ಸುಖ ಜೀವನಕ್ಕೆ ೫ ಸರಳ ಸೂತ್ರಗಳು

0
1842

Kannada News | Karnataka Achiecers

ಸುಖ ಜೀವನ ಯಾರಿಗೆ ಬೇಡ ಹೇಳಿ? ಎಲ್ಲರೂ ನೆಮ್ಮದಿಯ ಆನಂದಭರಿತ ಜೀವನ ತಮ್ಮದಾಗಬೇಕೆಂದು ಆಶಿಸುವುದು ಸಹಜ. ನಾವು ದೂರದ ಬಾಹ್ಯ ಸುಖವನ್ನು ಅರಸುತ್ತ ನಿತ್ಯಜೀವನದಲ್ಲಿ ಸಿಗುವ ಸುಖದ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಈ ಕೆಳಗಿನ ಸೂತ್ರಗಳನ್ನು ಪಾಲಿಸಿದ್ದಲ್ಲಿ ಸುಖ ಸಮೃದ್ಧ ಜೀವನ ನಿಮ್ಮದಾಗುವುದರಲ್ಲಿ ಸಂಶಯವೇ ಇಲ್ಲ.

ಹ್ಯಾಪಿ ಲೈಫ್ ರೂಲ್ # 1: ನಂಬಿಕೆ

source: s-media-cache-ak0.pinimg.com

ನೀವು ಭಯದಿಂದ ಆಚೆ ಬಂದು ನಿಮ್ಮ ಜೀವನದಲ್ಲಿ ನಂಬಿಕೆ ಇಟ್ಟಲ್ಲಿ ಸಮೃದ್ಧ ಜೀವನ ನಿಮ್ಮದಾಗುತ್ತದೆ. ಭಯ ಮತ್ತು ನಂಬಿಕೆಗಳು ಇನ್ನು ಸಂಭವಿಸದ ಭವಿಷ್ಯವನ್ನು ಸೃಷ್ಟಿಸುತ್ತವೆ. ಭಯವು ಜೀವನವನ್ನು ಅಭದ್ರತೆಯೊಡೆಗೆ ಕೊಂಡೈದರೆ ನಂಬಿಕೆಯು ಬದುಕಿಗೆ ಭದ್ರತೆ, ಸಂತೋಷ ಮತ್ತು ನೆಮ್ಮದಿಯನ್ನು ನೀಡುತ್ತದೆ.ನೀವು ಭಯದಿಂದ ಹೊರಬಂದು ನಂಬಿಕೆಯಡಿ ನಿಮ್ಮ ಜೀವನವನ್ನು ರೂಪಿಸಿದಾಗ ಅದು ಹೆಚ್ಚು ಕಲಾತ್ಮಕ ಮತ್ತು ಶ್ರೀಮಂತವಾಗುತ್ತದೆ.

ಹ್ಯಾಪಿ ಲೈಫ್ ರೂಲ್ # 2: ಪ್ರಯತ್ನಿಶೀಲರಾಗಿ

source: media.licdn.com

ನಿರಂತರವಾಗಿರುವುದು ಯಶಸ್ಸಿನ ದೊಡ್ಡ ಕೀಲಿಗಳಲ್ಲಿ ಒಂದಾಗಿದೆ. ನೀವು ಮುಂದುವರಿಯುತ್ತಲೇ ಹೋಗುತ್ತಿದ್ದರೆ  ಅಂತಿಮವಾಗಿ ನೀವು ಬಯಸುವ ತಾಣವನ್ನು ತಲುಪುತ್ತೀರಿ. ಯಶಸ್ವಿ, ಸಂತೋಷದ ಜೀವನಕ್ಕಾಗಿ ನೀವು ಸಕಾರಾತ್ಮಕ ಚಿಂತನೆಯ ಜೊತೆ ಜೊತೆಗೆ ನಿರಂತರ ಕ್ರಿಯೆಯನ್ನು ಮಾಡಿದ್ದಲ್ಲಿ ನಿಮ್ಮ ಕನಸುಗಳು ನನಸಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಪ್ರಟಿಯೊಂದು ವೈಫಲ್ಯದ ಹಿಂದೆ ಸಫಲತೆ ಇದ್ದೆ ಇರುತ್ತದೆ. ಸೋತನೆಂದು ಕುಗ್ಗದೆ ಛಲ ಬಿಡದೆ ನಿರಂತರವಾಗಿ ಮುನ್ನುಗಿದ್ದಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಹ್ಯಾಪಿ ಲೈಫ್ ರೂಲ್ # 3: ಜೀವನವನ್ನು ಸರಳವಾಗಿರಿಸಿ

source: orig00.deviantart.net

ದೊಡ್ಡ ದೊಡ್ಡ ಸುಖಗಳ ಬೆನ್ನಟ್ಟಿ ಚಿಕ್ಕ ಪುಟ್ಟ ಖುಷಿಯನ್ನು ನಾವುಗಳು ಕಲರೆಡೂ ಕೊಳ್ಳುತ್ತೇವೆ. ನಿಮಗೆ ಇಷ್ಟವಾದಂತ ಕೆಲಸ ಅಥವಾ ವ್ಯಕ್ತಿಗಳಿಗೆ ಸಮಯ ಮೀಸಲಿಡಿ. ದಿನಕ್ಕೆ ಹತ್ತು ನಿಮಿಷ ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಕಾಲಹರಣ ಮಾಡುವುದೋ , ಹತ್ತಿರದ ಸ್ಥಳಗಳಿಗೆ ಭೇಟಿ ನೀಡುವುದೋ ಮಾಡಿದಾಗ ಮನಸ್ಸು ಮುದಗೊಳ್ಳುತ್ತದೆ. ಈ ಕ್ಷಣಗಳನ್ನು ಸಂಪೂರ್ಣ ಅನುಭವಿಸಿದಾಗ ಗುರಿಯೊಂದೇ ಅಲ್ಲ ಕ್ರಮಿಸುವ ಹಾದಿಯು ನಿಮಗೆ ಸಂತೋಷವನ್ನು ನೀಡಬಲ್ಲದು!!!

ಹ್ಯಾಪಿ ಲೈಫ್ ರೂಲ್ # 4: ಸಮಸ್ಯೆ ಬಂದಾಗ ನಕ್ಕು ಬಿಡಿ

source: wonderslist.com

ತೊಂದರೆ ಬಂದಾಗ ಅದನ್ನು ನಗುತ್ತ ಸ್ವೀಕರಿಸಿ ಮುನ್ನುಗ್ಗಿದರೆ ಯಾವುದೇ ಸಮಸ್ಯೆಗಳಿಂದ ಸುಲಭವಾಗಿ ಹೊರ ಬರಬಹುದು. ಸಮಸ್ಯೆಗಳು ಎಷ್ಟೇ ದೊಡ್ಡದಾಗಿದ್ದರೂ ಅದನ್ನು ಸಣ್ಣದೆಂದು ಭಾವಿಸಿ ಎದುರಿಸಿದರೆ ಮನಸಿನ್ನ ಮೇಲೆ ಯಾವುದೇ ರೀತಿಯ ಒತ್ತಡಗಳು ಉಂಟಾಗಲಾರದು.ನಗುವು ಸಮಸ್ಯೆಯನ್ನು ಲಘುವಾಗಿ ಪರಿಗಣಿಸುವಲ್ಲಿ ಸಹಾಯ ಮಾಡುತ್ತದೆ.

ಹ್ಯಾಪಿ ಲೈಫ್ ರೂಲ್ # 5: ಚಿಕ್ಕವರಾಗಿ

source: ak8.picdn.net

ಮಕ್ಕಳನ್ನು ಗಮನಿಸಿ ಅವರು ಎಷ್ಟು ಸ್ವಚಂದ , ಒತ್ತಡ ಮುಕ್ತವಾಗಿ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ಅವರ ಹವ್ಯಾಸ, ನಗು, ಪ್ರೀತಿ ಮತ್ತು ಅವರು ಜೀವನವನ್ನು ನೋಡುವ ರೀತಿ ನಾವು ಅಳವಡಿಸಿಕೊಂಡಲ್ಲಿ ಸಮಸ್ಯೆಗಳು ಗಂಭೀರವಾಗಿ ಕಾಣುವುದಿಲ್ಲ. ಸಾದ್ಯವಾದರೆ ಮಕ್ಕಳೊಂದಿಗೆ ಬೆರೆತು ಕಲಿಯಿರಿ.

Also Read: ಏಕೆ ಈ ಆತ್ಮಹತ್ಯೆ…. ಇರಲಿ ಆತ್ಮಸ್ಥರ್ಯ