ನಿಮ್ಮ ಇಳಿ ವಯಸ್ಸಿನಲ್ಲಿ ಕಡ್ಡಾಯವಾಗಿ ಈ 8 ಆಹಾರಗಳನ್ನು ಸೇವಿಸಿ ಹತ್ತಾರು ಕಾಯಿಲೆಗಳಿಂದ ದೂರವಿರಿ.!

0
1176

ಇಳಿ ವಯಸ್ಸಿನಲ್ಲಿ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಒಳ್ಳೆಯದು ಏಕೆಂದರೆ 40 ವರ್ಷ ದಾಟಿದ ಬಳಿಕ ಹಲವು ರೋಗಗಳು ಅಂಟಿಕೊಳ್ಳುವುದು ಸಾಮಾನ್ಯವಾಗಿದ್ದು, ಸಮತೋಲನಪೂರ್ಣವಾಗಿ ಚೆನ್ನಾಗಿ ಯೋಜಿತವಾಗಿರುವ ಮಿಶ್ರ ಆಹಾರ ವಸ್ತುಗಳನ್ನು ದಿನವೂ ಸೇವಿಸುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇಲ್ಲದಿದ್ದರೆ ಕೇವಲ 35 – 40 ವಯಸ್ಸಿಗೆ ಬಿಪಿ, ಶುಗರ್, ಹೃದಯ ಸಮಸ್ಯೆ ಇತ್ಯಾದಿ ಸಮಸ್ಯೆಗಳ ಕಂಡು ಬರುತ್ತೇವೆ. ಇದಕ್ಕೆ ಕೆಲವು ಆಹಾರಗಳನ್ನು ಸರಿಯಾದಿ ಸೇವಿಸಿದರೆ ಹೃದ್ರೋಗಗಳು, ಲಕ್ವಾ, ಟೈಪ್‌ 2 ಮಧುಮೇಹ, ಎಲುಬಿನ ಅನಾರೋಗ್ಯ, ಕೆಲವು ವಿಧದ ಕ್ಯಾನ್ಸರ್‌ಗಳು ಮತ್ತು ಅನೀಮಿಯಾ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

source:Crosswalk.com

ಒಂದು ವೇಳೆ ಈ ದೀರ್ಘ‌ಕಾಲಿಕ ಅನಾರೋಗ್ಯಗಳಲ್ಲಿ ಯಾವುದಾದರೂ ಒಂದು ನಿಮಗೆ ಈಗಾಗಲೇ ಇರುವುದಾದರೆ, ಒಳ್ಳೆಯ ಆಹಾರ ಸೇವಿಸುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿರುವುದರಿಂದ ಆ ಅನಾರೋಗ್ಯವನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಬಹುದು. ಹಾಗಾದ್ರೆ ಇಳಿ ವಯಸ್ಸಿನಲ್ಲಿ ಸೇವಿಸುವ ಆಹಾರಗಳು ಇಲ್ಲಿವೆ ನೋಡಿ.

1. ಹಣ್ಣುಹಂಪಲು:

ಹಣ್ಣುಗಳ ಮೇಲೆ ಗಮನಹರಿಸಿ ಪ್ರತಿನಿತ್ಯವೂ ಈ ಹಣ್ಣುಗಳನ್ನು ಸ್ವಲ್ಪವಾದರೂ ಸೇವಿಸಿ. ಅದರಲ್ಲಿ ಬಾಳೇಹಣ್ಣು, ಮುಖ್ಯವಾಗಿದ್ದು, ಇತರೆ ಹಣ್ಣುಗಳಾದ ಬಗೆಬಗೆಯ ಬೆರಿಗಳು, ದ್ರಾಕ್ಷಿ, ಕಿತ್ತಳೆಯಂತಹ ವೈವಿಧ್ಯಮಯ ಹಣ್ಣುಗಳನ್ನು ಸೇವಿಸಿ. ಮತ್ತು ತಾಜಾ, ಶೀತಲೀಕರಿಸಿದ, ಕಾದಿರಿಸಿದ ಅಥವಾ ಒಣ ಹಣ್ಣುಗಳನ್ನು ಆಯ್ದುಕೊಳ್ಳಿ. ಹಣ್ಣುಗಳ ರಸವನ್ನು ಸೇವಿಸುವುದಕ್ಕಿಂತ ಹಣ್ಣುಗಳನ್ನು ಹಾಗೆಯೇ ತಿನ್ನುವುದು ಉತ್ತಮ. ಕನಿಷ್ಠ ಪ್ರತಿದಿನ ಒಂದೂವರೆ ಕಪ್‌ನಷ್ಟು ಸೇವಿಸಿ.

2. ಬಾದಾಮಿ:

ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ವೈದ್ಯರು ಬಾದಾಮಿ ಬೀಜಗಳನ್ನು ಸೇವಿಸಲು ಸೂಚಿಸುತ್ತಾರೆ. ಕಾರಣ ಏನೆಂದರೆ ಅವರ ದೇಹದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿರೀಕ್ಷಿತ ಮಟ್ಟದಲ್ಲಿ ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಹೃದಯ ರಕ್ತ ನಾಳದ ಸೋಂಕಿನ ವಿರುದ್ಧ ಹೋರಾಡಿ ಮಧುಮೇಹವನ್ನು ನಿವಾರಿಸುವುದರ ಜೊತೆಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.

3. ಧಾನ್ಯಗಳು:

ಇಡೀ ಧಾನ್ಯಗಳ ಸೀರಿಯಲ್‌ಗ‌ಳು, ಬ್ರೆಡ್‌, ಅನ್ನ, ಗರಿಮುರಿ ತಿಂಡಿ ಅಥವಾ ದೋಸೆಗಳನ್ನು ಪ್ರತೀ ದಿನ ಸೇವಿಸಿ. ಒಂದು ಸ್ಲೆಸ್‌ ಇಡೀ ಕಾಳಿನ ಬ್ರೆಡ್‌, ಒಂದು ಕಪ್‌ನ ತಣ್ಣನೆಯ ಬ್ರೇಕ್‌ಫಾಸ್ಟ್‌ ಸೀರಿಯಲ್‌ ಅಥವಾ ಅರ್ಧ ಕಪ್‌ ಬೇಯಿಸಿದ ಸೀರಿಯಲ್‌, ಅನ್ನ ಅಥವಾ ದೋಸೆ. ಸೇವಿಸಬೇಕು. ಇನ್ನೂ ವಿಟಮಿನ್‌ ಬಿ12ಯುಕ್ತ ಸೀರಿಯಲ್‌ಗ‌ಳನ್ನು ಸೇವಿಸಿ.

4. ಮೀನು:

ಮೀನು ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು, ಇದರಲ್ಲಿ ಯಥೇಚ್ಛವಾಗಿ ಒಮೆಗಾ – 3 ಫ್ಯಾಟಿ ಆಸಿಡ್ ಅಂಶಗಳು ಸೇರಿವೆ. ಹೃದಯದ ತೊಂದರೆ ಇರುವವರಿಗೆ ಈ ಅಂಶಗಳು ಬಹಳ ಉಪಯುಕ್ತ. ಜೊತೆಗೆ ಮೀನಿನ ಸೇವನೆಯಿಂದ ವಯಸ್ಸಾದಂತೆ ಕಾಡುವ ಮರೆವಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಧೂಮಪಾನದ ಅಭ್ಯಾಸ ಇರುವವರು ತಮ್ಮ ದೇಹದಲ್ಲಿ ಮೆದುಳಿನಿಂದ ಹರಿದು ಬಂದಿರುವ ನರನಾಡಿಗಳ ಹಾನಿಯನ್ನು ಮೀನಿನ ಸೇವನೆಯಿಂದ ಕಾಪಾಡಿಕೊಳ್ಳಬಹುದು.

5. ಚಕ್ಕೆ ಅಥವಾ ದಾಲ್ಚಿನ್ನಿ:

ಅಡುಗೆ ಮನೆಯಲ್ಲಿ ಸದಾ ಇರುವ ಚಕ್ಕೆ ಅಥವಾ ದಾಲ್ಚಿನ್ನಿ ವಯಸ್ಸಾಗುತ್ತಿದ್ದಂತೆ ಎದುರಾಗುವ ಮಧುಮೇಹಕ್ಕೆ ಒಳ್ಳೆಯ ಮನೆಮದ್ದು. ದೇಹದಲ್ಲಿ ಹೆಚ್ಚಾದ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಕಡಿಮೆ ಮಾಡುತ್ತದೆ. ನೀವು ಸೇವಿಸುವ ಆಹಾರದ ಮೇಲೆ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಕಾಣಬಹುದು. ಅದರಲ್ಲಿ ಉತ್ತಮವಾದ ದಾಲ್ಚಿನ್ನಿ ಸೇವನೆ ಮಧುಮೇಹಕ್ಕೆ ಬಹಳ ಪ್ರಯೋಜನ ಕಂಡು ಬರುತ್ತದೆ. ಆದ್ದರಿಂದ ಮಧುಮೇಹ ಇರುವವರು ಹೆಚ್ಚಿನ ಬೆಲೆಯ ದಾಲ್ಚಿನ್ನಿ ಸೇವಿಸಿ.

6. ಹೈನು ಉತ್ಪನ್ನಗಳು:

ಕ್ಯಾಲ್ಸಿಯಂ ಸಮೃದ್ಧ ಆಹಾರ ಮೂಲ ಆದರಿಂದ ಕಡಿಮೆ ಕೊಬ್ಬು ಹೊಂದಿರುವ ಅಥವಾ ಕೊಬ್ಬು ತೆಗೆದ ಹಾಲು, ಮೊಸರು ಅಥವಾ ಹಾಲಿನ ಉತ್ಪನ್ನಗಳನ್ನು ಆಯ್ದುಕೊಳ್ಳಿ. ಹಾಲನ್ನು ಸೇವಿಸುವುದು ಸಾಧ್ಯವಿಲ್ಲದಿದ್ದರೆ, ಲ್ಯಾಕ್ಟೋಸ್‌ ಮುಕ್ತ ಅಥವಾ ಇತರ ಫೋರ್ಟಿಫೈಡ್‌ ಆಹಾರಗಳು, ಪಾನೀಯಗಳಂತಹ ಕ್ಯಾಲ್ಸಿಯಂ ಮೂಲಗಳನ್ನು ಬಳಸಿ. ಇದರಿಂದ ನಿಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು.

7. ಓಟ್ಸ್ ಸೇವನೆ ಉತ್ತಮ:

ಓಟ್ಸ್ ಗಳಲ್ಲಿ ಹೆಚ್ಚಾಗಿ ಬೀಟಾ – ಗ್ಲುಕಾನ್ ಎಂಬ ನಾರಿನಂಶವಿದ್ದು, ಇದು ಮನುಷ್ಯನ ದೇಹಕ್ಕೆ ಮಾರಕವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಎಂದು ಹೆಸರು ಪಡೆದಿರುವ ಎಲ್ ಡಿ ಎಲ್ ಅಥವಾ ‘ ಲೋ ಡೆನ್ಸಿಟಿ ಲಿಪಾಪ್ರೋಟೀನ್ ‘ ಮಟ್ಟವನ್ನು ತಗ್ಗಿಸುತ್ತದೆ. ಕೆಲವೊಂದು ಅಧ್ಯಯನಗಳು ಸೂಚಿಸಿರುವ ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಸುಮಾರು ಮೂರು ಗ್ರಾಂ ಗಳಷ್ಟು ಓಟ್ಸ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಆತನ ಕೊಲೆಸ್ಟ್ರಾಲ್ ಮಟ್ಟವನ್ನು ಸರಿ ಸುಮಾರು 5 % ರಿಂದ 10 % ರಷ್ಟು ಕಡಿಮೆ ಮಾಡಿಕೊಳ್ಳಬಹುದು.

8. ಬೇಕಾಗಿರುವ ಆಹಾರವನ್ನು ಸರಿಯಾಗಿ ಸೇವಿಸಿ:

ನಿಮ್ಮ ಜೀರ್ಣಕ್ರಿಯೆ ಮತ್ತು ದೇಹಕ್ರಿಯೆಗಳನ್ನು ಚೆನ್ನಾಗಿ ಇರಿಸಿಕೊಳ್ಳಲು ನಾರಿನಂಶ ಸಮೃದ್ಧವಾಗಿರುವ ಆಹಾರ ವಸ್ತುಗಳನ್ನು ಆರಿಸಿ ಉಪಯೋಗಿಸಿ. ಮತ್ತು ದೇಹದಲ್ಲಿ ಯಾವಾಗಲೂ ದ್ರವಾಂಶ ಚೆನ್ನಾಗಿರುವಂತೆ ನೀರು ಮತ್ತು ದ್ರವಾಹಾರಗಳನ್ನು ಸಾಕಷ್ಟು ಕುಡಿಯಿರಿ. ಅಲ್ಲದೆ ಬರೇ ಕ್ಯಾಲೊರಿಗಳು ದೇಹ ಸೇರುವುದನ್ನು ತಡೆಯಲು ಸಕ್ಕರೆ, ಸಿಹಿ ತಿನಿಸುಗಳ ಸೇವನೆಯನ್ನು ನಿಯಂತ್ರಣದಲ್ಲಿ ಇರಿಸಿ. ದೇಹಕ್ಕೆ ಬೇಕಾದ ಎಣ್ಣೆಯಂಶವನ್ನು ಮೀನು, ಎಣ್ಣೆಬೀಜಗಳು ಮತ್ತು ಕ್ಯಾನೊಲಾ, ಆಲಿವ್‌ ಅಥವಾ ಸೋಯಾಬೀನ್‌ ಎಣ್ಣೆಗಳಿಂದ ಪಡೆಯಿರಿ. ಅದರಂತೆ ಕಡಿಮೆ ಉಪ್ಪು ಅಥವಾ ಸೋಡಿಯಂ ಉಪಯೋಗಿಸಿ ಅಡುಗೆ ಮಾಡಿ ಅಥವಾ ಅವು ಕಡಿಮೆ ಇರುವ ಆಹಾರ ಸೇವಿಸಿ.

Also read: ದೇಹದ ತೂಕ ಹೆಚ್ಚಿಸಿಕೊಳ್ಳಲು ಔಷಧಿಗಳನ್ನು ಸೇವಿಸುವ ಬದಲು ಈ ಆಹಾರಗಳನ್ನು ಸೇವಿಸಿ ನೋಡಿ, ಆರೋಗ್ಯದ ಜೊತಗೆ ತೂಕವು ಹೆಚ್ಚಾಗುತ್ತೆ!!