ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲದೆ, ಆರೋಗ್ಯಕರವಾಗಿ ದೇಹದ ತೂಕ ಕಮ್ಮಿ ಮಾಡಿ ಕೊಳ್ಳ ಬೇಕೇ? ಇಲ್ಲಿದೆ ಓದಿ!!

0
1674

ಒತ್ತಡದ ಜೀವನ, ಬದಲಾಗ್ತಾಯಿರೋ ಜೀವನ ಶೈಲಿ ಜನರಿಗೆ ಇದರಿಂದಾಗಿ ನಮ್ಮ ದೇಹದ ಇತರೆ ಅಂಗಾಂಗಗಳು ತನ್ನಿಂದ ತಾನೆ ಬೆಳೆಯುತ್ತಲೇ ಇರುತ್ವೆ. ಆದರೆ ದೇಹ ಕಾಲಕ್ಕೆ ತಕ್ಕಂತೆ ಎಷ್ಟು ಬೆಳೆಯಬೇಕೋ ಅಷ್ಟೇ ಬೆಳೆದ್ರೆ ಒಳ್ಳೆಯದು. ಇಲ್ಲವಾದ್ರೆ ದೇಹದ ತೂಕ ಹೆಚ್ಚಾಗಿ ಅನೇಕ ರೋಗಗಳು ಹುಟ್ಟಿಕೊಂಡುಬಿಡ್ತಾವೆ. ನಮ್ಮ ದೇಹವೇ ನಮ್ಗೆ ಭಾರವಾಗುತ್ತೆ. ಸಮನಿವಾಗಿ ಈಗೀನ ಯುವ ಜನಾಂಗದವರು ತಮ್ಮ ಫಿಟ್ ನೆಸ್ ಕಾಪಾಡಲು ಜಿಮ್ ಗೆ ಹೋಗುತ್ತಾರೆ. ಸುಂದರವಾದ ಮೈಕಟ್ಟು ಪಡೆದು ಆಕರ್ಷಕವಾಗಿ ಕಾಣಬೇಕೆಂಬುದು ಅವರ ಗುರಿ. ಸರಿಯಾದ ಪ್ಲಾನ್ ಪ್ಲಾನ್ ಇಲ್ಲದೆ ಎಷ್ಟೋ ಜನ ಸಾವನ್ನಪ್ಪಿದ್ದಾರೆ.

Also read: ಈ ಹಣ್ಣುಗಳನ್ನು ತಿನ್ನುವುದರಿಂದ ನೀವು ಸುಲಭವಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ.

ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲದೆ, ಆರೋಗ್ಯಕರವಾಗಿ ದೇಹದ ತೂಕ ಕಮ್ಮಿ ಮಾಡಿ ಕೊಳ್ಳ ಬೇಕು ಅಂದರೆ ಕೆಳಗಿನ ವಿಧಿಯನ್ನು ಅನುಸರಿಸಿ.

  1. ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಚಕ್ಕೆ ಪುಡಿ ಬೆರೆಸಿ.
  2. ನಂತರ ಆ ನೀರು ಕೊಠಡಿಯ ತಾಪಮಾನಕ್ಕೆ ಬರೋವರೆಗೂ ಕಾದು.
  3. ಅದಕ್ಕೆ ಒಂದು ಚಮಚ ಜೇನು ತುಪ್ಪ ಬೆರೆಸಿ ಕುಡಿಯಿರಿ.

Also read: ತೂಕ ಇಳಿಸಿಕೊಳ್ಳಲು ಭಾರಿ ಕಠಿಣವಾದ ಡೈಯಟ್/ವ್ಯಾಯಾಮ ಮಾಡಲೇಬೇಕಿಲ್ಲ, ಈ ಸುಲಭ ಆಕ್ಯು ಪ್ರೆಶರ್ ತಂತ್ರವನ್ನು ಪಾಲಿಸಿದರೆ ಸಾಕು…

ಸೂಚನೆ: ಇದನ್ನು ಒಂದು ತಿಂಗಳತನಕ ಮಾಡಿದಲ್ಲಿ ೨ ರಿಂದ ೩ ಕಿಲೋ ವರೆಗೂ ತೂಕ ಇಳಿಸಿಕೊಳ್ಳಬಹುದು.

ಇದರ ಜೊತೆಗೆ ಚಕ್ಕೆ ಪುಡಿ ಮಾನವನ ದೇಹಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಅವು ಈ ಕೆಳಗಿನತಿವೆ

  1. ದೇಹದಲ್ಲಿ ರಕ್ತ ಸರಾಗವಾಗಿರುವಂತೆ ನೋಡಿಕೊಳ್ಳಲು ಚಕ್ಕೆ ಪುಡಿ ಸಹಾಯಕಯಾಗಿದೆ. ಕಾರಣ ಇದರಲ್ಲಿ ಹೇರಳವಾಗಿ ಮ್ಯಾಂಗನೀಸ್, ಪೈಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಹೆಚ್ಚಾಗಿರುವುದರಿಂದ.
  2. ಚಕ್ಕೆ ಪುಡಿ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸುವಲ್ಲಿ ಸಹಕಾರಿಯಾಗಿದೆ. ಇದರ ಜೊತೆಗೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
  3. ಚಕ್ಕೆ ಪುಡಿ ದೇಹದಲ್ಲಿರುವ ವಿವಿಧ ಬ್ಯಾಕ್ಟಿರಿಯಾ ವಿರುಧ್ಧ ಹೋರಾಡುತ್ತದೆ. ಅದಕ್ಕೆ ದೇಹದ ಅನೇಕ ಸೋಂಕುಗಳ ನಿವಾರಣೆಗೆ ಇದು ಸಹಕಾರಿಯಾಗಿದೆ.
  4. ಚಕ್ಕೆ ಪುಡಿ ಜೊತೆ ಒಂದು ಚಮಚ ಜೇನನ್ನು ನೀರಲ್ಲಿ ಬೆರೆಸಿ ಕುಡಿದರೆ ಸಂಧಿವಾತ ಕಡಿಮೆಯಾಗುತ್ತದೆ.
  5. ಇದರ ಇನ್ನೊಂದು ಬಹು ಮುಖ್ಯ ಉಪಯೋಗವೆನೆಂದರೆ ದೇಹದಲ್ಲಿ ಕ್ಯಾನ್ಸರ್ ಹರಡಲು ಮುಖ್ಯ ಕಾರಣವಾಗುವ ಲ್ಯುಕೆಮಿಯ ಮತ್ತು ಲಿಂಫೋಮ ಎಂಬ ಜೀವಕಣಗಳು ದ್ವಿಗುಣಗೊಳ್ಳುವುದನ್ನು ಕಡಿಮೆ ಮಾಡುತ್ತದೆ.