ದೇವರ ಪೂಜೆಗೆ ಹೂವುಗಳನ್ನೇಕೆ ಏರಿಸುತ್ತಾರೆ? ಇದಕ್ಕೆ ಹಿಂದಿನ ಕಾಲದಿಂದಲೂ ಬಂದಿರುವ ಬಲವಾದ ಕಾರಣ ಇಲ್ಲಿದೆ ನೋಡಿ..

0
2550

ದೇವರಿಗೆ ಹೂವುಗಳನ್ನು ಯಾವಾಗಿನಿಂದ ಹಾಕುತ್ತಾ ಬಂದಿದ್ದಾರೆ, ಏಕೆ ಹೂವುಗಳನ್ನು ಪೂಜೆಗೆ ಬಳಸುತ್ತಾರೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆದರು ಕೂಡ ಪೂಜೆಗೆ ಹೂವು ಇಲ್ಲದೆ ನಡೆಯುದೆ ಇಲ್ಲ ದೇವರು ಏನಾದರು ಹೇಳುತ್ತಾನ? ನಂಗೆ ಹೂವು ಬೇಕೇ ಬೇಕು ಅಂತ! ಎಂಬ ಮಾತು ತಪ್ಪಾದರೂ ಮೂಡುವ ಪ್ರಶ್ನೆಯೊಂದು ಜನರಿಗೆ ತಿಳಿಯುತ್ತೆದೆ. ದೇವರಿಗೆ ಹೂವು ಏರಿಸುವ ಈ ಪದ್ಧತಿ ಹಳೆಯದು ಎಂದು ಹೇಳಲು ಸಾದ್ಯವಿಲ್ಲ ಏಕೆಂದರೆ ಮೊದಲಿಗಿಂತಲೂ ಈಗೀಗ ಹೊಸ ಹೊಸ ತರಹದ ಹೂವುಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಹಾಗೆಯೇ ದೇವರನ್ನು ಜನರು ಹಿಂದಿಗಿಂತಲೂ ಜಾಸ್ತಿ ನಂಬಿಕೆ ಇಟ್ಟು ಪುಜಿಸುತ್ತಿರುವ ಕಾರಣ ದೇವಸ್ಥಾನಗಳು ಹೆಚ್ಚು ಅಭಿವೃದಿಯಾಗಿವೆ. ಇದೆಲ್ಲ ನೋಡುತ್ತಾನೆ ಬಂದಿದ್ದಾರೆ. ಹಾಗಾದ್ರೆ ದೇವರಿಗೆ ಹೂಯಾಕೆ ಪ್ರಿಯವಾದದ್ದು ಎಂಬುವುದು ಇಲ್ಲಿದೆ ನೋಡಿ.

Also read: ಈ ಭಕ್ತೆಯು ಲಲಿತಾ ಸಹಸ್ರನಾಮವನ್ನು ರೇಷ್ಮೆಯಲ್ಲಿ ಬಿಡಿಸಿ ದೇವರ ಮೇಲಿನ ಭಕ್ತಿಯ ಪರಿ ಕೇಳಿ, ನೀವೂ ಆ ದೇವಿಯ ಕೃಪೆಗೆ ಪಾತ್ರರಾಗಿ!!

ಹೌದು ಅನಾದಿ ಕಾಲದಿಂದಲೂ ದೇವರನ್ನು ಪೂಜಿಸಲು ಹೂವುಗಳನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲೊಂದೇ ಅಲ್ಲ ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಪೂಜೆಗೆ ಹೂವು ಬಳಸುವ ಪದ್ದತಿಯಿದೆ. ದೇವರ ಮೂರ್ತಿಗಳಿಲ್ಲದ ಧರ್ಮಗಳಲ್ಲೂ ಪೂಜೆಯಲ್ಲಿ ಹೂವು ಮಾತ್ರ ಇದ್ದೆ ಇರುತ್ತದೆ.
ಹೂವುಗಳು ಪ್ರಕೃತಿಯಲ್ಲಿ ಸಿಗುವ ಅತ್ಯಂತ ಸುಂದರ ವಸ್ತುಗಳು. ದೇವರನ್ನು ಮೆಚ್ಚಿಸಲು ಉತ್ಕ್ರಷ್ಟವಾದದ್ದನ್ನೇ ಆತನಿಗೆ ನೀಡಬೇಕಲ್ಲವೆ? ಎಲ್ಲ ಧರ್ಮಗಳೂ ಪ್ರಕೃತಿಯನ್ನು ದೇವರೆಂದೇ ಪರಿಗಣೀಸುವುದರಿಂದ, ಪ್ರಕೃತಿದಟ್ಟವಾದ ಪುಷ್ಪಗಳು ದೇವರನ್ನು ಆಕರ್ಷಿಸುತ್ತವೇಯೆಂದೂ ನಂಬುತ್ತೇವೆ.

Also read: ಜೀವನದಲ್ಲಿ ನೀವು ಸುಖವಾಗಿ ಬಾಳಬೇಕೆ.? ಹಾಗಾದರೆ ಪ್ರತಿ ದಿನ ಸರ್ವಶ್ರೇಷ್ಠವಾದ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮಾಡಿ..!

ಪೂಜೆಯ ವೇಳೆ ಭೂಮಿಗಿಳಿದು ಬರುವ ದೇವತೆಗಳು ಯಾವ ಸ್ಥಳ ದಿಂದ ಸುವಾಸನೆ ಬರುತ್ತಿದೆಯೋ, ಯಾವ ಸ್ಥಳ ಅತ್ಯಂತ ಸುಂದರವಾಗಿದೆಯೋ ಅಲ್ಲಿಗೇ ಬರುತ್ತಾರೆ ಎಂಬ ನಂಬಿಕೆ ಆಸ್ತಿಕರಲ್ಲಿದೆ. ಹೂವುಗಳನ್ನು ಎಲ್ಲಿ ಬಳಸಿದರೂ ಆ ಸ್ಥಳ ಸುಂದರವಾಗಿಯೇ ಕಾಣಿಸುತ್ತದೆ ಮತ್ತು ಅಲ್ಲಿ ಸುವಾಸನೆ ಹರಡಿರುತ್ತದೆ. ಒಟ್ಟಿನಲ್ಲಿ ಪುಜಾಸ್ಥಳ ಪರಿಮಳದಿಂದ ಕೂಡಿರಬೇಕು, ಭಕ್ತನ ಮನಸ್ಸಿನಲ್ಲಿ ಏಕಾಗ್ರತೆ ಮೂಡಿಸಬೇಕು, ಮನಸ್ಸನ್ನು ಪ್ರಶಾಂತಗೊಳಿಸಬೇಕು ಮತ್ತು ಬೇಡದ ಯೋಚನೆಗಳನ್ನು ಮನಸ್ಸಿನಿಂದ ಹೊರಹಾಕಬೇಕು ಎಂಬುದು ಪೂಜೆಗೆ ಹೂವುಗಳನ್ನು ಬಳಸುವುದಕ್ಕೆ ಮುಖ್ಯ ಕಾರಣ.

Also read: ಯಾವುದೇ ವ್ಯಕ್ತಿ ಅತೀಂದ್ರಿಯ ಶಕ್ತಿಗಳ ವಶಕೊಳಗಾಗಿದ್ದೀರಾ..? ಈ ದೇವಾಸ್ಥಾನಗಳಿಗೆ ಹೋದ್ರೆ ಪರಿಹಾರವಾಗುತ್ತಂತೆ !

ಎಲ್ಲ ಧರ್ಮಗಳಲ್ಲೂ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಹೂವುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ಹೂವುಗಳು ಅತಿಥಿಗಳನ್ನು ಮುದಗೊಳಿಸುತ್ತವೆ ಎಂಬ ನಂಬಿಕೆಯಂತೆಯೇ ಅವು ದೇವರನ್ನು ಮುದಗೊಳಿಸುತ್ತವೆ ಎಂಬ ನಂಬಿಕೆ ಕೂಡ. ಶುಭಕಾರ್ಯಗಳಲ್ಲಿ ತೋರಣ ಕಟ್ಟುವುದು, ಪೂಜೆಯಲ್ಲಿ ಮಾವಿನ ಎಲೆಗಳನ್ನು ಬಳಸುವುದು ಕೂಡ ಇದೆ ಕಾರಣಕ್ಕೆ. ಮಾವಿನೆಲೆಯ ಪರಿಮಳ ಆ ಸ್ಥಳವನ್ನು ಶುಚಿಗೊಲಿಸುತ್ತದೆ. ಕೆಲವು ಪರಿಮಳಗಳಿಗೆ ವಾತವರಣದಲ್ಲಿರುವ ಮಾಲಿನ್ಯವನ್ನು ಹಿರಿಕೊಳ್ಳುವ ಶಕ್ತಿ ಕೂಡ ಇದೆ. ಸುಗಂಧಿತ ವಸ್ತುಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತೇವೆ ಎಂದು ವಿಜ್ಞಾನ ಕೂಡ ಹೇಳುತ್ತದೆ. ವಾಸ್ತವದಲ್ಲಿ ಹೂವನ್ನು ದೇವರಿಗೆ ಅರ್ಪಿಸುವುದು ಎಂದರೆ ಬಲಿಯನ್ನು ಅರ್ಪಿಸುವುದಕ್ಕೆ ಸಮ.