ತರಾತುರಿಯಲ್ಲಿ ಟೆಂಡರ್ ಕರೆದ ಕುಮಾರಸ್ವಾಮಿ ನೇತೃತ್ವದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಕಾಮಗಾರಿಗೆ ಹೈಕೋರ್ಟ್ ತಡೆ..

0
495

ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ವಿವಾದಾತ್ಮಕ ಎತ್ತರದ ಕಾರಿಡಾರ್ ಯೋಜನೆಯ ವಿರುದ್ಧ ತಡೆ ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಸಿಟಿಜನ್ಸ್ ಆಕ್ಷನ್ ಫೋರಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅವರಿದ್ದ ಪೀಠ ಸೂಚನೆ ನೀಡಿದೆ. ಅದರಂತೆ ತರಾತುರಿಯಲ್ಲಿ ಟೆಂಡರ್ ಕರೆದಿದ್ದು ಎಂದು ಹೈಕೋರ್ಟ್ ಟೆಂಡರ್‌ನ್ನು ತಡೆ ಹಿಡಿದಿದೆ.

Also read: ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಹೋದ ರಮ್ಯಾಗೆ ಮಂಗಳಾರತಿ; ರಮ್ಯಾಗೆ ಮತಹಾಕಲು ಫ್ರೀ ಟಿಕೆಟ್ ಕೊಟ್ಟು ಕರೆದ ಯುವಕ..

ಏನಿದು ಸುದ್ದಿ?

ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ವ್ಯಾಪ್ತಿಯಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯಡಿ ಲೂಪ್ ಮಾದರಿಯಲ್ಲಿ ಮೇಲು ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಇದರಿಂದ ಕಬನ್ ಪಾರ್ಕ್ ಮತ್ತು ಕ್ವೀನ್ಸ್ ರಸ್ತೆಯ ಸುಮಾರು 858 ಮರಗಳನ್ನು ಯೋಜನೆಯಲ್ಲಿ ಕಡಿತಗೊಳಿಸಲಾಗುವುದು ಎಂದು ತಿಳಿಸಿತ್ತು. ನಂತರ ಈ ಯೋಜನೆಯಲ್ಲಿ 3700 ಗಿಂತಲೂ ಹೆಚ್ಚಿನ ಮರಗಳನ್ನು ಕತ್ತರಿಸಲಾಗುವುದು ಎಂದು ತಿಲಿಸಿತು ಇದಕ್ಕೆ ಸಾಮಾಜಿಕ ಜಾಲತನಗಳಲ್ಲಿ ವಿರೋಧಗಳು ಕೇಳಿ ಬಂದು ಆನ್ಲೈನ್ ಮೂಲಕ ತಡೆ ಅರ್ಜಿ ಸಲ್ಲಿಸಲು ಅಭಿಯಾನ ಶುರುಮಾಡಿದರು.

Also read: ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಎಫೆಕ್ಟ್; ಭಾರತದಲ್ಲೇ ಈಗ ಅನೇಕ ಶಸ್ತ್ರಾಸ್ತ್ರ ತಯಾರಿ, ಹೀಗೆ ಮುಂದುವರೆದರೆ ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ನಂಬರ್ ಒನ್ ಆಗಬಹುದು!!

ಈ ಅರ್ಜಿಗೆ Change.org ಯಲ್ಲಿ 1, ಲಕ್ಷಕ್ಕೂ ಹೆಚ್ಚು ಜನರು ಸಹಿ ಮಾಡಿದ್ದಾರೆ. ಇದೆ ರೀತಿಯ ಇನ್ನೊದು ಜಾತಕದಲ್ಲಿ 13,000 ಹೆಚ್ಚು ಸಹಿಗಳು ಬಂದಿವೆ. ಇದಕ್ಕೆ ಇಷ್ಟೊಂದು ವಿರೋಧಗಳು ಬಂದಿರುವ ಹಿನ್ನೆಲೆಯಲ್ಲಿ ಸಿಟಿಜನ್ಸ್ ಆಕ್ಷನ್ ಫೋರಂ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ತರಾತುರಿಯಲ್ಲಿ ಟೆಂಡರ್ ಕರೆದು ಈ ಟೆಂಡರ್‌ನ್ನು ತಡೆಯುವ ಮೂಲಕ ಹೈಕೋರ್ಟ್ ತೀರ್ಪನ್ನು ಮಾರ್ಚ್ 19ಕ್ಕೆ ಮುಂದೂಡಿದೆ. ಎರಡನೇ ಮೂರು ಭಾಗದಷ್ಟು ಚುನಾಯಿತ ಕಾರ್ಪೊರೇಟರ್‌ಗಳು, ಮೆಟ್ರೋ ಪೊಲಿಟನ್ ಪ್ಲಾನಿಂಗ್ ಕಮಿಟಿ ಸಮ್ಮುಖದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಹಾಗಾಗಿ ಹೈಕೋರ್ಟ್ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ತಡೆ ನೀಡಿ.

ಮೆಟ್ರೋಪಾಲಿಟನ್ ಕಮಿಟಿಯ ಕಾರ್ಯಾಚರಣೆಯ ಬಗ್ಗೆ ವಿಚಾರಣೆ ನಡೆಸುವವರೆಗೂ ಈ ವಿಷಯದಲ್ಲಿ ಮುಂದುವರಿಯಬಾರದು ಎಂದು ರಾಜ್ಯ ಸರಕಾರವನ್ನು ಕೇಳಿದೆ. ವಿಚಾರಣೆಯ ಮುಂದಿನ ದಿನಾಂಕ ಮಾರ್ಚ್ 19 ರಂದು ನಿಗದಿಯಾಗಿದೆ. 74 ನೆಯ ಸಾಂವಿಧಾನಿಕ ತಿದ್ದುಪಡಿಯ ಪ್ರಕಾರ, ಎಲ್ಲಾ ನಗರ ಯೋಜನಾ ಚಟುವಟಿಕೆಗಳನ್ನು ಮೆಟ್ರೋಪಾಲಿಟನ್ ಯೋಜನೆ ಸಮಿತಿಯಿಂದ ಮಾಡಬೇಕಾಗಿದೆ, ಅದರಲ್ಲಿ ಮೂರರಲ್ಲಿ ಎರಡು ಭಾಗದ ಸದಸ್ಯರು ಕಾರ್ಪೋರೇಟರ್ಗಳಾಗಿ ಚುನಾಯಿಸಬೇಕು. ಎಂದು ಹೈಕೋರ್ಟ್ ಆದೇಶವನ್ನು ಜಾರಿಗೆ ತಂದಿದೆ.

Also read: ಕ್ಯಾನ್ಸರ್ ಖಾಯಿಲೆಯ ಮಾತ್ರೆಗಳು ತುಂಬಾ ದುಬಾರಿ, ಬಡವರಿಗೆ ನೆರವಾಗಲು ಮೋದಿ ಸರ್ಕಾರ 390 ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿದೆ!!

ಈ ಪ್ರಕರಣವನ್ನು ವಿಲೇವಾರಿ ಮಾಡುವ ತನಕ ಎತ್ತರವಾದ ಕಾರಿಡಾರ್ ಯೋಜನೆ ಮತ್ತು ಇತರ ದೊಡ್ಡ ಪ್ರಮಾಣದ ಯೋಜನೆಗಳು ಮುಂದುವರಿಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈಗಾಗಲೇ ಮೊದಲ ಹಂತದ ಕಾರಿಡಾರ್ ಗೆ ಮೂರು ಪ್ಯಾಕೇಜ್‌ನಡಿ ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಲೂಪ್ ಮಾದರಿಯ ಮೇಲು ರಸ್ತೆಯನ್ನು ಸೇರ್ಪಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಟೆಂಡರ್ ಆಹ್ವಾನಿಸಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತರುವ ಯೋಜನೆಯನ್ನು ಕೆಆರ್‌ಡಿಸಿಎಲ್ ಅಭಿಪ್ರಾಯವಾಗಿದೆ.