ಅಧಿಕ ಉಷ್ಣ, ಮೂತ್ರದ ಉತ್ಪತ್ತಿ ಮತ್ತು ವಿಸರ್ಜನೆ ಕಡಿಮೆಯಾಗುವುದರಿಂದ, ಮರ್ಮಾಂಗಗಳಲ್ಲಿ ಗಾಯ ಆಗುವುದರಿಂದ, ಮೂತ್ರದ ಸೋಂಕು, ಜನನಾಂಗದ ಅಶುಚಿತ್ವದಿಂದ ಉರಿಮೂತ್ರ ಉಂಟಾಗಬಹುದು. ಮೂತ್ರ ಮಾಡುವಾಗ ಉರಿ, ಕಿಬ್ಬೊಟ್ಟೆ ನೋವು, ಸಣ್ಣ ಜ್ವರ, ಅಲ್ಪ ಮೂತ್ರ, ಇವುಗಳೆಲ್ಲವೂ ಉರಿ ಮೂತ್ರದ ಲಕ್ಷಣಗಳಾಗಿವೆ.
-ತೊಳೆದ ಲೋಳೆರಸದ ತಿರುಳಿಗೆ ಸ್ವಲ್ಪ ಪ್ರಮಾಣದ ಜೀರಿಗೆ, ಕಲ್ಲು ಸಕ್ಕರೆ ಸೇರಿಸಿ ಊಟಕ್ಕೆ ಮುಂಚೆ ದಿನಕ್ಕೆರಡು ಬಾರಿಯಂತೆ ಏಳು ದಿವಸಗಳ ಕಾಲ ಸೇವಿಸಬೇಕು.
-ಒಣಗಿದ ಮುತ್ತುಗದ ಹೂ ಮತ್ತು ಸೊಗದೆ ಬೇರನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕಷಾಯ ಮಾಡಿ ಕುಡಿಯಬೇಕು.
-ಅತ್ತಿ ಮರದ ಹಾಲನ್ನು ಸಂಗ್ರಹಿಸಿ ದಿನಕ್ಕೊಂದು ಸಲ ಮೂರು ದಿನ ಸೇವಿಸಬೇಕು.
-ಕಿರುಕಸಾಲೆ ಸೊಪ್ಪಿನ ರಸ ೯೦ ml ಗೆ ಸೈನದವ ಲವಣ ಮತ್ತು ೧೨ ಗ್ರಾಂ ಸೌತೆಕಾಯಿ ಬೀಜ ಹಾಕಿ ಅರೆದು ದಿನಕ್ಕೆರಡು ಬಾರಿಯಂತೆ ೧ ರಿಂದ ೨ ವಾರ ಉಪಯೋಗಿಸಬೇಕು.
-ಹನ್ನೆರಡು ಗ್ರಾಂ ಹುಣಸೆಹಣ್ಣನ್ನು ಎಳನೀರಿನಲ್ಲಿ ಕದಡಿ ದಿನಕ್ಕೆ ಎರಡು ಹೊತ್ತು ಎರಡು ವಾರ ಕುಡಿಯಬೇಕು.
-ಅರ್ಧ ಲೋಟ ಬಾಳೆ ದಿಂಡಿನ ರಸವನ್ನು ದಿನಕ್ಕೆರಡು ಬಾರಿ ದಿನ ಬಿಟ್ಟು ದಿನ ಮೂರು ದಿನಗಳ ಕಾಲ ಸೇವಿಸಬೇಕು.
-ಅಕ್ಕಿ ಬಾರ್ಲಿ ಹೆಸರುಬೇಳೆ, ಕಲ್ಲಂಗಡಿ, ಕರಬೂಜ,ನೆಲ್ಲಿಕಾಯಿ, ದ್ರಾಕ್ಷಿ, ಖರ್ಜೂರ,ಎಳನೀರು ಗಳನ್ನೂ ಹೆಚ್ಚು ಹೆಚ್ಚು ಸೇವಿಸಬೇಕು.
-ಹೆಚ್ಚು ನೀರು ಮತ್ತು ಎಳನೀರನ್ನು ಕುಡಿದಲ್ಲಿ ಸಹ ಉರಿಮೂತ್ರ ಶಮನವಾಗುತ್ತದೆ.