ಆರೋಗ್ಯಕರವಾದ ಕ್ಯಾಪ್ಸಿಕಂ ಸೂಪ್ ಮಾಡುವ ವಿಧಾನ..!!

0
714

ಕ್ಯಾಪ್ಸಿಕಂ ಅಂದರೆ (ದೊಡ್ಡ ಮೆಣಸಿನಕಾಯಿ) ಎಲ್ಲರಿಗೂ ಗೊತ್ತೇ ಇದೆ ಅದು ಕೇವಲ ನೋಡಲು ಅಷ್ಟೇ ಸುಂದರವಾಗಿಲ್ಲ ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು ಕೂಡ ಇವೆ. ಜೀರ್ಣಾಂಗ ತೊಂದರೆಗಳನ್ನು ನಿವಾರಿಸುತ್ತೆ, ಮಧುಮೇಹ ರೋಗವನ್ನು ನಿಯಂತ್ರಸುತ್ತದೆ ಅದರಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನಾಂಶ ಮಟ್ಟ ಕಡಿಮೆಯಿರುವುದರಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್‪ನು ಕಡಿಮೆ ಮಾಡುತ್ತೆ. ನೋವು ತಗ್ಗಿಸುವ ಗುಣಗಳನ್ನು ಹೊಂದಿದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ಸಂಧಿವಾತ ಮತ್ತು ವಾಯುನೋವು ಇವುಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಇದರ ಕ್ರೀಮ್ ಅಥವ ಮುಲಾಮಿನಿಂದ ನೋವು ಪೀಡಿತ ಸ್ಥಳಗಳಲ್ಲಿ ಲೇಪಿಸಿದರೆ ನೋವು ಕಡಿಮೆಯಾಗುತ್ತೆ. ಇಷ್ಟೆಲ್ಲಾ ಉಪಯೋಗಗಳು ಇರುವ ಕ್ಯಾಪ್ಸಿಕಂನಿಂದ ಸೂಪ್ ಮಾಡಿ ಕೂಡಿದರೆ ಇನ್ನೂ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳ:
* ತಯಾರಿಸಲು ನೀವು ಯಾವುದೇ ಕಲರ್ ದಪ್ಪ ಕ್ಯಾಪ್ಸಿಕಂ ಬಳಸಬಹುದು
* ಎರಡು ಕೆಂಪು ದಪ್ಪ ಮೆಣಸಿನಕಾಯಿ
* ಒಂದು ಟೇಬಲ್ ಚಮಚ ಅಡುಗೆ ಎಣ್ಣೆ
* ನಾಲ್ಕು ಟೊಮೇಟೋ (ನಾಲ್ಕರಿಂದ ಐದು ತುಂಡುಗಳಾಗಿ ಮಾಡಿರಬೇಕು)
* ಲವಂಗದ ಎಲೆ – 2
* ನೀರು – 3 ಕಪ್
* ಹಾಲು – 1/2 ಕಪ್
* ಕಾರ್ನ್ ಫ್ಲೋರ್ – 1/2 ಟೇಬಲ್ ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಸಕ್ಕರೆ – ಒಂದು ಚಿಟಕಿ
* ಕರಿ ಮೆಣಸು – ಒಂದು ಚಿಟಕಿ ಅಲಂಕಾರಕ್ಕಾಗಿ

ಮಾಡುವ ನಿಧಾನ:

1. ತಾಜಾ ದಪ್ಪ ಮೆಣಸಿನಕಾಯಿಯನ್ನು ತೆಗೆದುಕೊಂಡು ಎಲ್ಲಾ ಕಡೆ ಎಣ್ಣೆ ಹಚ್ಚಿರಿ.
2. ಈಗ ಒಂದು ಫೋರ್ಕ್ ಗೆ ಚುಚ್ಚಿ ಗ್ಯಾಸ್ ಒಲೆಯ ಮೇಲೆ ಕಪ್ಪು ಬಣ್ಣ ತಿರುಗುವವರೆಗೆ ಅದನ್ನು ಸುಡಬೇಕು
3. ಈಗ, ಒಂದು ಬೌಲ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸುಟ್ಟ ದಪ್ಪ ಮೆಣಸಿನಕಾಯನ್ನು ಅದ್ದಬೇಕು. ನಿಮ್ಮ ಕೈಗಳಿಂದ ಕಪ್ಪಗಾದ ಭಗವನ್ನು ತೆಗೆಯಬೇಕು.
4. ಇದಾದ ನಂತರ ದಪ್ಪ ಮೆಣಸಿನಕಾಯನ್ನು ಬೌಲ್ ನಿಂದ ತೆಗೆದು ಕಪ್ಪಾದ ಭಾಗವನ್ನು ತೆಗೆಯಬೇಕು.
5. ದಪ್ಪ ತಳದ ಬಾಣಲಿ ತೆಗೆದುಕೊಂಡು ಹಣ್ಣಾದ ಟೊಮೇಟೋವನ್ನು ಹಾಕಿ.
6. ಬೆಳ್ಳುಳ್ಳಿಯ ಹಾಕಿ (ಇಲ್ಲವಾದ್ದಲ್ಲಿ ಬೇಡ)
7. ಈಗ, ಲವಂಗದ ಎಲೆ, ನೀರು, ದಪ್ಪ ಮೆಣಸಿನಕಾಯಿಯ ತುಂಡುಗಳನ್ನು ಬಾಣಲಿಯಲ್ಲಿ ಹಾಕಿ. ಚೆನ್ನಾಗಿ ಬೇಯಿಸಬೇಕು
8. ನಂತರ ಒಲೆಯನ್ನು ಆರಿಸಿ. ತಣ್ಣಗಾಗಲು ಬಿಡಿ.

9. ಬೇರೇಬೇರೆಯಾಗಿ ಮಿಕ್ಸಿಗೆ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿಕೊಂಡು ಬೌಲ್ ಗೆ ಮಿಶ್ರಣವನ್ನು ಸುರಿಯಿರಿ.
10. ಒಂದು ಪಾತ್ರೆಯನ್ನು ತೆಗೆದುಕೊಂಡು ಮಿಶ್ರಣವನ್ನು ಸುರಿದು ಕುದಿಯಲು ಬಿಡಿ. ಇದೇ ವೇಳೆಗೆ ನೀವು ಹಾಲು ಮತ್ತು ಕಾರ್ನ್ ಮಿಶ್ರಣವನ್ನು ತಯಾರಿಸಿ.
11. ತಣ್ಣಗಿನ ಹಾಲಿಗೆ ಕಾರ್ನ್ ಫ್ಲೋರ್ ಅನ್ನು ಮಿಶ್ರಣ ಮಾಡಿ ನಿಧಾನವಾಗಿ ಕುದಿಯುತ್ತಿರುವ ಸೂಪಿನ ಮಿಶ್ರಣಕ್ಕೆ ಸುರಿದು ಕಲಕ್ಕುತ್ತಲೇ ಇರಬೇಕು. ಇಲ್ಲವಾದ್ದಲ್ಲಿ ಕಾರ್ನ್ ಫ್ಲೋರ್ ತುಂಬಾ ಜಿಗಿಯಾಗಿ ಬಿಡುತ್ತದೆ.
12. ಸೂಪಿನ ರುಚಿ ನೋಡಿ. ಹುಳಿ ಅನಿಸಿದರೆ, ಸ್ವಲ್ಪವೇ ಸಕ್ಕರೆಯನ್ನು ಸೇರಿಸಿ. ಸ್ವಲ್ಪ ಹೊತ್ತು ಕುದಿಯಲು ಬಿಡಿ. ಸರಿಯಾದ ಹದ ಬಂದ ಕೂಡಲೆ ಸೂಪ್ ಬೌಲ್ ಗೆ ಸುರಿಯಿರಿ.
ಈಗ ನಿಮ್ಮ ರೋಸ್ಟೆಡ್ ಕ್ಯಾಪ್ಸಿಕಮ್ ಸೂಪ್ ತಯಾರಾಗಿದೆ.