ರೆಡ್ಡಿ ಮಗಳ ಮದುವೆಯ ಬಗ್ಗೆ ಮೋದಿಗೆ ದೇವೇಗೌಡರ ಪತ್ರ…

0
714

ಮೊನ್ನೆ ಮೊನ್ನೆ ತಾನೆ ಸರಿ ಸುಮಾರು 500 ಕೋಟಿ ವೆಚ್ಚದಲ್ಲಿ ಮಗಳ ಭರ್ಜರಿ ಮುಗಿಸಿರುವ ಗಾಲಿ ಜನಾರ್ದನ ರೆಡ್ಡಿಗೆ ಎಲ್ಲಿಂದ ಬಂದಿದೆ ಅಷ್ಟೊಂದು ಹಣ ಎಂಬ ಗಂಭೀರ ಆರೋಪ ಎಲ್ಲೆಡೆ ಇಂದ ಕೇಳಿಬರುತ್ತಿದೆ. ಆಕ್ರಮ ಗಣಿಗಾರಿಕೆ ಮಾಡಿ ಸಂಪಾದಿಸಿದ ಕಪ್ಪು ಹಣದಿಂದ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಯನ್ನು ಮಾಡಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮೋದಿಯವರಿಗೆ ಬರೆದ 3 ಪುಟಗಳ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಪತ್ರದಲ್ಲಿ ಕಪ್ಪು ಹಣ ವಿರುದ್ಧ ಕ್ರಮಕ್ಕೆ ಅವರು ತಗೆದುಕೊಂಡಿರುವ ನಿರ್ಧಾರವನ್ನು ಶ್ಲಾಘಿಸಿದ್ದೇನೆ ಮತ್ತು ಮತ್ತು ಕಪ್ಪು ಹಣ ಪತ್ತೆಗೆ ನನ್ನ ಬೆಂಬಲ ಯಾವತ್ತೂ ಇದೆ ಎಂದು ಪತ್ರದಲ್ಲಿ ಬರೆದಿರುವೆ ಎಂದು ಕೇಂದ್ರ ಸರ್ಕಾರ 500, 1 ಸಾವಿರ ರೂ. ನಿಷೇಧಿಸಿದ್ದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದಾಗ ಉತ್ತರಿಸಿದರು.

ರೆಡ್ಡಿ ಮಗಳ ಮದುವೆಗೆ ಕರ್ನಾಟಕ ಬಿಜೆಪಿಯ ನಿಮ್ಮ ಸಹೊದ್ಯೋಗಿಗಳು ಕೂಡ ಭಾಗವಹಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ ಜನಾರ್ದನ ರೆಡ್ಡಿಯವರು 500 ಕೋಟಿ ರೂ. ಖರ್ಚು ಮಾಡಿ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದಾರೆ. ಈ ಮೂಲಕ ನಿಮ್ಮ ಆಶಯವನ್ನು ರಾಜ್ಯ ಬಿಜೆಪಿ ನಾಶ ಮಾಡಿದೆ ಎಂದು ಪತ್ರದಲ್ಲಿ ದೂರಿರುವ ವಿಚಾರವನ್ನು ಅವರು ತಿಳಿಸಿದರು.

ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮದಿಂದ ಬಡವರಿಗೆ ಅನಾನುಕೂಲವಾಗುತ್ತಿದೆ. ದಿನ ನಿತ್ಯದ ಮೂಲಭೂತ ಅವಶ್ಯಕತೆಗಳ ಬಳಕೆಗೆ ಜನಸಾಮನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ತೊಂದರೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಜನರಿಗೆ ಡಿಸಿಸಿ ಬ್ಯಾಂಕುಗಳಲ್ಲಿ ಹಣದ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದೆನೆ ಎಂದು ಎಚ್‍ಡಿಡಿ ಹೇಳಿದರು.