ಪಾಸ್-ಪೋರ್ಟ್ ಇಲ್ಲ ಅಂತ ವಿದೇಶ ಪ್ರವಾಸ ಮಾಡೋಕೆ ಆಗ್ತಿಲ್ಲ ಅಂತ ಯೋಚನೆ ಮಾಡ್ಬೇಡಿ, ಇನ್ಮೇಲಿಂದ ಈ ದೇಶಗಳಿಗೆ ಹೋಗಿಬರಲು ಅಧಾರ್ ಕಾರ್ಡ್ ಸಾಕು!!

0
1116

ಜೀವನದಲ್ಲಿ ಒಮ್ಮೆಯಾದರು ಹೊರದೇಶಗಳಿಗೆ ಹೋಗಲೇಬೇಕು ಅಂತ ಎಲ್ಲರ ಕನಸೇನೋ ಇರುತ್ತೆ ಆದರೆ ಹೋಗಲು ಸಾಧ್ಯವಾಗುವುದಿಲ್ಲ ಏಕೆಂದರೆ ವೀಸಾ ಪಾಸ್ಪೋರ್ಟ್ ಮಾಡಿಸಿಕೊಂಡು ಹೋಗುವುದು ಒಂದು ರೀತಿಯ ತಲೆನೋವು ಅದಕ್ಕಾಗಿಯೇ ಬಹುತೇಕ ಜನರು ತಮ್ಮ ವಿದೇಶಿ ಪ್ರವಾಸವನ್ನು ಕೈ ಬಿಡುತ್ತಾರೆ. ಇನ್ನು ಕೆಲವೊಬ್ಬರಿಗೆ ಅನಿವಾರ್ಯವಾಗಿ ಹೋಗಲೇ ಬೇಕಾದ ಸಮಯದಲ್ಲಿ ಹೇಗೋ ಬೇಕಾದ ಎಲ್ಲ ದಾಖಲೆಗಳನ್ನು ರೆಡಿ ಮಾಡಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಈ ಪ್ರವಾಸ ಮಾಡಲು ನಮ್ಮಿಂದ ಸಾಧ್ಯವಾಗದು ಅಂತ ನಿರಾಸೆರಾಗುತ್ತಾರೆ. ಅಂತವರು ಇನ್ಮುಂದೆ ಚಿಂತಿಸಬೇಕಿಲ್ಲ ಬರಿ ಆಧಾರ್ ಕಾರ್ಡ್ ಇದ್ದರೆ ಸಾಕು ಈ ದೇಶಗಳಿಗೆ ಪ್ರವಾಸ ಮಾಡಬಹುದು.

ಆಧಾರ್ ಕಾರ್ಡ್ ನಿಂದ ವಿದೇಶ ಪ್ರಯಾಣ ಹೇಗೆ?

ಹೌದು 15 ವರ್ಷಕ್ಕಿಂತ ಕೆಳಗೆ ಹಾಗೂ 65 ವರ್ಷ ಮೇಲ್ಪಟ್ಟವರು ನೇಪಾಳ ಮತ್ತು ಭೂತಾನ್​​ ದೇಶಗಳಿಗೆ ಭೇಟಿ ನೀಡಲು ವೀಸಾ ಬೇಕಿಲ್ಲ. ಬದಲಾಗಿ ನಿಮ್ಮ ಆಧಾರ್​ ಕಾರ್ಡ್​ ದಾಖಲೆಯನ್ನು ತೋರಿಸಿ ಪ್ರವಾಸ ಕೈಗೊಳ್ಳಬಹುದು. ಈ ಎರಡು ದೇಶಗಳ ಪ್ರವಾಸಕ್ಕೆ ಆಧಾರ್ಡ್​ ಕಾರ್ಡ್​ ಅನ್ನು ಪ್ರಯಾಣ ದಾಖಲೆಯನ್ನಾಗಿ ನೀಡಬಹುದು ಎಂದು ಭಾರತದ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದೆ 65 ಕ್ಕಿಂತ ಅಧಿಕ 15 ವರ್ಷದೊಳಗಿರುವ ವ್ಯಕ್ತಿಗಳು ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ,ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಕಾರ್ಡ್ ಪಡಿತರ ಚೀಟಿಯನ್ನು ತೋರಿಸಬೇಕಾಗಿತ್ತು,ಆದರೆ ಆಧಾರ್ ಕಾರ್ಡ್ ಮಾತ್ರ ಗಣನೆಗೆ ತೆಗೆದುಕೊಂಡಿರಲಿಲ್ಲ.ಆದರೆ ಈಗ ಆಧಾರ್ ಕಾರ್ಡ್ ನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಜೊತೆಗೆ ಏನಿರಬೇಕು?

ವಿದೇಶಿ ಪ್ರವಾಸ ಕೈಗೊಳ್ಳುವರಿಗೆ ಗೃಹ ಇಲಾಖೆ ತಿಳಿಸಿರುವಂತೆ ವಯೋಮಾನದ ಭಾರತೀಯರು ತಮ್ಮ ಪಾಸ್​ಪೋರ್ಟ್​ನೊಂದಿಗೆ ತಮ್ಮ ಫೋಟೋ ಇರುವ ಗುರುತಿನ ಚೀಟಿಯನ್ನು ತೋರಿಸಿ ನೇಪಾಳ ಮತ್ತು ಭೂತಾನ್ ದೇಶಗಳಿಗೆ ಹೋಗಬಹುದು ಎಂದು ತಿಳಿಸಿದೆ. ಈ ಹಿಂದೆ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಆರೋಗ್ಯ ಸೇವಾ ಕಾರ್ಡ್, ರೇಷನ್ ಕಾರ್ಡ್ ಅನ್ನು ಕೂಡ ನೀಡಿ ಪ್ರವಾಸ ಕೈಗೊಳ್ಳಬಹುದಾಗಿತ್ತು. ಇದೀಗ ಆಧಾರ್​ ಕಾರ್ಡ್​ ಅನ್ನು ತೋರಿಸಿ ಈ ದೇಶಗಳಿಗೆ ಭೇಟಿ ಕೊಡಬಹುದು.

ಭಾರತೀಯರಿಗೆ ಇಷ್ಟವಾದ ಭೂತಾನ್ ಪ್ರವಾಸ:

ಭಾರತ ಮತ್ತು ಭೂತಾನ್ ಗಡಿ ಪಟ್ಟಣಗಳಿಗೆ ಪ್ರತಿ ದಿನ 8,000 ದಿಂದ 10, ಸಾವಿರ ಜನರು ಭೇಟಿ ನೀಡುತ್ತಾರೆ. ಅದೇ ರೀತಿ ನೇಪಾಳದಲ್ಲಿ ಸುಮಾರು ಆರು ಲಕ್ಷ ಭಾರತೀಯರಿದ್ದಾರೆ. ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಗಡಿ ಭಾಗವು ನೇಪಾಳದೊಂದಿಗೆ ವಿಸ್ತರಿಸಿಕೊಂಡಿದೆ. ಹೀಗಾಗಿ ಈ ಭಾಗದ ಜನರು ನೇಪಾಳವನ್ನು ಅವಲಂಬಿಸಿಕೊಂಡಿದ್ದಾರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ 15 ವಯಸ್ಸಿಗಿಂತ ಕಡಿಮೆ ಮತ್ತು 65 ವಯಸ್ಸಿನ ಮೇಲ್ಪಟ್ಟವರಿಗೆ ಈ ಎರಡು ದೇಶಗಳಿಗೆ ಆಧಾರ್​ ಕಾರ್ಡ್​ ದಾಖಲೆ ತೋರಿಸಿ ಪ್ರಯಾಣಿಸುವ ಅವಕಾಶ ಒದಗಿಸಲಾಗಿದೆ.

ಹಾಗೆಯೇ ಸಿಕ್ಕಿಂ ರಾಜ್ಯದ ಗಡಿಯನ್ನು ಹಂಚಿಕೊಳ್ಳುತ್ತಿರುವ ಭೂತಾನ್​ಗೆ ಹೆಚ್ಚಾಗಿ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಜನರು ಪ್ರಯಾಣಿಸುತ್ತಾರೆ. ಕೆಲವರು ಈ ದೇಶದಲ್ಲಿ ಉದ್ಯೋಗಿಗಳಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಕನಿಷ್ಠ 6 ತಿಂಗಳ ಮಾನ್ಯತೆ ಹೊಂದಿರುವ ಸರ್ಕಾರದ ಯಾವುದಾದರು ಗುರುತಿನ ಚೀಟಿ ನೀಡಿ ಭೂತನ್​ಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also read: ಇನ್ಮುಂದೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ; ಶಿಕ್ಷಣ ಇಲಾಖೆಯಿಂದ ಆದೇಶ..