ಒಂದೇ ಥರದ ಇಡ್ಲಿ ತಿಂದು ತಿಂದು ಬೇಜಾರ್ ಆಗಿದ್ರೆ, ಈ ಹೊಸ ರೀತಿಯ ಸಿಹಿಕುಂಬಳದ ಇಡ್ಲಿ ಟ್ರೈ ಮಾಡಿ.. ಹೊಸ ಥರದ ರುಚಿಯನ್ನು ಆನಂದಿಸಿ!!

0
1572

ಬೇಕಾಗುವ ಸಾಮಗ್ರಿಗಳು:

  • ಸಿಹಿಕುಂಬಳ ತುರಿ 2 ಬಟ್ಟಲು
  • ಉದ್ದಿನ ಬೆಳೆ 1 ಬಟ್ಟಲು
  • ಇಡ್ಲಿ ರವೆ 1 ಬಟ್ಟಲು
  • ಕೊಬ್ಬರಿ ತುರಿ ಅರ್ಧ ಬಟ್ಟಲು
  • ಅರ್ದ ಚಮಚ ಶುಂಠಿ ಪೇಸ್ಟ್,
  • ಒಂದು ಹಸಿಮೆಣಸಿನಕಾಯಿ,
  • ಇಂದು ಬಟ್ಟಲು ಕೊತ್ತೊಂಬರಿ ಸೊಪ್ಪು
  • ರುಚಿಗೆ ತಕ್ಕಷ್ಟು ಉಪ್ಪು

Also read: ಮಸಾಲೆ ಇಡ್ಲಿ ಹೇಗೆ ಮಾಡೋದು ಅಂತ ಗೊತ್ತಾ ಇಲ್ಲಿ ನೋಡಿ..!

ಮಾಡುವ ವಿಧಾನ

 1. ಮೊದಲು ಉದ್ದಿನಬೇಳೆಯನ್ನು 1:30 ನಿಮಿಷಗಳ ಕಾಲ ಮಾತ್ರ ನೆನೆಸಿಕೊಳ್ಳಬೇಕು. ಅರ್ಧಕ್ಕಿಂತ ಜಾಸ್ತಿ ನೆನೆಸಿಕೊಳ್ಳಬೇಕು. ನೆನೆಸಿಟ್ಟ ಉದ್ದಿನ ಬೆಳೆಯನ್ನು ಮಿಕ್ಸಿ ಮಾಡಿಕೊಳ್ಳಿ. ಇದನ್ನು ಹಾಗೆ ಇಡಿ ರಾತ್ರಿ ನೆನೆಯಲು ಬಿಡಿ.
 2. ಇದೆ ರೀತಿ ಇಡ್ಲಿ ರವೆಯನ್ನು ಸಹ ಇಡಿ ರಾತ್ರಿ ನೆನೆಯಲು ಬಿಡಿ.
 3. ಬೆಳೆಗ್ಗೆ ನೆನೆಸಿಟ್ಟ ಉದ್ದಿನ ಬೆಳೆ ಹಿಟ್ಟಿಗೆ ಸ್ವಲ್ಪನೂ ನೀರಿಲ್ಲದೆ ರವೆಯನ್ನು ಹಿಂಡಿ ಚೆನ್ನಾಗಿ ಕಲಸಬೇಕು. (ಇದರಿಂದ ಕಡಬು ತುಂಬಾ ಸಾಫ್ಟ್ ಆಗಿ ಬರುತ್ತೆ)
 4. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು. ಮತ್ತು ಕರಿಮೆಣಸಿನ ಪುಡಿ, ಅರ್ದ ಚಮಚ ಶುಂಠಿ ಪೇಸ್ಟ್, ಒಂದು ಚಮಚ ಹಸಿಮೆಣಸಿನಕಾಯಿ, ಇಂದು ಬಟ್ಟಲು ಕೊತ್ತೊಂಬರಿ ಸೊಪ್ಪು, ಕೊಬ್ಬರಿ ತುರಿ ಅರ್ಧ ಬಟ್ಟಲು ಮತ್ತು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಹಿ ಇಟ್ಟುಕೊಂಡಿರುವ ಸಿಹಿಕುಂಬಳಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
 5. ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ, ಇಡ್ಲಿ ಪಾತ್ರೆಯಲ್ಲಿ ಉಂಡೆ ಮಾಡಿ ಇಡಬೇಕು. ಇದನ್ನು ಹನ್ನೆರಡರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಬೇಕು.
 6. ಈಗ ಸಿಹಿಕುಂಬಳದ ಕಡುಬು ಅಥವಾ ಚೀನೀಕಾಯಿ ಕಡುಬು ಸವಿಯಲು ಸಿದ್ದ.