ಬೇಸಿಗೆಯಲ್ಲಿ ಅರೋಗ್ಯ ಹಾಗು ಸೌಂದರ್ಯ ಎರಡೂ ಹಾಳಾಗಬಾರದು ಅಂದ್ರೆ ಸೌತೆಕಾಯಿಯನ್ನು ಹೀಗೆ ಬಳಸಿ

0
1756

ನಮ್ಮಗೆ ಅಗತ್ಯವಾದ ಹಲವು ಪೋಷಕಾಂಶಗಳು ತರಕಾರಿಗಳ ಮೂಲಕವೇ ದೊರೆಯುತ್ತವೆ. ಅದರಲ್ಲೂ ಬೇಸಿಗೆಯ ಕಾಲದಲ್ಲಿ ಆಹಾರಕ್ರಮಗಳಲ್ಲಿ ಬದಲಾವಣೆ ಒಳ್ಳೆಯದು.
ಅದರಲ್ಲೂ ಕೆಲವೊಂದು ಆಹಾರವನ್ನು ನಮ್ಮ ಡಯಟ್ನಲ್ಲಿ ಸೇರಿಸಿದರೆ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಬಹುದು ನೋಡಿ..

ಹಸಿರು ತರಕಾರಿಗಳು ಎಲ್ಲಾ ಮುಖ್ಯ ಪೌಷ್ಠಿಕಾಂಶವನ್ನು ಒಳಗೊಂಡಿವೆ, ಅದರಲ್ಲೂ ವಿಶೇಷವಾಗಿ ಸೌತೆಕಾಯಿ ತಿಂದರೆ ದೊರೆಯುವ 8 ಸುಲಭ ಪ್ರಯೋಜನವನ್ನು ಮುಂದೆ ನೋಡಿ.

1) ಮಾನವನ ದೇಹದಲ್ಲಿನ ನೀರಿನಂಶ ಹೆಚ್ಚು ಮಾಡಲು ಸಹಕರಿಸುತ್ತದೆ ಮತ್ತು ದೇಹದಲ್ಲಿ ಬೇಡದ ಕಲ್ಮಶವನ್ನು ಹೊರ ಹಾಕುವಲ್ಲಿ ಸಹಕರಿಸುತ್ತದೆ.

2) ಸೌತೆಕಾಯಿ ಹೆಚ್ಚಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಇರುವ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗುತ್ತದೆ.

3) ಬೇಸಿಗೆ ಇಂದರೆ ಜನರಲ್ಲಿ ಆತಂಕ ಉಂಟುಮಾಡುತ್ತದೆ. ಸೆಕೆಗೆ ದೇಹದಲ್ಲಿ ಬರುವ ತುರಿಕೆಯನ್ನು ಬರದಂತ್ತೆ, ಇದು ತಡೆಗಟ್ಟುತ್ತದೆ.

4) ಹೆಣ್ಣು ಮಕ್ಕಳಿಗೆ ಮುಖಕ ಸ್ವಚ್ಚತೆ ಬಹು ಮುಖ್ಯ ಅದರಲ್ಲೂ ಸೌತೆಕಾಯಿ ಸೇವನೆ ಮಾಡುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಯಾಗುತ್ತದೆ.

5) ಬೇಸಿಗೆಯ ಬಿಸಿಲು ಹೆಚ್ಚಾದಂತೆ ನಮ್ಮ ದೇಹ ಉಷ್ಣಾಂಶ ಹೆಚ್ಚಾಗುತ್ತದೆ. ಇದನ್ನು ತಡೆದು ದೇಹವನ್ನು ತಂಪಾಗಿರುತ್ತದೆ.

6) ನೀವು ಬೇಸಿಗೆಯಲ್ಲಿ ಬಿಸಿಲಿನಲ್ಲಿ ಸುತ್ತಡಿ ಬಂದ ಮೇಲೆ ತಣ್ಣನೆಯ ನೀರಿನಲ್ಲಿ ಮುಖ ತೊಳೆದು ಸೌತೆಕಾಯಿಯ ಚೂರನ್ನು ಕಣ್ಣಿನ ಮೇಲೆ ಇಡುವುದರಿಂದ ಕಣ್ಣಿನ ಕಾಂತಿ ಹೆಚ್ಚಾಗುತ್ತದೆ.

7) ಸೌತೆಕಾಯಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಎಪ್ಪತ್ತು ನಿಮಿಷ ಬಿಟ್ಟು ತೊಳೆದರೆ, ಮುಖದ ತಾಜಾತನ ಕಾಪಾಡುತ್ತದೆ.

8) ಉಗುರಿನ ಮೇಲೆ ಸೌತೆಕಾಯಿಗಳ ಚೂರನ್ನು ಹಿಟ್ಟು ಮಸಾಜ್ ಮಾಡುವುದರಿಂದ ಮತ್ತು ಬೆಳಗಿನ ಜಾವ ಹೆಚ್ಚಾಗಿ ಸೇವಿಸುವುದರೆಂದ ಕೂದಲು ಅರೋಗ್ಯವಾಗಿರುತ್ತದೆ.