ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ಸ್ಥಳ ಪುರಾಣ/ಉದ್ಬವದ ಹಿನ್ನೆಲೆ…!!

0
4184

ಭಕ್ತಿವರ್ಧನ ಕ್ಷೇತ್ರ ಎಂದೇ ಖ್ಯಾತವಾದ ಹೊಳೆನರಸೀಪುರ ಟೌನ್ ಕೋಟೆಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವು ಸುಮಾರು 625 ವರ್ಷಗಳ ಹಿಂದೆ ಚೋಳ ಶೈಲಿ ಪ್ರಕಾರ ಕಟ್ಟಲ್ಪಟ್ಟಿದೆ. ಈ ದೇವಾಲಯವು ಅತ್ಯಂತ ಪ್ರಸಿದ್ದವಾಗಿದ್ದು ಪ್ರಪಂಚದ ನಾನಾ ಕಡೆಗಳಿಂದ ಭಕ್ತಾಧಿಗಳು ಆಗಮಿಸಿ ಈ ದೇವರ ಸೇವೆಯನ್ನು ಮಾಡತ್ತಾರೆ.

source: rcmysore-portal.kar.nic.in

ಸ್ಥಳದ ಮಹಿಮೆ

ವಶಿಷ್ಟ ಮಹರ್ಷಿಗಳು ಇಲ್ಲಿಗೆ ಆಗಮಿಸಿ ದೇವಸ್ಥಾನವಿರುವ ಜಾಗದಲ್ಲಿ ಹಂಗರಮರದ ಹತ್ತಿರ ಪರ್ಣಶಾಲೆಯನ್ನು ನಿರ್ಮಿಸಿಕೊಂಡು ಶ್ರೀ ನರಸಿಂಹಸ್ವಾಮಿಯನ್ನು ಕುರಿತು ತಪಸ್ಸು ಮಾಡಿದರೆಂಬ ಹಿನ್ನೆಲೆ ಇದೆ. ಪಾಲ್ಗುಣ ಶುದ್ದಪೂರ್ಣಿಮ ಪುಚ್ಚ ನಕ್ಷತ್ರ ದಿನ ಬೆಳಗಿನ ಜಾವ ಶ್ರೀ ನರಸಿಂಹಸ್ವಾಮಿಯವರಿಗೆ ದರ್ಶನ ಕೊಟ್ಟರೆಂದು ನನ್ನನ್ನು ಕುರಿತು ಯಾತಕ್ಕಾಗಿ ತಪಸ್ಸು ಮಾಡಿದೆ, ಶ್ರೀ ಸ್ವಾಮಿಯವರು ವಶಿಷ್ಟ ಮಹರ್ಷಿಗಳನ್ನು ಕೇಳಲಾಗಿ ನನಗಾಗಿ ಏನೂ ಬೇಕಿಲ್ಲ ಇಲ್ಲಿಗೆ ಬರುವ ಭಕ್ತಾದಿಗಳ ಇಷ್ಟಾರ್ಥವನ್ನು ನೀನು ನೆರವೇರಿಸಿಕೊಡಬೇಕಾಗಿಯೂ ಅದಕ್ಕಾಗಿ ನೀನು ಇಲ್ಲಿಯೇ ನೆಲೆಸುವಂತೆ ಪ್ರಾರ್ಥಿಸಿಕೊಂಡರೆಂದು ಅದರಂತೆ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯವರು ಇಲ್ಲೇ ನೆಲೆಸಿದರೆಂದು ಪ್ರತೀತಿ ಇದೆ.

source: rcmysore-portal.kar.nic.in

ಭಕ್ತಿವರ್ಧನ ಕ್ಷೇತ್ರ ಎಂದೇ ಖ್ಯಾತವಾದ ಹೊಳೆನರಸೀಪುರ ಪಟ್ಟಣದಲ್ಲಿ 14ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಭವ್ಯ ಹಾಗೂ ವಿಶಾಲವಾದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವಿದೆ. ಈ ದೇವಾಲಯದಲ್ಲಿ 3 ವಿಷ್ಣು ದೇವರುಗಳಾದ ಶ್ರೀ ಲಕ್ಷ್ಮಿ ನಾರಾಯಣ, ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ, ಶ್ರೀ ಗೋಪಾಲಕೃಷ್ಣ ದೇವತಾ ವಿಗ್ರಹಗಳು ಎದುರು ಬದುರು ಇರುವುದರಿಂದ ಈ ಜಾಗಕ್ಕೆ ತ್ರಿಕುಟಾಚಲ ಎಂದು ಹೆಸರಿರುತ್ತದೆ. ಹೊರಗಡೆ ಸಭಾ ಮಂಟಪದಲ್ಲಿ ಶ್ರೀ ಪ್ರಸನ್ನ ಕಮಲ ಮಹಾಲಕ್ಷ್ಮಿಯ ಸುಂದರ ವಿಗ್ರಹ ಇರುತ್ತದೆ. ಇವರು ಈ ಊರಿನ ಗ್ರಾಮದೇವತೆಯೂ ಹೌದು.

source: rcmysore-portal.kar.nic.in

ಹೇಮಾವತಿ ನದಿ ದಂಡೆಯ ಮೇಲಿರುವ ಈ ಊರಿಗೆ ನರಸಿಂಹನಾಯಕ 1168ರಲ್ಲಿ ಕೋಟೆ ಕಟ್ಟಿದನೆಂದು ತಿಳಿದು ಬರುತ್ತದೆ. ಕೋಟೆಯ ಅವಶೇಷಗಳು ಇಂದಿಗೂ ಕಾಣಸಿಗುತ್ತವೆ. ಅವರ ಕಾಲದಲ್ಲಿ ಈ ದೇವಸ್ಥಾನವು ಜಿರ್ಣೋದ್ದಾರವಾಗಿದ್ದು, ನವಾಂಗಣ, ಸಭಾಮಂಟಪ, ಮಹಾದ್ವಾರದ ಗೋಪುರ ನಿರ್ಮಿಸಲ್ಪತ್ತಿದೆ. ಯಾವ ದಿವಸ ಶ್ರೀ ವಶಿಷ್ಟ ಮಹರ್ಷಿಗಳಿಗೆ ಪ್ರತ್ಯಕ್ಷರಾದರೋ ಅದೇ ದಿನ ಪಾಲ್ಗುಣ ಮಾಸದ ಪುಚ್ಚಾ ನಕ್ಷತ್ರದ ದಿನ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬದ ದಿವಸ ಶ್ರೀಯವರ ರಥೋತ್ಸವವು ಸುರ್ಯೋದಯ ಸಮಯಕ್ಕೆ ರಥಾರೋಹಣವಾಗಿ ರಥೋತ್ಸವವು ಪ್ರತಿ ವರ್ಷವು ನಡೆಯುತ್ತದೆ.

source: rcmysore-portal.kar.nic.in

ಈ ದೇವಾಲಯವು ಪುರಾತನ ಕಾಲದಿಂದ ವೈಖಾನಸಾಗ ಮೊಕ್ತವಾಗಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಪ್ರಾಂಗಣದಲ್ಲಿ ಭಕ್ರ ವಿಗ್ರಹಗಳಾದ ಆಳ್ವಾರ್‍ಗಳು ಮತ್ತು ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ, ಶ್ರೀ ಚಿಕ್ಕಿನುಂಡೆ ನರಸಿಂಹಸ್ವಾಮಿ, ಶ್ರೀ ಆಂಜನೇಯ, ಗರುಡ, ದ್ವಾರಪಾಲಕ ವಿಗ್ರಹಗಳು ಇರುತ್ತವೆ. ಈ ಊರಿಗೆ ಭಕ್ತಿ ವರ್ದನ ಕ್ಷೇತ್ರ ಎಂದು ಹೆಸರು ಕೂಡ ಇರುತ್ತದೆ. ಹೇಮಾವತಿ ನದಿ ಮತ್ತು ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಇರುವುದರಿಂದ ಈ ಊರಿಗೆ ಹೊಳೆನರಸಿಂಹಪುರ ಎಂದು ಹೆಸರಿದ್ದು ಅದು ಆಡು ಭಾಷೆಯಲ್ಲಿ ಹೊಳೆನರಸೀಪುರ ಎಂದು ಕರೆಯಲ್ಪಟ್ಟಿರುತ್ತದೆ.

ದೇವಸ್ಥಾನದ ಪೂಜಾ ಸಮಯ

ಪ್ರತಿ ದಿನ ಬೆಳಿಗ್ಗೆ 7.00 ಗಂಟೆ ಯಿಂದ ಮಧ್ಯಾಹ್ನ 1.00 ಗಂಟೆವರೆಗೆ.
ಸಂಜೆ 6.00 ಗಂಟೆ ಯಿಂದ ರಾತ್ರಿ 9.00 ಗಂಟೆವರೆಗೆ.

ದೇವಸ್ಥಾನದ ವಿಳಾಸ

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ
ಹೊಳೆನರಸೀಪುರ ಗ್ರಾಮ
ಹೊಳೆನರಸೀಪುರ ತಾಲ್ಲೂಕು,
ಹಾಸನ ಜಿಲ್ಲೆ.