ಬಿಳಿ ತೊನ್ನಿಗೆ ಇಲ್ಲಿದೆ ಮನೆ ಮದ್ದು.

0
8058

ವಿಟಿಲಿಗೊ ಒಂದು ತರಹದ ಚರ್ಮರೋಗವಾಗಿದೆ. ಈ ಖಾಯಿಲೆಯಲ್ಲಿ ಚರ್ಮಕ್ಕೆ ಬಣ್ಣವನ್ನು ನೀಡುವ ಮೆಲನೊಸೈಟ್ಸ್ ಎಂಬ ಜೀವಕೋಶಗಳ ಕಾರ್ಯದಕ್ಷತೆ ಕಡಿಮೆ ಅಥವಾ ಇಲ್ಲವಾಗಿ ಅಲ್ಲಲ್ಲಿ ಬಿಳಿ ತೇಪೆಗಳು ಉಂಟಾಗುತ್ತವೆ. ಇದನ್ನು ಬಿಳಿ ತೊನ್ನು ಎಂದು ಸಹ ಕರೆಯುತ್ತಾರೆ. ಇದಕ್ಕೆ ಮೂಲ ಕಾರಣ ತಿಳಿದಿಲ್ಲವಾದರೂ ಅನುವಂಶಿಕತೆ, ಒತ್ತಡ, ಆಟೋಇಮ್ಮ್ಯೂನಿಟಿ, ಹಾಗು ಕೆಲವು ವೈರಸ್ ಗಳಿಂದ ಇದರ ಬರುವಿಕೆ ಹೆಚ್ಚು ಎಂಬುದು ಸಂಶೋಧನೆಗಳಿಂದ ತಿಳಿದುಪಟ್ಟಿದೆ.

ವಿಟಿಲಿಗೊ ಸಮಸ್ಯೆಗಳಿಗೆ ಮನೆ ಮದ್ದು;

೧) ಬಾವಂಚಿ ಬೀಜಗಳನ್ನು ಮೂರುದಿನಗಳ ಕಾಲ ಶುಂಠಿ ಅಥವಾ ಹುಣಸೆ ನೀರಿನಲ್ಲಿ ನೆನೆಸಿಟ್ಟು ನಂತರ ಆ ಬೀಜದ ಸಿಪ್ಪೆಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ದಿನಕ್ಕೆ ೧ ಗ್ರಾಂ ನಷ್ಟು ಪುಡಿಯನ್ನು ಹಾಲಿನ ಜೊತೆ ೪೦ ದಿನಗಳ ಕಾಲ ಸೇವಿಸಬೇಕು.

೨) ಮೂಲಂಗಿ ಬೀಜಗಳನ್ನು ರಾತ್ರಿ ವಿನೆಗರ್ ನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ಮಿಶ್ರಣವನ್ನು ಬಿಳಿ ತೊನ್ನುಗಳ ಜಾಗಕ್ಕೆ ಹಚ್ಚಿ ೩-೪ ಗಂಟೆಗಳ ಕಾಲ ಹಾಗೆ ಬಿಡಬೇಕು.

೩) ತುಳಸಿ ಎಲೆಗಳಲ್ಲಿ ಆಂಟಿವೈರಲ್ ಹಾಗು ಆಂಟಿ ಏಜಿಂಗ್ ಗುಣಗಳಿದ್ದು ಮೆಲನೊಸೈಟ್ಸ್ ಗಳನ್ನೂ ಉತ್ತೇಜಿಸುವುದರಲ್ಲಿ ಸಹಾಯಕವಾಗಿದೆ. ತುಳಸಿ ಎಳೆಯ ರಸವನ್ನು ನಿಂಬೆ ರಸದ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ ೬ ತಿಂಗಳ ಕಾಲ ಚರ್ಮಕ್ಕೆ ಹಚ್ಚಿದ್ದಲ್ಲಿ ತೊನ್ನು ಇಳಿಮುಖವಾಗುತ್ತದೆ.

೪) ನದಿಯ ತಟದಲ್ಲಿ ಕಂಡುಬರುವಂತಹ ಕೆಂಪು ಜೇಡಿಮಣ್ಣಿನಲ್ಲಿ ಕಾಪರ್ ಅಂಶಗಳು ಹೇರಳವಾಗಿರುವುದರಿಂದ ಇದನ್ನು ಶುಂಠಿರಸದೊಂದಿಗೆ ಬೆರೆಸಿ ತೊನ್ನಿನ ಜಾಗಕ್ಕೆ ಹಚ್ಚಿದಲ್ಲಿ ರಕ್ತ ಸಂಚಾರ ಅಧಿಕವಾಗಿ ಚರ್ಮದ ಬಣ್ಣ ನೈಜವಾಗುತ್ತದೆ.

೫) ತಾಮ್ರದ ಚೊಂಬಿನಲ್ಲಿ ನೀರನ್ನು ಕುಡಿಯುತ್ತಿದ್ದಲ್ಲಿ ದೇಹಕ್ಕೆ ಕಾಪರ್ ಅಂಶಗಳು ಹೇರಳವಾಗಿ ದೊರೆತು ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

೬) ಅರಿಶಿನವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ನೀರು ಹಿಂಗುವವರೆಗೂ ಕುದಿಸಬೇಕು. ನಂತರ ಇದಕ್ಕೆ ೫೦೦ ಮಿಲಿ ಸಾಸಿವೆ ಎಣ್ಣೆಯನ್ನು ಬೆರೆಸಿ ಪುನಃ ಬರಿ ಎಣ್ಣೆ ಇರುವವರೆಗೂ ಕಾಯಿಸಬೇಕು. ಈ ಮಿಶ್ರಣವನ್ನು ಕಲೆಯಿರುವ ಜಾಗಕ್ಕೆ ಹಚ್ಚುತ್ತಾ ಬಂದಲ್ಲಿ ಕ್ರಮೇಣ ವಾಸಿಯಾಗುತ್ತದೆ.

೭) ದಿನಕ್ಕೆ ಒಂದು ಬಾರಿ ಬೇವಿನ ರಸವನ್ನು ಕುಡಿಯಬೇಕು.

೮) ದಿನಕ್ಕೆ ೮ ಗ್ರಾಂ ನಷ್ಟು ದಾಳಿಂಬೆ ಎಲೆಯ ಪುಡಿಯನ್ನು ಸೇವಿಸುತ್ತಾ ಬಂದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.

೯) ಉದ್ದನ್ನು ನೀರಿನಲ್ಲಿ ನೆನೆಸಿ ಪೇಸ್ಟ್ ಮಾಡಿ ಹಚ್ಚಿದ್ದಲ್ಲಿ ಕಲೆಗಳು ಕಡಿಮೆಯಾಗುತ್ತದೆ.

೧೦) ಹೆಚ್ಚು ತರಕಾರಿ, ಹಣ್ಣುಗಳನ್ನು ಸೇವಿಸಿದಲ್ಲಿ ದೇಹಕ್ಕೆ ಉತ್ತಮ ವಿಟಮಿನ್ಗಳು ದೊರೆತು ವಿಟಿಲಿಗೊ ತಡೆಗಟ್ಟುವಲ್ಲಿ ಸಹಾಯಕವಾಗಿದೆ.

source: allremedies.com

೧೧) ಸೋಯಾಬೀನ್, ಕಲ್ಲಂಗಡಿ ಬೀಜ, ಕೋಕೋ ಪುಡಿ, ಚಾಕ್ಲೆಟ್, ನಟ್ಸ್ ಗಳಲ್ಲಿ ಕಾಪರ್ ಅಂಶಗಳು ಹೇರಳವಾಗಿದ್ದು ಬಿಳಿತೊನ್ನನ್ನು ನಿಯಂತ್ರಿಸುವಲ್ಲಿ, ಗುಣಪಡಿಸುವಲ್ಲಿ ಉತ್ತಮವಾಗಿವೆ.

೧೨) ಒತ್ತಡವನ್ನು ಕಡಿಮೆ ಮಾಡಿಕೊಂಡಲ್ಲಿ ಈ ಖಾಯಿಲೆಯ ಉಲ್ಬಣ ಕಡಿಮೆಯಾಗುತ್ತದೆ