ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯ ಸ್ಟಾನ್ ಫರ್ಡ್ ಶುರುವಾಗಿದ್ದು ಒಬ್ಬನ ಅಹಂಕಾರವಾದ ಮಾತಿನಿಂದ ಅಂತ ತಿಳಿದರೆ ಆಶ್ಚರ್ಯ ಪಡ್ತೀರ…

0
1197

ನಾನು ಅನ್ನುವುದನ್ನು ಬಿಟ್ಟಾಗ, ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಅಹಂಕಾರವನ್ನು ಗೆಲ್ಲದೇ ಹೋದರೆ, ಎಷ್ಟೇ ಸಾಧನೆ ಮಾಡಿದರೂ ಅದು ಕ್ಷುಲ್ಲಕವೇ ಆಗುತ್ತದೆ. ಯಾವುದೇ ಸಾಧಕನಿಗೆ ಅಹಂಕಾರ ಅತಿ ದೊಡ್ಡ ತೊಡಕು. ವಿನಯ ಮತ್ತು ಅಹಂಕಾರ ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಂದರೆ ಇವೆರಡು ಪರಸ್ಪರ ವಿರುದ್ಧ ನಡವಳಿಕೆಗಳು. ಈ ನಿಟ್ಟಿನಲ್ಲಿ ಅಮೇರಿಕಾದಲ್ಲಿ ನಡೆದ ಒಂದು ಘಟನೆ ನಿಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನಮಗೆಲ್ಲ ಪಾಠವಾಗಲಿ.

ಅಮೇರಿಕಾದ Watson ನಗರದಲ್ಲಿ ಇದೆ Harvard University. ಇದು ಬಹಳ ಪ್ರಖ್ಯಾತವಾದ ವಿಶ್ವವಿದ್ಯಾನಿಲಯ. ಅಲ್ಲಿ ಒಂದು ದಿನ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರ ಕೊಠಡಿಯ ಮುಂದೆ ಓರ್ವ ವೃಧ್ಧ ದಂಪದಿಗಳು ಸ್ವಲ್ಪ ಹಳೆಯದ್ದಾದ ಹತ್ತಿ ಬಟ್ಟೆಯನ್ನ ಧರಿಸಿ ನಿಂತಿದ್ದರು. ತುಂಬಾ ವಯಸ್ಸಾದ ದಂಪದಿಗಳು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರ ಕೊಠಡಿಯ ಮುಂದೆ ನಿಂತಿದ್ದನ್ನು ಕಂಡ ಪ್ರಾಂಶುಪಾಲರ ಕೊಠಡಿಯ ಜವಾನ ದಂಪದಿಗಳನ್ನು ಕರೆದು ಯಾರು ನೀವು.? ಇಲ್ಲಿಗೆ ಯಾಕೆ ಬಂದಿದ್ದಿರಿ ಅಂತ ತುಂಬಾ ಜೋರಾಗಿ ಪ್ರಶ್ನೆ ಮಾಡಿದ. ಆಗ ಆ ದಂಪದಿಗಳು ತುಂಬಾ ವಿನಯದಿಂದ ಇಲ್ಲ ಸ್ವಾಮಿ ನಾವು ಈ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರನ್ನು ಕಾಣಬೇಕಿದೆ ದಯಮಾಡಿ ನಮ್ಮನ್ನು ಒಳಗಡೆ ಬಿಡಿ ಎಂದು ಕೇಳಿಕೊಂಡರು. ಈ ಮಾತನ್ನು ಕೇಳಿದ ತಕ್ಷಣವೇ ಜವಾನ ಇಲ್ಲ ಹಾಗೆಲ್ಲ ಬಿಡೋಕೆ ಆಗಲ್ಲ.

ಅವರಿಗೆ ತುಂಬಾ ಕೆಲಸವಿರುತ್ತದೆ ಬಿಡುವೆ ಇರುವುದಿಲ್ಲ ಹಾಗೆಲ್ಲ ನಿಮ್ಮಂಥವರನ್ನು ನೋಡೋಕೆ ಆಗೋಲ್ಲ ಹೊರಟುಹೋಗಿ ಎಂದು ಜೋರಾಗಿ ಹೇಳುತ್ತಾನೆ. ಸ್ವಾಮಿ ಏನು ಪರವಾಗಿಲ್ಲ ನಾವು ಅವರಿಗೋಸ್ಕರ ಕಾಯುತ್ತೇವೆ. ಎಷ್ಟು ಹೊತ್ತಾದರೂ ಪರವಾಗಿಲ್ಲ ಎಂದು ಜವಾನನಿಗೆ ಹೇಳಿ ಅಲ್ಲೇ ಕೊಠಡಿಯ ಮುಂದೆ ಇರುವ ಚೆರುಗಳ ಮೂಲೆಯಲ್ಲಿ ಕುಳಿತುಕೊಳ್ಳುತ್ತಾರೆ. ಅದಕ್ಕೆ ಜವಾನ ನಿಮ್ಮ ಹಣೆಬರಹ ಕಾಯಿರಿ ಎಂದು ಹೇಳಿ ತನ್ನ ಪಾಡಿಗೆ ತಾನು ಕುಳಿತುಕೊಳ್ಳುತ್ತಾನೆ.

ಹೀಗೆ 1 ಘಂಟೆ 2 ಘಂಟೆ 3 ಘಂಟೆ ಆಗುತ್ತೆದೆ ಮಧ್ಯಾಹ್ನದ ಹೊತ್ತಾಗುತ್ತದೆ ಯಾರು ಆ ವೃಧ್ಧ ದಂಪದಿಗಳನ್ನು ಯಾರು ಮಾತನಾಡಿಸುವುದಿಲ್ಲ. ಮಧ್ಯಾಹ್ನದ ನಂತರ ಮತ್ತೆ 1 2 ಘಂಟೆಗಳು ಕಳೆದುಹೋಗುತ್ತದೆ. ಹಾಗೆ ವೃಧ್ಧ ದಂಪದಿಗಳು ಅಲ್ಲೇ ಕಾಯುತ್ತ ಕುಳಿತಿರುತ್ತಾರೆ. ಈ ಸುದ್ದಿ ಒಳಗಡೆ ಕುಳಿತಂತಹ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರ ಬಳಿ ಹೋಗುತ್ತದೆ. ಆಗ ಪ್ರಾಂಶುಪಾಲ ತಮ್ಮಲ್ಲೇ ತಾವು ಈ ದಂಪದಿಗಳು ಬಿಡುವಹಾಗೆ ಕಾಣುತ್ತಿಲ್ಲ, ಯಾರೋ ಇವರು ವಯಸ್ಸಾದವರು ಬುದ್ದಿ ಇಲ್ಲಾ ಮಾಡೋಕೆ ಕೆಲಸನು ಇಲ್ಲ ಹೀಗೆ ನಮ್ಮ ತೆಲೆತಿನ್ನೋಕೆ ಬರುತ್ತಾರೆ ಅಂತ ಗೊಣಗುತ್ತ ಜವಾನನಿಗೆ ಆ ವೃಧ್ಧ ದಂಪದಿಗಳನ್ನು ಬರಲು ಹೇಳುತ್ತಾನೆ.

ಆಗ ಈ ವೃಧ್ಧ ದಂಪದಿಗಳು ಒಳಗಡೆ ಬಂದು ಕುಳಿತುಕೊಳ್ಳುತ್ತಾರೆ. ಪ್ರಾಂಶುಪಾಲ ಏನಾಗಬೇಕಿತ್ತು ಸ್ವಾಮಿ ಎಂದು ಕೇಳುತ್ತಾನೆ.. ಬೇಗ ಬೇಗ ಹೇಳಿ ನನ್ನ ಹತ್ತಿರ ಸಮಯವಿಲ್ಲ ಎಂದು ಹೇಳುತ್ತಾನೆ. ಆಗ ವೃಧ್ಧ ಹೇಳುತ್ತಾನೆ ಈ ವಿಶ್ವವಿದ್ಯಾನಿಲಯದಲ್ಲಿ ನನ್ನ ಮಗ ಓದುತ್ತಿದ್ದ. ಅವನು ಒಂದು ಅಪಘಾತದಲ್ಲಿ ತಿರಿಹೋದ, ಅವನ ನೆನಪಿಗೆ ಯನಾದರೂ ಮಾಡಬೇಕು ಎಂಬುವುದು ನಮ್ಮ ಆಸೆ ಅಂತ ಹೇಳುತ್ತಿದ್ದಂತೆ ಪ್ರಾಂಶುಪಾಲ ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳದೆ ಮದ್ಯದಲ್ಲಿ ಏನು ಅವನ ವಿಗ್ರಹ ವನ್ನು ಇಲ್ಲಿ ಇಡಬೇಕಾ ಹಾಗೆ ವಿಗ್ರಹಗಳನ್ನು ಇಡುತ್ತಾ ಹೋದರೆ ವಿಶ್ವವಿದ್ಯಾನಿಲಯದ ತುಂಬಾ ಅಂತವರ ವಿಗ್ರಹದಿಂದ ತುಂಬಿ ಹೋಗುತ್ತದೆ ಎಂದು ಇಂತಹ ಮಾತುಗಳನ್ನು ಆಡಬೇಡಿ ನನ್ನ ಸಮಯ ವ್ಯರ್ಥ ಮಾಡಬೇಡಿ ಎಂದು ಜೋರಾಗಿ ಹೇಳುತ್ತಾನೆ.

ಇದನ್ನೆಲ್ಲಾ ಕೇಳಿ ತಾಳ್ಮೆಯನ್ನು ಕಳೆದುಕೊಳ್ಳದ ಆ ವೃಧ್ಧ ಹೇಳುತ್ತಾನೆ ಹಾಗೇನು ಇಲ್ಲ ನನ್ನ ಮಗನ ಹೆಸರಿನಲ್ಲಿ ಏನಾದರು ಒಂದು ಕಟ್ಟಡವನ್ನು ಕಟ್ಟಬೇಕೆಂದು ಕೊಂಡಿದ್ದೇನೆ ಅದಕ್ಕೆ ನಿಮ್ಮನ್ನು ಕಾಣಲು ಬಂದಿರುವೆ ಎಂದು ಹೇಳುತ್ತಾನೆ. ಅದನ್ನ ಕೇಳಿದ ಪ್ರಾಂಶುಪಾಲ ವ್ಯಂಗ್ಯವಾಗಿ ನಗುತ್ತಾರೆ. ಏನು ಕಟ್ಟಡ ಕಟ್ಟಬೇಕಾ ಈ ವಿಶ್ವವಿದ್ಯಾನಿಲಯದ ಕಟ್ಟಡ ಕಟ್ಟಲು ಎಷ್ಟು ಗೊತ್ತ ೫೦ ಮಿಲಿಯೇನ್ ಡಾಲರ್ ಬೇಕು ಅಂದಾಗ ಆ ವೃಧ್ಧ ದಂಪದಿಗಳು ಒಬ್ಬರ ಮುಖವನ್ನ ಒಬ್ಬರು ನೋಡುತ್ತಾ ಹೌದ, ಒಂದು ವಿಶ್ವವಿದ್ಯಾಲಯವನ್ನು ಕಟ್ಟಲು ಬರಿ ೫೦ ಮಿಲಿಯೇನ್ ಡಾಲರ್ ಸಾಕಾದರೆ ನಾವು ಯಾಕೆ ಇವರಿಗೆ ದುಡ್ಡು ಕೊಡಬೇಕು ಎಂದು ವೃದ್ಹೆ ಬನ್ನಿ ನಾವೇ ಒಂದು ಪ್ರತೇಕವಾದ ವಿಶ್ವವಿದ್ಯಾನಿಲಯ ಕಟ್ಟೋಣ ಅಂತ ಹೇಳಿ ಆ ಹಿರಿಯ ದಂಪತಿಗಳು ಎದ್ದು ಹೊರಗಡೆ ಹೋಗುತ್ತಾರೆ. ಹೋಗಿ ಅವರು ಒಂದು ವಿಶ್ವವಿದ್ಯಾನಿಲಯವನ್ನು ಕಟ್ಟುತ್ತಾರೆ ಅದುವೇ “Stanford University” ಅಲ್ಲಿಗೆ ಬಂದಂತಹ ಆ ಹಿರಿಯ ದಂಪತಿಗಳು Leland Stanford ಅವರು ಆಪಾರ ಶ್ರೀಮಂತರು ಆದರೆ ಎಷ್ಟು ಸರಳವಾದ ಬದುಕನ್ನು ನಡೆಸುತ್ತಾರೆ ಅಂದರೆ ಹತ್ತಿ ಬಟ್ಟೆಯನ್ನು ಹಾಕಿಕೊಂಡು ಬದುಕನ್ನ ನಡೆಸುತಿರುತ್ತಾರೆ.

ಈ ಕಥೆಯಿಂದ ತಿಳಿಯುವುದೇನೆಂದರೆ ಉನ್ನತ ಹುದ್ದೆಯಲ್ಲಿ ಇರುವಂತಹ ಜನ ನಮ್ರತೆಯನ್ನು ಉಳಿಸಿಕೊಳ್ಳಲಿಲ್ಲ ಅಂದರೆ ಆ ಹುದ್ದೆಯಲ್ಲಿ ಮುಂದುವರೆಯಲು ಅವರು ಯೋಗ್ಯರಲ್ಲ ಎಂದು ಮನಗಾಣಬೇಕಗುತ್ತೆ. ದುಡ್ಡು ಇದೆ ಅಂತ ಅಹಂಕಾರ ಪಡಬಾರದು.