ಕಂಗೆಡಿಸುವ ಜ್ವರಕ್ಕೆ ಇಲ್ಲಿದೆ ಮನೆ ಔಷಧಿಗಳು..

0
1022

Kannada News | Health tips in kannada

ಜೀವಮಾನದಲ್ಲಿ ಒಮ್ಮೆಯೂ ಜ್ವರದಿಂದ ನರಳದೇ ಇರುವ ವ್ಯಕ್ತಿ ಯಾರು ಇರಲಿಕ್ಕಿಲ್ಲ..ಜ್ವರವೂ ಹಲವಾರು ಖಾಯಿಲೆಗಳ/ ರೋಗಗಳ ಲಕ್ಷಣವಾಗಿವೆ. ಜ್ವರವೂ ಸಹಕೆಲವೂ ಮಾರಣಾಂತಿಕ ರೋಗಗಳ ಮುನ್ಸೂಚನೆಯಾಗಿರಬಹುದು.ಸಾಮಾನ್ಯ ಜ್ವರ ವಿಶ್ರಾಂತಿ ಮತ್ತು ಜಿಡ್ಡಿಲ್ಲದ ಆಹಾರದಿಂದಲೇ ನಿಯಂತ್ರಣಕ್ಕೆ ಬರುತ್ತದೆ. ಇದರೊಂದಿಗೆ ಈ ಕೆಲವು ಮನೆಮದ್ದುಗಳನ್ನು ಮಾಡಿದ್ದಲ್ಲಿ ಜ್ವರವು ಕಡಿಮೆಯಾಗುದಂತೂ ಗ್ಯಾರಂಟೀ..

  • ಶುಂಠಿ ಮತ್ತು ತುಳಸಿಯ ಬೇರುಗಳನ್ನು ಅರೆದು ಕಷಾಯ ಮಾಡಿ ಸೇವಿಸಬೇಕು.
  • ಅಳಲೆಕಾಯಿಯನ್ನು ಶುಂಠಿರಸದಲ್ಲಿ ತೇಯ್ದು ಗಂಧ ತೆಗೆದು ಜೇನುತುಪ್ಪದಲ್ಲಿ ಕಲೆಸಿ ಸೇವಿಸಿದ್ದಲ್ಲಿ ಜ್ವರ ಕ್ರಮೇಣ ಕಡಿಮೆಯಾಗುತ್ತದೆ.

benefits-of-ginger-for-skin-3

  • ಎರಡು ಮೂರು ಕರಿಮೆಣಸಿನ ಚೂರ್ಣವನ್ನು ಒಂದು ಊಟದ ಚಮಚ ಕೃಷ್ಣ ತುಳಸಿಯ ರಸದೊಂದಿಗೆ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಬೇಕು.
  • ಕುಡಿಯುವ ನೀರು ಮತ್ತು ನಿಂಬೆರಸವನ್ನು ಚೆನ್ನಾಗಿ ಕಲಕಿ ಆಗಾಗ ಕುಡಿಯುತ್ತಿರಬೇಕು.

  • ಜ್ವರದ ತಾಪ ಅತ್ಯಧಿಕವಾಗಿದ್ದಲ್ಲಿ ಉಪ್ಪು ಬೆರೆತ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಆ ಒದ್ದೆ ಬಟ್ಟೆಯನ್ನು ರೋಗಿಯ ಹಣೆಯ ಮೇಲೆ ಹಾಕಿ ಆಗಾಗ ಬದಲಿಸುತ್ತಿರಬೇಕು.
  • ಬೇವಿನಮರದ ತೊಗಟೆಯ ಒಳಪದರವನ್ನು ಬೇರ್ಪಡಿಸಿ, ಅದನ್ನು ಕುಡಿಯುವ ನೀರಿಗೆ ಸೇರಿಸಿ, ಗಟ್ಟಿ ಕಷಾಯ ಇಳಿಸಬೇಕು. ಇದು ಜ್ವರಕ್ಕೆ ಅತ್ಯುತ್ತಮವಾದ ಪರಿಹಾರ.

ಜ್ವರ ಬಂದು ಎರಡು ದಿನಗಳಾದರೂ ಇಳಿಯದಿದ್ದರೆ ಅಥವಾ ಹೆಚ್ಚಾದ್ರೆ ತಡ ಮಾಡದೆ ವೈದ್ಯರ ಬಳಿ ಕರೆದೊಯ್ಯಬೇಕು.

WATCH:

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ನೀವು ಅಜೀರ್ಣದ ತೊಂದರೆ ಅನುಭವಿಸ್ತಾ ಇದ್ರೆ ಈ ಟಿಪ್ಸ್ ಫಾಲೋ ಮಾಡಿ ಅಜೀರ್ಣಕ್ಕೆ ಗುಡ್ ಬೈ ಹೇಳಿ…