ಕೂದಲು ಉದುರುತ್ತಿದೆಯೇ ಚಿಂತಿಸಬೇಡಿ ದಪ್ಪ ಹಾಗೂ ಉದ್ದನೆಯ ಕೂದಲಿಗೆ ಇಲ್ಲಿದೆ ಪರಿಹಾರ ನೋಡಿ..

0
1933

ಪ್ರತಿಯೊಬ್ಬರು ಬಯಸುವುದು ನಮ್ಮ ಕೂದಲು ದಪ್ಪವಾಗಿ ಹಾಗೂ ಉದ್ದವಾಗಿ ಇರಬೇಕು ಎಂದು ಅದರಲ್ಲು ವಿಶೇಷವಾಗಿ ಮಹಿಳೆಯರಿಗೆ ಕೂದಲಿನ ಬಗ್ಗೆ ತುಂಬ ಆಕರ್ಷಣೆ ಇದ್ದೆ ಇರುತ್ತದೆ. ನಮ್ಮ ಕೂದಲು ಕಪ್ಪು ಹಾಗೂ ಉದ್ದವಾದ ಕೂದಲನ್ನು ಗಾಳಿಯಲ್ಲಿ ಬಿಟ್ಟು ಓಡಾಡಿಕೊಂಡಿದ್ದರೆ ಜನರು ಅದರತ್ತ ದೃಷ್ಟಿ ಯಾಕಬೇಕು ಇಂತಹ ಕೂದಲು ನನಗೂ ಬೇಕು ಇಲ್ಲರಿಗು ಆಸೆ ಇರುತ್ತದೆ.

Also read: ಸರಿಯಾಗಿ Shampoo ಅಥವಾ Hair Conditioner ಬಳಸದೇ ನೂರಾರು ಜನ ಕೂದಲು ಹಾಳು ಮಾಡಿಕೊಳ್ಳುತ್ತಿದ್ದಾರೆ, ನೀವೂ ಹಾಗೆ ಮಾಡುತ್ತಿರಬಹುದು; ಮೊದಲು ಇದನ್ನು ಓದಿ!!

ಮಹಿಳೆಯರ ಸೌಂದರ್ಯ ಹಾಗೂ ಆತ್ಮವಿಶ್ವಾಸದ ಪ್ರತಿಕವೆ ಕೂದಲು, ಉದ್ದನೆಯ ಕೂದಲು ಇದ್ದರೆ ಆಕೆ ತುಂಬ ಆತ್ಮವಿಶ್ವಾಸದ ಮಹಿಳೆ ಎಂದು ಹೇಳಲಾಗುತ್ತದೆ. ಕೂದಲಿನ ಮೇಲೆ ರಾಸಾಯನಿಕ ಪ್ರಯೋಗಗಳ ಜೊತೆಗೆ ಕಲ್ಮಶ ಧೂಳು ಇತ್ಯಾದಿಗಳಿಂದ ಕೂದಲು ಉದುರಿ ತೆಳುವಾಗುವುದು ಇಂತಹ ಕೂದಲನ್ನು ನೋಡಿದಾಗ ಅಯ್ಯೋ ಅನ್ನಿಸುವುದು. ಇದಕ್ಕಾಗಿ ನಾವು ಈ ಲೇಖನೆಯಲ್ಲಿ ದಪ್ಪ ಮತ್ತು ಉದ್ದನೆಯ ಕೂದಲು ಪಡೆಯುವ ಸುಲಭ ವಿಧಾನವನ್ನು ತಿಳಿಸಿದ್ದೇವೆ.

ತೆಂಗಿನೆಣ್ಣೆ

ತೆಂಗಿನೆಣ್ಣೆಯ ವಿಶೇಷತೆ ನಿಮಗೆಲ್ಲ ತಿಳಿದಿರುವ ಸಂಗತಿ ಅದರಲ್ಲೂ ಸೌಂದರ್ಯ ಸಾಧನೆಗಳನ್ನು ಹೆಚ್ಚಿಸುವುದರ ಬಗ್ಗೆ ನಾವು ಕೇಳಿದ್ದೇವೆ. ಮೊದಲಿಗೆ ತೆಂಗಿನಕಾಯಿ ಹೆಣ್ಣೆಯನ್ನು ಬುಡದಿಂದ ತುದಿಯವರೆಗೆ ಚನ್ನಾಗಿ ಮಸಾಜ್ ಮಾಡಿ ನಂತರ ಟವಲ್ ಕಟ್ಟಿಕೊಂಡು ಸುಮಾರು 30 ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಶಾಂಪೂ ಬಳಸಿ ಕೂದಲು ತೊಳೆಯಿರ. ಮಾರದಲ್ಲಿ ಎರಡು ಅಥವಾ ಮೂರು ಸಲ ಇದನ್ನು ಬಳಸಿರಿ.

Also read: ಅನಗತ್ಯ ಕೂದಲು ನಿವಾರಣೆಗೆ ಈ 4 ಟಿಪ್ಸ್ ಗಳ ಬಗ್ಗೆ ತಿಳಿದರೆ ನೀವು ಖಂಡಿತ ಇದನ್ನು ಪಾಲಿಸ್ತೀರ…!

ಅವಕಾಡೊಮಾಸ್ಕ್

ಅವಕಾಡೋಪ್ರೋಟಿನ್ ಮಾಸ್ಕ್ ಗೆ ಬೇಕಾಗುವ ಸಾಮಗ್ರಿಗಳು

  • ಅವಕಾಡೋ
  • ಮೊಟ್ಟೆ
  • ಚಮಚ ಆಲಿವ್ ತೈಲ

ತಯಾರಿಸುವ ವಿಧಾನ:-

ಮೊದಲಿಗೆ ಒಂದು ಮೊಟ್ಟೆಯನ್ನು ಪಿಂಗಾಣಿ ಪಾತ್ರೆಗೆ ಹಾಕಿ ಅದಕ್ಕೆ ಒಂದು ಅವಕಡೋದ ತಿರುಳನ್ನು ಹಾಕಿ ಮತ್ತು ಎರಡು ಚಮಚ ಆಲಿವ್ ತೈಲವನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡು 20-30 ನಿಮಿಷ ಕಾಲ ಹಾಗೆ ಇರಲಿ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಜೇನು ತುಪ್ಪ ಮತ್ತು ಎಣ್ಣೆ ಮಾಸ್ಕ್ ಗೆ  ಬೇಕಾಗುವ ಸಾಮಗ್ರಿಗಳು

ಒಂದು ಪಿಂಗಾಣಿಯ ಪಾತ್ರೆಗೆ ಎಲ್ಲವನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ ಬಳಿಕ ಶವರ್ ಕ್ಯಪ್ ನಿಂದ ಮುಚ್ಚಿಕೊಳ್ಳಿ ನಂತರ 30 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ನಂತರ ಜೇನು ತುಪ್ಪ ಮತ್ತು ಆಲಿವ್ ತೈಲವನು ಮಿಶ್ರಣ ಮಾಡಿಕೊಂಡು ಮತ್ತೆ ತಲೆಗೆ ಹಚ್ಚಿ 5 ನಿಮಿಷ ಬಿಟ್ಟು ಅದನ್ನು ಶಾಂಪೂವಿನಿಂದ ತೊಳೆಯಿರಿ ಇದು ಕೂದಲನ್ನು ಬಲಗೊಳಿಸುವುದು ಹಾಗೂ ಕೂದಲು ಬೆಳವಣೆಗೆಯಾಗುತ್ತದೆ.

Also read: ಹರಳೆಣ್ಣೆಯಿಂದ ಕೇವಲ ಕೂದಲು ಸೊಂಪಾಗಿ ಬೆಳೆಯುವುದು ಮಾತ್ರವಲ್ಲ ಅದರಿಂದ ಇಷ್ಟೊಂದು ಲಾಭಗಳು ಇವೆ ಅಂತ ತಿಳಿದುಕೊಂಡರೆ ಬೆರಗಾಗ್ತೀರಾ..!!

ಆಲ್ಕೋಹಾಲ್

ನೀವು ಆಲ್ಕೋಹಾಲ್ ಇರುವ ಉತ್ವನ್ನವನ್ನು ನೀವು ಬಳಕೆ ಮಾಡಲು ಹೋಗಬೇಡಿ. ಮೊಶ್ಚಿರೈಸರ್ ಇರುವಂತಹ ಶಾಂಪೂ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಇದರಿಂದ ಕೂದಲು ಯಾವಾಗಳು ತೇವಾಂಶದಿಂದ ಇರುವುದು ಮತ್ತು ನಯವಾಗಿರುವುದು ಇದರಿಂದ ಕೂದಲಿನ ಬೆಳವಣಿಗೆಯಾಗುವುದು ಅದರ ಜೊತೆಗೆ ನೀರಿನ ಸೇವನೆ ಹೆಚ್ಚಾಗಿ ಮಾಡಬೇಕು.

ರಾಸಾಯನಿಕ ಚಿಕಿತ್ಸೆಯನ್ನು ಮಾಡಿಕೊಳ್ಳಬೇಡಿ

ಸ್ಥಾನಮಾಡಿದ ಬಳಿಕ ಟವಲ್ ಸುತ್ತಿಕೊಂಡು ಕೂದಲನ್ನು ಒಣಗಿಸುವುದು ಮತ್ತು ಬಿಸಿಯಾಗಿಸುವ ಯಂತ್ರಗಳನ್ನು ಬಳಸುವುದರಿಂದ ಕೂದಲಿನ ಬುಡಕ್ಕೆ ಹಾನಿಯಾಗಬಹುದು. ಇದರಿಂದ ಕೂದಲ ಬೆಳವಣಿಗೆ ಕಡಿಮೆ ಯಾಗಬಹುದು ಹಾಗೂ ಹೆಚ್ಚು ಬಿಸಿ ನೀರಿರನ್ನು ಬಳಸಬೇಡಿ ಇದರಿಂದ ಕೂದಲು ಒಣಗುವುದು ಮತ್ತು ಕೂದಲು ಲಾಸಗುವುದು.

Also read: ಈ ಒಂದು ಮನೆಮದ್ದು ನಿಮ್ಮ ಎಲ್ಲ ಚರ್ಮ ಹಾಗು ಕೂದಲು ಸಮಸ್ಸೆಗಳಿಗೆ ಪರಿಹಾರ ನೀಡುತ್ತದೆ..!!

ಬಾಳೆಹಣ್ಣು

ಬಾಳೆಹಣ್ಣು ಊಟದ ನಂತರ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಅದರಲ್ಲು ಹೆಚ್ಚಾಗಿ ಬಾಳೆಹಣ್ಣಿನಲ್ಲಿ  ವಿಟಮಿನ್ ಎ,ಸಿ ಇದೆ ಹಾಗೂ ಇದರಲ್ಲಿ ಕೆಲವೊಂದು ಖನಿಜಂಶಗಳು ಇರುವುದರಿಂದ ಇದು ಕೂದಲಿಗೆ ಮಾಯಿಶ್ಚರೈಸ್ ನೀಡಿ ಬಲಪಡಿಸುವುದು ಇದರಿಂದ ಕೂದಲು ಉದುರುವುದು ಕಡಿಮೆ ಯಾಗುವುದು.

ಬೇಕಾಗುವ ಸಾಮಾಗ್ರಿಗಳು

  • ಹಣ್ಣಾದ ಬಾಳೆಯ ಹಣ್ಣು
  • ಚಮಚ ಮೊಸರು
  • ಚಮಚ ರೋಸ್ ವಾಟರ್

ತಯಾರಿಸುವ ವಿಧಾನ

ಒಂದು ಬಾಳೆಯ ಹಣ್ಣನ್ನು ಹಿಚುಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ ಇದಕ್ಕೆ ರೋಸ್ ವಾಟರ್ ಮತ್ತು ಮೊಸರನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣಮಾಡಿ ಈ ಮಾಸ್ಕ್ ನ್ನು ಕೂದಲಿಗೆ ಹಚ್ಚಿಕೊಂಡು, ಒಂದು ಗಂಟೆಯ ಕಾಲ ಹಾಗೆಬಿಡಿ. ಬಳಿಕ ನೀರಿನಿಂದ ಕೂದಲನ್ನು ತೊಳೆಯಿರಿ ವಾರಕ್ಕೆ ಒಂದು ಸಲ ಮಾಡಿ ನಿಮ್ಮ ಫಲಿತಾಂಶ ಉತ್ತಮವಾಗಿರುತ್ತದೆ.

Also read: ಬಿಳಿ ಕೂದಲು ಕಪ್ಪಾಗಾಗುವುದಕ್ಕೆ ಇಲ್ಲಿದೆ ಒಂದು ಉತ್ತಮ ಮನೆ ಮದ್ದು !

ಹೆಚ್ಚು ನೀರು ಕುಡಿಯಿರಿ

ದೇಹವು ಆರೋಗ್ಯವಾಗಿರಬೇಕಾದರೆ ಪ್ರತಿ ನಿತ್ಯ ಸಾಕಷ್ಟು ನೀರು ಸೇವನೆ ಮಾಡಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವಾಗಿದೆ. ಅದರಲ್ಲು ವಿಶೇಷವಾಗಿ ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ಅದರಿಂದ ಚರ್ಮವು ಒಣಗಿ ಹೋಗುವುದು. ಪ್ರತಿನಿತ್ಯ ನಾಲ್ಕು ಲೀಟರ್ ನೀರು ಕುಡಿಯಿರಿ ಹೆಚ್ಚು ನೀರನ್ನು ಕುಡಿದಾಗ ದೇಹವು ಅದನ್ನು ಹೀರಿಕೊಂಡು ಕೂದಲು ಮತ್ತು ತಲೆಯಬುರುಡೆಗೆ ಮೊಶ್ಚಿರೈಸರ್ ನೀಡುವುದು ಮಾತ್ರವಲ್ಲದೆ, ಕೂದಲಿನ ಕೋಶಗಳನ್ನು ಬಲಪಡಿಸುವುದು.

ಪ್ರತಿನಿತ್ಯ ಕೂದಲು ತೊಳೆಯಬೇಡಿ

Also read: ಒರಟು ಕೂದಲು ಮೃದುವಾಗಿಸಬೇಕೆ?

ಪ್ರತಿ ನಿತ್ಯ ಧೂಳಿನಲ್ಲಿ ಸಂಚರಿಸುವವರಿಗೆ ಕೂದಲು ತೊಳೆಯುವುದು ಅಭ್ಯಾಸವಾಗಿರುತ್ತದೆ. ಇದರಿಂದ  ಆರೋಗ್ಯಕರ ಕೂದಲು ಪಡೆಯುತ್ತೇವೆ ಎಂದು ಹೇಳಗಾಗುತ್ತದೆ. ಆದರೆ ಇದು ಸರಿಯಲ್ಲ ಪ್ರತಿನಿತ್ಯವು ಕೂದಲು ತೊಳೆದರೆ ಇದರಿಂದ ತಲೆಯ ಬುರುಡೆಯು ಮತ್ತಷ್ಟು ಎಣ್ಣೆಯಿಂದ ಕೂಡಿರುತ್ತದೆ. ಇದರಿಂದ ವಾರದಲ್ಲಿ ಮೂರು ಸಲ ಕೂದಲು ತೊಳೆದರೆ ಸಾಕು.