ಭಾರತೀಯ ಆಯುರ್ವೇದದಲ್ಲಿ ಹೇಳಿರುವಂತೆ ಕಾಮ ಕಸ್ತೂರಿ ಬೀಜದ ಉಪಯೋಗಗಳನ್ನು ತಿಳಿದುಕೊಳ್ಳಿ, ಸುಲಭವಾಗಿ ಆರೋಗ್ಯ ವೃದ್ದಿಸಿಕೊಳ್ಳಿ!!

0
3441

ಕಾಮ ಕಸ್ತೂರಿ ಬೀಜವನ್ನು ಸಬ್ಜ, ಬೇಸಿಲ್ ಸೀಡ್ಸ್ ಎಂದು ಕರೆಯುತ್ತಾರೆ. ಕಾಮ ಕಸ್ತೂರಿ  ಬೀಜವನ್ನು ಆಯುರ್ವೇದ್ ಮತ್ತು ಚೈನೀಸ್ ಔಷಧಿಗಳಲ್ಲಿ ಉಪಯೋಗಿಸಲಾಗುತಿತ್ತು. ಕಾಮ ಕಸ್ತೂರಿ ಬೀಜವನ್ನು ತಂಪು ಪಾನೀಯಗಳಿಗೆ ಉಪಯೋಗಿಸುತ್ತಾರೆ.

ಇತ್ತೀಚಿನ ದಿನದಲ್ಲಿ ಅಮೇರಿಕಾ ಮತ್ತು ಯುರೋಪ್ ದೇಶಗಳು ತಂಪು ಪಾನೀಯಗಳಲ್ಲಿ ಕಾಮ ಕಸ್ತೂರಿ ಬೀಜವನ್ನು ಬಳಸಿ ಮಾರಾಟ ಮಾಡುತಿದ್ದಾರೆ. ಕಾಮ ಕಸ್ತೂರಿ ಬೀಜವು ಆರೋಗ್ಯಕ್ಕೆ ಸತ್ವಯುತವಾದ ಪದಾರ್ಥವಾಗಿದೆ. ಎರಡು ಚಮಚ ಕಾಮ ಕಸ್ತೂರಿ ಬೀಜವನ್ನು ೧೫ ನಿಮಿಷ ನೀರಿನಲ್ಲಿ ನೆನೆಸಿ ನಂತರ ಕುಡಿಯಬೇಕು. ಇಲ್ಲವೇ ತಂಪು ಪಾನೀಯಗಳ ಜೊತೆ ಕುಡಿಯಬಹುದು. ಇದರಿಂದ ಅನೇಕ ಲಾಭಗಳಿವೆ.

ಅವುಗಳು ಯಾವವು ಎಂದರೆ ಮೊದಲನೇಯದಾಗಿ ಇದು ದೇಹದ ಬೊಜ್ಜನ್ನು ಕಡಿಮೆ ಮಾಡುತ್ತದೆ. ದೇಹದ ಉಷ್ಣಾಂಶವನ್ನು ಕೆಡಿಮೆ ಮಾಡುವುದರಲ್ಲಿ ಇದ್ರ ಪಾತ್ರ ದೊಡ್ಡದು. ಕಾಮ ಕಸ್ತೂರಿ  ಬೀಜವನ್ನು ನಿತ್ಯವೂ ಸೇವಿಸುವುದರಿಂದ ಮಲಬದ್ದತೆ, ಹೊಟ್ಟೆ ಉಬ್ಬರ, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜ್ವರ ಮತ್ತು ಕೆಮ್ಮಿನಂತಹ ಕಾಯಿಲೆಯನ್ನು ಇದು ಕಡಿಮೆ ಮಾಡುತ್ತದೆ. ಕಾಮ ಕಸ್ತೂರಿ ಬೀಜವು ದೇಹದಲ್ಲಿ ಇರುವ ತೇವಾಂಶವನ್ನು ಹಿಡಿದಿಡುತ್ತದೆ, ಇದರಿಂದ ಮುಖದ ಕಾಂತಿಯು ಹೆಚ್ಚುತ್ತದೆ.  

ನಿತ್ಯವೂ ಇದನ್ನು ಸೇವಿಸುವುದರಿಂದ ಕಾನ್ಸರ್ ಅನ್ನೋ ಮಹಾ ಮಾರಿಯನ್ನು ತಡೆಗಟ್ಟಬಹುದು. ಕಾಮ ಕಸ್ತೂರಿ ಬೀಜದಲ್ಲಿ ಒಮೇಗಾ ೩ ಫ್ಯಾಟ್ ಮತ್ತು ನಾರಿನಂಶ ಇರುತ್ತದೆ. ಕಾಮ ಕಸ್ತೂರಿ  ಬೀಜ ತಿಂದಲ್ಲಿ ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಹೇರಳವಾಗಿ ಸಿಗುತ್ತದೆ. ಕಾಮ ಕಸ್ತೂರಿ ಬೀಜದಿಂದ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡಬಹುದು ಮತ್ತು ಇದನ್ನು ಸೇವಿಸುವುದರಿಂದ  ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡ (ಬಿಪಿ) ಜಾಸ್ತಿ ಇರುವವರು ಇದನ್ನು ಸೇವಿಸಿದರೆ ಅವರ ಬಿಪಿ ಕೂಡ ನಾರ್ಮಲ್ ಗೆ ಬರುತ್ತದೆ. ಕಾಮ ಕಸ್ತೂರಿ ಬೀಜವನ್ನು ಕಡಿಮೆ ರಕ್ತದೊತ್ತಡ ಇರುವವರು ಸೇವಿಸಬಾರದು. ಕಾಮಕಸ್ತೂರಿ ಬೀಜ ಎಲ್ಲ ರೋಗಗಳಿಗೂ ರಾಮಬಾಣದಂತಿದೆ. ಇದರ ಉಪಯೋಗ ತಿಳಿದ ಮೇಲೆ ಖಂಡಿತ ಎಲ್ಲರು ಸೇವಿಸುತ್ತಾರೆ.

–ಶ್ರುತಿ.ಎಚ್.ಎ.

Also read: ಕುಂಬಳಕಾಯಿ ಬೀಜದ ಅರೋಗ್ಯ ಗುಣಗಳ ಬಗ್ಗೆ ತಿಳಿದುಕೊಂಡ ಮೇಲೆ, ನೀವು ಎಂದಿಗೂ ಕುಂಬಳಕಾಯಿ ಬೀಜಗಳನ್ನು ಬಿಸಾಡೋದೇ ಇಲ್ಲ!