ಸೇಬು ವಿನೆಗರ್-ನಿಂದ ಆಗೋ ಉಪಯೋಗಗಳನ್ನು ನೀವು ತಿಳಿದುಕೊಂಡರೆ, ಇಂದೇ ಖರೀದಿ ಮಾಡಿ ಬಳಸಲು ಶುರು ಮಾಡ್ತೀರ..

0
3249

Kannada News | Health tips in kannada

ಆಪಲ್ ಸೈಡರ್ ವಿನೆಗರ್ ನಲ್ಲಿ ಅಡಗಿರುವ ಆರೋಗ್ಯದ ಗುಟ್ಟು…

ನಿತ್ಯ ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಖಿನ್ನತೆ, ಆಯಾಸ, ಸಂಧಿವಾತದಂತಹ ಖಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಮಟ್ಟವನ್ನು ಸಮತೋಲನವಾಗಿಡುವ ಮೂಲಕ ತೂಕ ಕಮ್ಮಿ ಮಾಡಲು ಕೂಡ ಸಹಾಯ ಮಾಡುತ್ತದೆ.

ಆಪಲ್ ಸೈಡರ್ ವಿನೆಗರ್ ಸೇಬುಗಳನ್ನು ಹುಳಿಬರಿಸಿ ತಯಾರಿಸಲಾಗುವ ಒಂದು ಕಂದು ಬಣ್ಣದ ದ್ರವ , ಇದನ್ನು ಹಲವಾರು ರೋಗಗಳನ್ನು ಗುಣಪಡಿಸಲು ಮತ್ತು ಸೋಂಕುಗಳಾದ ಸೈನುಟಿಸ್ ಜ್ವರ , ಮತ್ತು ಫ್ಲೂ ಗುಣಪಡಿಸಲು ಸಾವಿರಾರು ವರ್ಷಗಳ ಹಿಂದಿನಿಂದ ಬಳಸಲಾಗುತ್ತಿದೆ. ಇದರಲ್ಲಿ ಇರುವ ಪೆಕ್ಟಿನ್ ಸತ್ವ , ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಕೆಲವರಿಗೆ ಪೆಕ್ಟಿನ್ ನಿಂದ ಅಲರ್ಜಿ ಇರುತ್ತದೆ ಅವರು ಇದನ್ನು ಸೇವಿಸಬಾರದು. ದೇಹದಲ್ಲಿ ಆಮ್ಲ ಸ್ಫಟಿಕದ ನಿರ್ಮಾಣವಾದಾಗ ಅಸ್ಥಿಸಂಧಿವಾತ ಉಂಟಾಗುತ್ತದೆ. ಆದರೆ ಆಪಲ್ ಸೈಡರ್ ವಿನೆಗರ್ ದೇಹದಲ್ಲಿ ಪಿಎಚ್ ಸಮತೋಲನ ಮಾಡುವುದರ ಮೂಲಕ ಇದನ್ನು ತಡೆಯಬಲ್ಲದು.

ಇದು ಅಸಿಟಿಕ್ ಆಮ್ಲ, ಹೊಂದಿದ್ದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ಪರಿಣಾಮವಾಗಿ ರಕ್ತನಾಳಗಳಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಮಾಡುವುದು. ಇದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆದು ಸಕ್ಕರೆ ಕಾಯಿಲೆ ಹತೋಟಿಗೆ ತರುತ್ತದೆ , ಅದಲ್ಲದೆ ಇದರಲ್ಲಿ ಪೊಟ್ಯಾಷಿಯಂ , ಮ್ಯಾಗ್ನೀಷಿಯಂ ಮತ್ತು ಇತರ ಖನಿಜಗಳನ್ನು ಒಳಗೊಂಡಿದೆ. ಪೊಟ್ಯಾಷಿಯಂ ದೇಹದಲ್ಲಿ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ , ಮ್ಯಾಗ್ನಿಷಿಯಂ ಜೀರ್ಣಕ್ರಿಯೆಗೆ ಸಹಾಯ ಮತ್ತು ಆರೋಗ್ಯಕರ ಮೂಳೆಗಳನ್ನು ರೂಪಿಸಲು ಕ್ಯಾಲ್ಸಿಯಂ ಗ್ರಹಿಸಲು ಸಹಾಯಕ.

ಇದು ಬೀಟಾ-ಕ್ಯಾರೋಟಿನ್ ಹೊಂದಿದ್ದು , ಮೆಯೊ ಚಿಕಿತ್ಸಾಲಯದ ಪ್ರಕಾರ ಫ್ರೀ ರಾಡಿಕಲ್ ಮತ್ತು ರೋಗ ನಿರೋಧಕ ವ್ಯವಸ್ಥೆಯನ್ನು ವರ್ಧಿಸುವ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ತಲೆಹೊಟ್ಟಿನ ಸಮಸ್ಯೆ ಇರುವವರು , ಶೇ. ೫೦ ರಷ್ಟು ನೀರು ಮತ್ತು ಶೇ. ೫೦ ರಷ್ಟು ಆಪಲ್ ಸೈಡರ್ ವಿನೆಗರ್ ನ್ನು ಮಿಶ್ರಣಮಾಡಿ ನೆತ್ತಿಗೆ ಹಚ್ಚಿ ಒಣಗಲು ಬಿಟ್ಟು ನಂತರ ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ಆಪಲ್ ಸೈಡರ್ ವಿನೆಗರ್ ಕಟುವಾದ ಗುಣವನ್ನು ಹೊಂದಿದೆ , ಇದರಿಂದ ಮುಖ ಮತ್ತು ಕತ್ತಿನ ಭಾಗದಲ್ಲಿ ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ೨ ಟೀ ಸ್ಪೂನ್ ನಷ್ಟು ಬಳಸುವುದರಿಂದ ಮಹಿಳೆಯರಲ್ಲಿ ಯೀಸ್ಟ್ ಸೋಂಕುಗಳನ್ನು ಕಡಿಮೆಮಾಡುತ್ತದೆ , ಸೂರ್ಯನ ಕಿರಣದ ಪರಿಣಾಮದಿಂದಾಗಿ ಸುಟ್ಟ ಚರ್ಮವನ್ನು ಅಥವಾ ಸನ್ ಬರ್ನ್ ಸರಿಪಡಿಸಲು ಸ್ನಾನದ ನೀರಿನಲ್ಲಿ ಆಪಲ್ ಸೈಡರ್ ವಿನೆಗರ್ ಸೇರಿಸಿ ಬಳಸಿ. ನೆನಪಿಡಿ ಇದು ಕಣ್ಣಿಗೆ ಸೋಕಿದರೆ ಅಲೆರ್ಜಿಯಾಗುತ್ತದೆ ಆದರಿಂದ ಕಣ್ಣಿನಿಂದ ದೂರವಿಡಿ.

Also Watch:

Also Read: ಕಂಗೆಡಿಸುವ ಜ್ವರಕ್ಕೆ ಇಲ್ಲಿದೆ ಮನೆ ಔಷಧಿಗಳು..