ನಿಮ್ಮ ಕೈ ರೇಖೆಗಳಲ್ಲಿ ಈ ಲಕ್ಷಣಗಳು ನಿಮ್ಮ ವೃತ್ತಿ ಜೀವನದ ಮೇಲೆ ಹೇಗೆ ಪರಿಣಾಮ ಬಿರುತ್ತೆ ಅಂತ ಹೇಳ್ತೀವಿ ಓದಿ!!

0
1208

ಪ್ರತಿಯೊಬ್ಬರೂ ಜೀವನೋಪಾಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಾ ಸಾಗುತ್ತಾರೆ. ಅದರಲ್ಲಿ ಕೆಲವೊಂದು ಸಕ್ಸಸ್ ಆಗಿ ಫಲ ಸಿಕ್ಕು ಜೀವನವನ್ನು ಸಂತೋಷದಿಂದ ಕಳೆದರೆ, ಇನ್ನೂ ಕೆಲವೊಂದು ಉದ್ಯೋಗಗಳು ಫಲ ನೀಡದೆ ಇದ್ದರು ಕೂಡ ಕಷ್ಟಪಟ್ಟು ಮುನ್ನುಗ್ಗುತ್ತಾ ಇರುತ್ತಾರೆ. ಕೆಲವೊಂದು ದಿನಗಳಲ್ಲಿ ಎಷ್ಟೇ ಕಷ್ಟ ಪಟ್ಟರೂ ಫಲ ಸಿಗುವುದಿಲ್ಲವೋ ಆಗ ಕುಸಿದು ಹೋಗುತ್ತಾರೆ, ಏನು ಮಾಡಲು ಅರಿಯದಂತಾಗಿ ಒದ್ದಾಡುತ್ತಾರೆ. ಈ ವಿಚಾರದಲ್ಲಿ ನಮಗೆ ಹಸ್ತಸಾಮುದ್ರಿಕಾ ಶಾಸ್ತ್ರ ಬಹಳವಾಗಿ ಸಹಾಯಕ್ಕೆ ಬರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳ ಬೇಕು.

ಹಸ್ತಸಾಮುದ್ರಿಕಾ ವಿಜ್ಞಾನದಲ್ಲಿ ಆಳ ಅಭ್ಯಾಸ ಮಾಡಿದವರು ಮಾತ್ರ ಭೂತ, ಭವಿಷ್ಯ ಹಾಗೂ ವರ್ತಮಾನಗಳನ್ನು ನಿಖರವಾಗಿ ಹೇಳಬಲ್ಲರು. ಸಾಮಾನ್ಯವಾಗಿ ಪ್ರತಿಯೊಬ್ಬರ ಹಸ್ತರೇಖೆಯೂ ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಇದೆ ಕಾರಣಕ್ಕೆ ಪ್ರತಿಯೊಬ್ಬರ ಭೂತ, ಭವಿಷ್ಯ, ವರ್ತಮಾನಗಳೂ ಬೇರೆಬೇರೆಯಿರುತ್ತದೆ. ಹಾಗಾಗಿ ಸರಿಯಾದ ಜ್ಞಾನವಿಲ್ಲದೆ, ಹಸ್ತರೇಖೆಯಿಂದ ಭವಿಷ್ಯ ತಿಳಿಯಲು ಸಾಧ್ಯವಿಲ್ಲ. ಇದರ ಬಗ್ಗೆ ಸಾಮಾನ್ಯ ಜ್ಞಾನ ವಿದ್ದರೆ ಒಳ್ಳೆಯದಲ್ಲವೇ. ಅಂತಹ ಕೆಲವು ವಿಚಾರಗಳನ್ನು ನಾವು ಈ ಲೇಖನದಲ್ಲಿ ತಿಳಿಸಲಾಗಿದೆ.

1. ಶುಕ್ರ ಪರ್ವತ (ಹೆಬ್ಬೆರಳಿನ ಕೆಳ ಭಾಗ)

ಶುಕ್ರ ಪರ್ವತವು ಹೆಬ್ಬೆರಳಿನ ಕೆಳಗಿನ ಉಬ್ಬಿರುವ ಭಾಗದಲ್ಲಿ ಹಾಗೂ ಜೀವನ ರೇಖೆಯ ಮೇಲ್ಭಾಗದಲ್ಲಿ ರೂಪುಗೊಳ್ಳುತ್ತದೆ. ಶುಕ್ರ ಗ್ರಹವನ್ನು ವೈವಾಹಿಕ ಜೀವನ, ನಿಕಟ ಸಂಬಂಧಗಳು, ಭೌತಿಕ ಸೌಕರ್ಯ ಮತ್ತ ಆಕರ್ಷಣೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿರುವ ಶುಕ್ರ ಪರ್ವತದಲ್ಲಿರುವ ಚಿಹ್ನೆಗಳು ನಮ್ಮ ಸಂಪತ್ತನ್ನು ನಿರ್ಧರಿಸುವುದಂತೆ. ಜ್ಯೋತಿಷ್ಯದ ಅನುಸಾರ ಶುಕ್ರ ಪರ್ವತದ ಮೇಲೆ ಕಮಲದ ಹೂವಿನ ಚಿಹ್ನೆ ಇದ್ದರೆ ಅದನ್ನು ಹೆಚ್ಚು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಕ್ರ ಪರ್ವತದ ಭಾಗ ನಿಮ್ಮ ಅಂಗೈಯಲ್ಲಿ ಉಬ್ಬಿದಂತಿದ್ದರೆ ಅಂತಹ ವ್ಯಕ್ತಿ ಉದ್ಯಮ, ಸಂಗೀತ, ಕಲೆ, ಅಲಂಕಾರ ಇಂತಹ ಕ್ಷೇತ್ರಗಳಲ್ಲಿ ತುಂಬಾ ಹೆಸರನ್ನು ಗಳಿಸುವಂತವರಾಗಿರುತ್ತಾರೆ.

2. ಶನಿ ಪರ್ವತ (ಮಧ್ಯದ ಬೆರಳಿನ ಕೆಳ ಭಾಗ)

ಶನಿ ಪರ್ವತದ ಮೇಲಿರುವ ರೇಖೆಗಳು ಮತ್ತು ಚಿಹ್ನೆಗಳು ವ್ಯಕ್ತಿಯ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡುತ್ತವೆ. ಇವರು ಅವರ ವ್ಯಕ್ತಿತ್ವ, ರಹಸ್ಯ ಜೀವನ, ವೈವಾಹಿಕ ಜೀವನ, ಹಣ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನೂ ಒಳಗೊಂಡಿರುತ್ತದೆ. ಶುಕ್ರ ಪರ್ವತದ ಭಾಗ ನಿಮ್ಮ ಕೈಯಲ್ಲಿ ಉಬ್ಬಿದ್ದರೆ ಅಂಥಹ ವ್ಯಕ್ತಿಗಳು ತುಂಬಾ ಕಷ್ಟ ಪಟ್ಟು ಯಶಸ್ಸನ್ನು ಸಾಧಿಸುವನ್ತವರಾಗಿರುತ್ತಾರೆ. ಅಂಥವರು ನೂತನ ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಇದು ಸಂಶೋಧನೆ ಕ್ಷೆತ್ರವಾದರಿಂದ ನಿಮ್ಮ ಯೋಜನೆ ಮತ್ತು ಉದ್ಯೋಗದಲ್ಲಿ ಸ್ವಲ್ಪ ತಪ್ಪಿನ ಅನುಭವವಾಗಿ. ಅಲ್ಪಸ್ವಲ್ಪ ತೊಂದರೆ ಉಂಟಾಗಬಹುದು. ಇದಕ್ಕೆ ನಿಮ್ಮ ಆತ್ಮವಿಶ್ವಾಸವೆ ಯಶಸ್ವಿಗೆ ಕಾರಣ. ಸೂಕ್ತ ಉದ್ಯೋಗ; ವ್ಯಾಪಾರ, ಸರ್ವೇ ಹಾಗೂ ಸಂಶೋಧನ, ಎಂಜಿನಿಯರಿಂಗ್ ಮತ್ತು ಪುರಾತತ್ವ ವಿಭಾಗ ಕ್ಷೇತ್ರ ಉತ್ತಮ ಆಯ್ಕೆಯಾಗಿದೆ.

3. ಗುರು ಪರ್ವತ (ತೋರುಬೆರಳಿನ ಕೆಳಗಿನ ಭಾಗ)

ಒಂದು ವೇಳೆ ತೋರುಬೆರಳಿನ ಕೆಳಗಿನ ಭಾಗವು ಉಬ್ಬಿದ್ದರೆ, ಈ ವ್ಯಕ್ತಿಗಳು ಕಲಿಕೆಯಲ್ಲಿ ತೀಕ್ಷ್ಣರಾಗಿದ್ದು ಯೋಜನೆಗಳನ್ನು ಹಮ್ಮಿಕೊಳ್ಳುವುದರಲ್ಲಿ ಹಾಗೂ ಅನುಷ್ಠಾನಗೊಳಿಸುವಲ್ಲಿ ಉತ್ತಮರಾಗಿರುತ್ತಾರೆ. ಅಂಥವರಿಗೆ ಹಸ್ತರೇಖಾ ಶಾಸ್ತ್ರದ ಪ್ರಕಾರ, ಉತ್ತಮವಾದ ಹಣ ಸಿಗುತ್ತದೆ. ಅದೃಷ್ಟ ನಿಮ್ಮೊಂದಿಗಿದೆ. ಕೆಲವು ವದಂತಿಗಳಿಗೆ ಕಿವಿಗೊಡಬೇಡಿ. ಎಲ್ಲರಲ್ಲೂ ವಿಶ್ವಾಸವಿಡಿ. ಸಿನಿಮಾ, ಮನರಂಜನಾ ಕ್ಷೇತ್ರ ಉತ್ತಮ ಆಯ್ಕೆ.

4. ಬುಧ ಪರ್ವತ (ಕನಿಷ್ಕ ಬೆರಳು ಅಥವಾ ಕಿರುಬೆರಳಿನ ಕೆಳಭಾಗ)

ಒಂದು ವೇಳೆ ಎರಡೂ ಕೈಯಲ್ಲಿ ಬುಧ ಪರ್ವತ ಉಬ್ಬಿದ್ದರೆ, ಅಂಥಹ ವ್ಯಕ್ತಿಗಳಿಗೆ ಹೆಚ್ಚಿನ ಅವಕಾಶಗಳು ಇದ್ದು ಅದರಂತೆ ಗುರಿ ಮುಟ್ಟುವ ಹಂಬಲ ನಿಮ್ಮಲ್ಲಿ ಇರುತ್ತದೆ. ಮುಖ್ಯವಾಗಿ ಉತ್ತಮ ಹುಟ್ಟುತ್ತಾನೆ ನಾಯಕತ್ವ ಗುಣ ನಿಮ್ಮಲ್ಲಿದೆ. ಟೀಂ ಮ್ಯಾನೇಜನರ್‌ ಅಥವಾ ಲೀಡರ್‌ ಹೆಸರು ಬರುವ ಕ್ಷೆತ್ರವು ಮತ್ತು ಸಂತ ಉದ್ಯಮದಲ್ಲಿ ಯಶಸ್ವಿ ನಿಮ್ಮದಾಗಿರುತ್ತದೆ.

5. ಸೂರ್ಯ ಪರ್ವತ (ಉಂಗುರದ ಬೆರಳಿನ ಕೆಳ ಭಾಗ)

ವ್ಯಕ್ತಿಯ ಉಂಗುರದ ಬೆರಳಿನ ಕೆಳ ಭಾಗದಲ್ಲಿ ಈ ಸೂರ್ಯ ಪರ್ವತವು ಈ ವ್ಯಕ್ತಿ ಅತಿ ಪ್ರಭಾವಿಯಾಗಿದ್ದು ಇತರರ ಮೇಲೆ ತಮ್ಮ ಅನಿಸಿಕೆಗಳನ್ನು ಹೇರುವ ವ್ಯಕ್ತಿತ್ವದವರಾಗಿರುತ್ತಾರೆ. ಈ ವ್ಯಕ್ತಿಗಳು ನಿಮ್ಮ ಸಾಮರ್ತ್ಯ ಎಂತದು ಅಂದ್ರೆ ಉದ್ಯೋಗ ಯಾವುದಾದರು ಮುನ್ನುಗಿವ ಸಾಮರ್ಥ್ಯ‌ ನಿಮ್ಮದಾಗಿದು ವಿಪುಲವಾದ ಅವಕಾಶಗಳು ನಿಮಗೆ ಬಂದೊದಗಲಿವೆ. ಮನೆ ಅಲಂಕಾರ, ಪೇಂಟಿಂಗ್ ಮತ್ತು ಜಾಹೀರಾತು, ಮತ್ತು ಬೋಧನಾ ಕ್ಷೇತ್ರ ಅತ್ಯುತ್ತಮ.

“ಜ್ಯೋತಿಷವೇ ಅಂತಿಮವಲ್ಲ. ಅದು ಕೇವಲ ಮಾರ್ಗದರ್ಶಿಯಷ್ಟೇ, ಆಯ್ಕೆ ನಿಮ್ಮದು”

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂತಹ ರೇಖೆ ನಿಮ್ಮ ಕೈಯಲ್ಲಿದ್ದರೆ ನೀವೇ ರಾಜರು, ನೀವೇ ಕೋಟ್ಯಾಧಿಪತಿಗಳು.!