ಕುಮಾರಸ್ವಾಮಿ ಬರ್ತಡೇ ಸ್ಪೆಷಲ್; ನಾಳೆ ಜನಿಸುವ ಮಕ್ಕಳಿಗೆ ಕುಮಾರಣ್ಣ ಬಾಂಡ್‌

0
678

ವಿಧನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಮನವೊಲಿಕೆಗೆ ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ತಯಾರಿ ನಡೆಸುತ್ತಿವೆ.. ಜನಪರ ಯೋಜನೆಗಳ ಸುರಿಮಳಗೈಯುತ್ತಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬ; ಈ ಹಿನ್ನೆಲೆಯಲ್ಲಿ ನಾಳೆ ಜನಿಸುವ ಮತ್ಕಳಿಗೆ ಕುಮಾರಣ್ಣ ಬಾಂಡ್ ಅನ್ನು ಜಾರಿಗೆ ತರಲಾಗಿದೆ.

ಡಿ.16ರಂದು ಹೆಚ್.ಡಿ. ಕುಮಾರಸ್ವಾಮಿ 59ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದರೊ ಪ್ರಯುಕ್ತ ಕುಮಾರಸ್ವಾಮಿ ಅಭಿಮಾನಿಗಳಿಬ್ಬರು ಕುಮಾರಣ್ಣ ಬಾಂಡ್ ಎಂಬ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಆದರೆ ಈ ಕುಮಾರಣ್ಣ ಬಾಂಡ್ ಜಾರಿಗೆ ತಂದಿರುವುದು ರಾಜ್ಯ ಯುವ ಜನತಾದಳದ ಉಪಾಧ್ಯಕ್ಷ ಸೈಯ್ಯದ್ ಶಾಹಿದ್ ಮತ್ತು ಬೆಂಗಳೂರು ನಗರ ಯುವ ಜನತಾದಳದ ಉಪಾಧ್ಯಕ್ಷ ರಾಜೇಂದ್ರ ಸಿಂಗ್ “ಕುಮಾರಣ್ಣ ಬಾಂಡ್” ಯೋಜನೆಯನ್ನು ಪರಿಚಯಿಸಿದ ಕುಮಾರಸ್ವಾಮಿ ಅಭಿಮಾನಿಗಳು.

ಕುಮಾರಣ್ಣ ಬಾಂಡ್

  • ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕುಗಳಲ್ಲಿ ನಾಳೆ ಜನಿಸುವ ಮಕ್ಕಳಿಗೆ ತಲಾ 5000 ರೂ. ವಿಶೇಷ ಬಾಂಡ್ ಇದಾಗಿದೆ.
  • ಕುಮಾರಸ್ವಾಮಿ ಅವರ ಹುಟ್ಟಹಬ್ಬದ ದಿನದಂದು ಜನಿಸಿದ ಮಕ್ಕಳಿಗಷ್ಟೇ ಈ ಬಾಂಡ್ ಲಭ್ಯ.
  • ಪೋಷಕರು ಮಗುವಿನ ಜನ್ಮ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
  • ಬಿಪಿಎಲ್ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಮಾತ್ರ ಈ ಸೌಲಭ್ಯ ಭಾಗ್ಯ.
  • ಕುಮಾರಣ್ಣ ಬಾಂಡ್ 6 ವರ್ಷಕ್ಕೆ 10 ಸಾವಿರ, 12 ವರ್ಷಕ್ಕೆ 20 ಸಾವಿರ, 18 ವರ್ಷಕ್ಕೆ 40 ಸಾವಿರ, 24 ವರ್ಷಕ್ಕೆ 80 ಸಾವಿರ ರೂರಾಯಿ ಮೌಲ್ಯ ಹೊಂದಿದೆ.