತು 1ಟೇಬಲ್ ಸ್ಪೂನ್ ಕೇಸರಿ ಪುಡಿ.
ಮಾಡುವ ವಿಧಾನ:
2 ಕಪ್ ನೀರಿನಲ್ಲಿ ಕಾರ್ನಫ್ಲೋರನ್ನು ಹಾಕಿ ನೆನೆಯಲು ಬಿಡಬೇಕು. ಅದೇ ನೀರಿಗೆ ಕೇಸರಿ ಪುಡಿಯನ್ನು ಹಾಕಬೇಕು. 3ಕಪ್ ನೀರಿನೊಳಗೆ ಸಕ್ಕರೆ ಹಾಕಬೇಕು. ಇದಕ್ಕೆ ಹಾಲನ್ನು ಬೆರೆಸಿ 5 ನಿಮಿಷ ಕುದಿಯಲು ಬಿಡಬೇಕು. ಕಾರ್ನಫ್ಲೋರ್ ನ ಮಿಶ್ರಣವನ್ನು ಇದರೊಂದಿಗೆ ಬೆರೆಸಬೇಕು. ಅದು ದಪ್ಪ ಅಗುತ್ತಿರುವಾಗ ಸ್ವಲ್ಪ ಸ್ವಲ್ಪವಾಗಿ ಎಣ್ಣೆಯನ್ನು ಹಾಕುತ್ತಾ ತಿರುಗಿಸುತ್ತಿರಬೇಕು. ಅದು ತಳ ಹಿಡಿಯದಂತೆ ಗಟ್ಟಿಯಾಗುವವರೆಗೂ ತಿರುಗಿಸಬೇಕು.
ನಂತರ ಬಾದಾಮಿ ಮತ್ತು ಪಿಸ್ತಾ ಇದರೊಂದಿಗೆ ಬೆರೆಸಬೇಕು. ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸವರಿ ಈ ಮಿಶ್ರಣವನ್ನು ಹಾಕಿ ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ನಂತರ ಸವಿದು ಆನಂದಿಸಿ.