ಹುಟ್ಟಿನಿಂದ ಮುಪ್ಪಿನವರೆಗೆ ಪ್ರತಿಯೊಬ್ಬರಿಗೂ ಉಚಿತವಾಗಿ ಆರೋಗ್ಯ ಕಾಪಾಡುವ ವ್ಯೆದ್ಯ ಯಾರು ಗೊತ್ತಾ? ಈ ಸಣ್ಣ ಕತೆ ಓದಿ ತಿಳಿಯುತ್ತೆ.!

0
3022

ಪ್ರತಿಯೊಬ್ಬರ ಆರೋಗ್ಯವನ್ನು ಮುಪ್ಪಿನ ವರೆಗೆ ಕಾಪಾಡಲು ಒಬ್ಬ ವ್ಯೆದ್ಯ ಇರುತ್ತಾರೆ, ಅವರು ಯಾರು ಎಲ್ಲಿ ಹೇಗೆ ಇರುತ್ತಾರೆ ಎನ್ನುವುದು ಮಾತ್ರ ಹಲವರಿಗೆ ತಿಳಿದಿಲ್ಲ, ಏಕೆಂದರೆ ಸ್ವಲ್ಪ ಜ್ವರ ಬಂದರು ಕೂಡ ಡಾಕ್ಟರ್ಸ್ ಬಳಿ ಹೋಗಿ ನೂರಾರು ರೂ. ಹಣ ನೀಡಿ ಸಣ್ಣ ಚಿಕಿತ್ಸೆ ಪಡೆದು ಅವರೇ ನಮ್ಮ ವ್ಯೆದ್ಯರು ಎಂದು ಪ್ರತಿಯೊಬ್ಬರೂ ಹೇಳಿಕೊಳ್ಳುತ್ತಾರೆ, ಆದರೆ ನೀವೂ ಹುಟ್ಟಿನಿಂದ ನಿಮ್ಮ ಆರೋಗ್ಯವನ್ನು ಕಾಪಾಡುವ ಒಬ್ಬ ವ್ಯೆದ್ಯರ ಬಗ್ಗೆ ತಿಳಿಯಲೇಬೇಕು. ಏಕೆಂದರೆ ಚಿಕ್ಕ ಶಸ್ತ್ರಚಿಕಿತ್ಸೆ ಮಾಡಿದ ವ್ಯೆದ್ಯರಿಗೆ ಲಕ್ಷಾಂತರ ಹಣ ನೀಡಿ ಪ್ರಾಣ ಉಳಿಸಿದ ದೇವರು ಎಂದು ಕರೆಯುತ್ತೇವೆ. ಆದರೆ ಹತ್ತಾರು ವರ್ಷಗಳಿಂದ ಉಚಿತವಾಗಿ ಅರೋಗ್ಯ ಕಾಪಾಡುವ ಈ ವ್ಯೆದ್ಯ ಯಾರು? ಎನ್ನುವ ಬಗ್ಗೆ ಚಿಕ ಸ್ಟೋರಿ ಇಲ್ಲಿದೆ ನೋಡಿ.

ಒಂದು ದಿನ ಒಬ್ಬ ಹಿರಿಯ ಅಜ್ಜ ಅಂದರೆ 80 ವರ್ಷದವರಿಗೆ ಹೃದಯ ಶಸ್ತ್ರಚಿಕಿತ್ಸೆಯಾಯಿತು ಅದರಂತೆ ಒಂದು ವಾರ ಚಿಕಿತ್ಸೆಗೆ ಇಲ್ಲೇ ಇರಬೇಕು ಎಂದು ವ್ಯೆದ್ಯರು ಹೇಳಿ. ಇಲ್ಲಿಯ ವರೆಗೆ ಆದ ಶಸ್ತ್ರಚಿಕಿತ್ಸೆ ಮತ್ತು ಆಸ್ಪತ್ರೆ ಬಿಲ್ 8 ಲಕ್ಷ ಆಗಿದೆ ಬಿಲ್ ಕಟ್ಟಿ ಎಂದು ಸೂಚಿಸುತ್ತಾರೆ. ಬಿಲ್ ನೋಡಿ ಹಿರಿಯ ಅಜ್ಜನಿಗೆ ಆಘಾತವಾಯಿತು. ಆಗ ಹಿರಿಯ ಅಜ್ಜ ಕಣ್ಣೀರು ಹಾಕಿದ ಅದನ್ನು ಕಂಡ ವೈದ್ಯರು ಬಿಲ್ ಕಟ್ಟಲು ಹಣವಿಲ್ಲ ಅನಿಸುತ್ತೆ ಎಂದು ಹಿರಿಯ ವ್ಯಕ್ತಿಯ ಬಳಿ ಬಂದು ಅಳಬೇಡಿ ನಿಮ್ಮ ಬಿಲ್ ಸ್ವಲ್ಪ ಕಡಿಮೆ ಮಾಡುತ್ತೇವೆ. ನೀವೂ ಮೊದಲು ಉಷಾರ್ ಆಗಿ ಎಂದು ಹೇಳುತ್ತಾರೆ.

ಆಗ ವ್ಯೆದ್ಯರ ಮಾತನ್ನು ಕೇಳಿದ ಮುದುಕ ಸರ್ ಬಿಲ್ ತುಂಬಾ ಕಡಿಮೆ 10 ಲಕ್ಷ ತುಂಬಲು ನಾನು ಯೋಗ್ಯನಾಗಿರುವೆ ನಾನು ಅತ್ತಿದ್ದು ಅದಕ್ಕಲ್ಲಾ.. ಅದು ಬೇರೆಯೇ ವಿಷಯ ಎಂದು ಹೇಳುತ್ತಾನೆ. ಅದೇನು ಹೇಳಿ ಎಂದು ವ್ಯೆದ್ಯರು ಒತ್ತಾಯ ಮಾಡಿ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುವುದಿಲ್ಲವಾ? ನಿಮಗೆ ಮತ್ತೆ ಏನಾದರು ತೊಂದರೆ ಇದಿಯಾ ಎಂದು ಬಲವಂತವಾಗಿ ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಾರೆ ಆದರೆ. ಆಗ ಹಿರಿಯ ವ್ಯಕ್ತಿ ಹೇಳುತ್ತಾರೆ, ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಜೋಪಾನವಾಗಿ ಕಾಪಾಡಿದ್ದಕ್ಕೆ ಯಾವುದೇ ಬಿಲ್ ನನಗೆ ಕಳಿಸಲಿಲ್ಲ ನೀವೂ ಕೇವಲ ಮೂರು ಗಂಟೆ ನನ್ನ ಹೃದಯ ಪಂಕ್ಷನಿಂಗ್ ಗೆ ಎಂಟು ಲಕ್ಷ ರೂಪಾಯಿಯೇ… ??

ಪರಮಾತ್ಮ ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತಾನೆ ನೋಡಿ. ನಮ್ಮ ಒಂದೊಂದು ಅಂಗಾಂಗದ ಮೇಲು ಬೆಲೆ ಕಟ್ಟಲಾಗದ ಬಂಡವಾಳ ಹೂಡಿಕೆ ಮಾಡಿದ್ದಾನೆ. ನಮ್ಮ ದೇಹದ ಯಾವುದೊ ಒಂದು ಅಂಗ ಕೆಲಸ ಮಾಡಲಿಲ್ಲ ಅಂತ ಡಾಕ್ಟರ್ ಬಳಿ ಹೋದಾಗಲೇ ಪರಮಾತ್ಮನ ಬೆಲೆ ನಮಗೆ ಅರ್ಥವಾಗುವುದು ದೇವರು ಯಾವುದೇ ಪ್ರತಿಫಲ ಬಯಸದ ಉತ್ಪಾದಕ. ಅದನ್ನು ಮರೆತು ಅವನು ತಯಾರಿಸಿದ ಅಂಗವನ್ನು ರಿಪೇರಿ ಮಾಡಿದ ವ್ಯೆದ್ಯರಿಗೆ ಲಕ್ಷಾಂತರ ಹಣ ಕೊಟ್ಟು ಭಯ ಭಕ್ತಿಯಿಂದ ನಿಂಗಿಂತಲೂ ಒಂದು ಮಾರು ಮೇಲೆ ಎಂಬಂತೆ ವೈದ್ಯರಿಗೆ ನಮಸ್ಕಾರ ಹೇಳಿ ಬರುತ್ತೇವೆ.

ಅಷ್ಟಾದರೂ ಪರಮಾತ್ಮ ಕೋಪಗೊಳ್ಳುವುದಿಲ್ಲ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿರುತ್ತಾನೆ. ಎಂಥಹ ಕರುಣಾಳು ಅವನು ಇಂತಹ ಮಹಾನ್ ವ್ಯಕ್ತಿಗೆ ಕೊಡಲು ನನ್ನ ಬಳಿ ಏನಿದೆ ಹೇಳಿ? ರಾತ್ರಿ ಕರೆಂಟು ಬಳಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ, ಸೂರ್ಯನ ಬೆಳುಕು ಬಿಸಿಲಿಗೆ ಯಾವುದೇ ಬಿಲ್ಲಿಲ್ಲ, ನೀರು ಬಳಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಕಟ್ಟುತ್ತಾರೆ, ಕಾಲುವೆ ಬಾವಿ ಏರಿ ಕೆರೆ ಸಮುದ್ರಗಳು ಕೊಟ್ಟ ನೀರಿಗೆ ಯಾವುದೇ ಬಿಲ್ ಕಟ್ಟುವುದಿಲ್ಲ, A c ಗಾಳಿಗಾಗಿ ಲಕ್ಷಾಂತರ ಹಣ ವ್ಯಯಿಸುತ್ತೇವೆ, ನೀನು ಕೊಟ್ಟ ಪರಿಶುದ್ಧ ಗಾಳಿಗೆ ಯಾವುದೇ ಬಿಲ್ಲಿಲ್ಲ, ಯಾವ ಬಿಲ್ ಪಡೆಯದ ನಿನಗೆ ನನ್ನದೊಂದು ಸಣ್ಣ ಬಿಲ್ ಓ.ದೇವರೇ ನಿನಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ ನಿನ್ನ ಋಣ ತೀರಿಸಲು ಸಾದ್ಯವಿಲ್ಲ.. ನಾನೆಂದೂ ನಿನಗೆ ಚಿರ ಋಣಿ..ಕೋಟಿ ಕೋಟಿ ಧನ್ಯವಾದಗಳು ತಂದೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ವ್ಯೆದ್ಯರ ಕಣ್ಣಲ್ಲಿ ಕೂಡ ನೀರು ಬರುತ್ತೆ ಈ ವಿಚಾರ ನಮಗೆ ತಿಳಿಸಿದ ನಿಮಗೆ ಧನ್ಯವಾದಗಳು ಎಂದು ಹೇಳುತ್ತಾರೆ.