ನೀವು ಕುಡಿಯಿವ ನೀರು ವಿಷವಂತೆ; ಸೆಂಟ್ರಲ್ ಬ್ಯೂರೊ ಆಫ್ ಹೆಲ್ತ್ ಇಂಟೆಲಿಜೆನ್ಸ್ ವರದಿಯಂತೆ ದೇಶದಲ್ಲಿ ದಿನಕ್ಕೆ ಏಳು ಮಂದಿ ಮಲಿನ ನೀರಿಗೆ ಬಲಿಯಾಗುತ್ತಿದ್ದಾರೆ..

0
285

ದೇಶದಲ್ಲಿ ನೀರಿನ ಅಭಾವ ಹೆಚ್ಚಾದರೆ ಇನ್ನೊಂದು ಕಡೆ ಕುಡಿಯಿವ ನೀರು ಕೂಡ ವಿಷವಾಗುತ್ತಿದೆ ಎನ್ನುವ ಆಘಾತಕರ ಸುದ್ದಿ ಹರಡಿದ್ದು, ಈ ಸಂಬಂಧ ಸರ್ಕಾರಿ ಸಂಸ್ಥೆ ಸೆಂಟ್ರಲ್​​ ಬ್ಯೂರೋ ಆಫ್​ ಹೆಲ್ತ್​​​​​ ಇಂಟಲಿಜೆನ್ಸ್​ (ಸಿಬಿಹೆಚ್​ಐ) ರಿಲೀಸ್ ಮಾಡಿರೋ ಭಯಾನಕ ವರದಿಯಂತೆ ಭಾರತದಲ್ಲಿ ಪ್ರತಿದಿನ ಏಳು ಮಂದಿ ಬಲಿಯಾಗ್ತಿದ್ದಾರೆ. ಎನ್ನುವ ಸುದ್ದಿ ಸುದ್ದಿ ವಿಶ್ವದ ಗಮನ ಸೆಳೆದಿದ್ದರೆ, ನೀರಿನ ಲಭ್ಯತೆ ಇರುವ ಜನರ ಪರಿಸ್ಥಿತಿ ಬಗೆಗಿನ ಸುದ್ದಿ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಸಾವು ಯಾವುದರಿಂದ ಬರುತ್ತಿದೆ ಎನ್ನುವುದು ತಿಳಿಯದ ಜನರು ನೀರು ಕುಡಿಯಲು ಹೆದರುವ ಪರಿಸ್ಥಿತಿ ಎದುರಾಗಿದೆ.

Also read: ಇನ್ಮುಂದೆ ನಿಮ್ಮ ವಾಹನಕ್ಕೆ PRESS, POLICE, ARMY, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಝ್ ಪಕ್ಕಾ; ಯಾಕೆ ಅಂತ ಈ ಮಾಹಿತಿ ನೋಡಿ..

ಹೌದು ನೀರು ಪ್ರತಿಯೊಂದು ಜೀವಿಗೂ ಬೇಕಾಗಿರುವ ಜಾಲವಾಗಿದೆ. ಅದರಂತೆ ಕೆಲವು ಸಮಯ ಕುಡಿಯಿವ ನೀರು ಇಲ್ಲದಿದ್ದರೆ ಸಾವು ಖಚಿತ ವೆನ್ನುವುದು ಗೊತ್ತೇ ಇದೆ. ಒಂದು ಕಡೆ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ನೀರನ್ನು ಹಾಳು ಮಾಡದೆ ಸಂಗ್ರಹಿಸಿ ಇಡಬೇಕು ಎನ್ನುವ ಅರಿವು ಮೂಡಿಸಲು ಜಾಹಿರಾತುಗಳು ಬರುತ್ತಿದರೆ. ಇನ್ನೊಂದು ಕಡೆ ನೀರನ್ನು ಕುಡಿದರೆ ಹಲವು ಕಾಯಿಲೆಗಳ ಜೊತೆಗೆ ಸಾವು ಕೂಡ ಬರುತ್ತದೆ ಎನ್ನುವುದು ಆಘಾತ ತರುತ್ತದೆ. ಈ ಸಂಬಂಧ ಸರ್ಕಾರಿ ಸಂಸ್ಥೆ ಸೆಂಟ್ರಲ್​​ ಬ್ಯೂರೋ ಆಫ್​ ಹೆಲ್ತ್​​​​​ ಇಂಟಲಿಜೆನ್ಸ್ ವರದಿಯಂತೆ.

ಮಲಿನ ನೀರಿನಿಂದಾಗಿ ಕಳೆದ ವರ್ಷ ಪ್ರತಿ ದಿನ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಲಿನ ನೀರು ಸೇವಿಸಿದ್ದರಿಂದ ಅಸ್ವಸ್ಥರಾಗುವ 36 ಸಾವಿರ ಮಂದಿಗೆ ಪ್ರತಿದಿನ ಚಿಕಿತ್ಸೆ ನೀಡಲಾಗುತ್ತಿದೆ. ಸಾಕಷ್ಟು ಲಸಿಕೆ ಹಾಗೂ ಔಷಧಿ ಲಭ್ಯವಿದ್ದರೂ, ಕೆಲವು ಕಾಯಿಲೆಗಳನ್ನು ಹಿಡಿತಕ್ಕೆ ತರಲು ಸಾಧ್ಯವಾಗುತ್ತಿಲ್ಲ, ಇದರಿಂದ ಕಾಲರಾ, ತೀವ್ರ ದ್ರವಾಂಶ ಕೊರತೆ ಕಾಯಿಲೆ (ಎಡಿಡಿ), ಟೈಫಾಯ್ಡ್ ಮತ್ತು ವೈರಲ್ ಹೆಪಟೈಟಿಸ್‌ನಿಂದ 2018ರಲ್ಲಿ ಭಾರತದಲ್ಲಿ 2439 ಮಂದಿ ಮೃತಪಟ್ಟಿದ್ದಾರೆ. ಈ ಕಾಯಿಲೆಗಳಿಗೆ 1.3 ಕೋಟಿ ಮಂದಿ ಚಿಕಿತ್ಸೆ ಪಡೆದಿದ್ದಾರೆ.

Also read: ಇನ್ಮುಂದೆ ರೇಷನ್ ಪಡೆಯಲು ಊರಿಗೆ ಹೋಗಲೇ ಬೇಕಿಲ್ಲ; ಈ ಕಾರ್ಡ್ ಇದ್ದರೇ, ದೇಶದ ಯಾವ ಭಾಗದಲ್ಲಾದ್ರೂ ರೇಷನ್ ಪಡಿಬಹುದು..

ಸೆಂಟ್ರಲ್ ಬ್ಯೂರೊ ಆಫ್ ಹೆಲ್ತ್ ಇಂಟೆಲಿಜೆನ್ಸ್ ವಿಭಾಗ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪಡೆದ ಅಂಕಿ ಅಂಶಗಳ ಪ್ರಕಾರ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಅತಿಯಾಗಿ ಬಾಧಿಸುವ ಈ ಸಮಸ್ಯೆಗೆ ಬಲಿಯಾದವರಲ್ಲಿ ಶೇಕಡ 60ರಷ್ಟು ಮಂದಿ (1450) ಮಕ್ಕಳು. ಕಳೆದ ಐದು ವರ್ಷಗಳಲ್ಲಿ ಈ ರೋಗಗಳಿಗೆ 11,768 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಂದರೆ ಪ್ರತಿ ನಾಲ್ಕು ಗಂಟೆಗೆ ಒಬ್ಬರಂತೆ ನೀರಿನಿಂದ ಹರಡುವ ರೋಗಗಳಿಗೆ ಬಲಿಯಾಗುತ್ತಿದ್ದಾರೆ. 7.6 ಕೋಟಿ ಮಂದಿ ಈ ಅವಧಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಎಡಿಡಿ ಅತಿಹೆಚ್ಚು ಜೀವಗಳನ್ನು ಬಲಿ ಪಡೆದಿದ್ದರೆ, ಹೆಪಟೈಟಿಸ್ ನಂತರದ ಸ್ಥಾನದಲ್ಲಿದೆ. ಅದ್ರಲ್ಲೂ 2018ರಲ್ಲಿ ಈ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಲುಷಿತ ನೀರಿನಿಂದ 7.6 ಕೋಟಿ ಜನರು ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ.

ಇನ್ನೂ ಫಿಲ್ಟರ್ ನೀರು ಕುಡಿದರೆ ಒಳ್ಳೆಯದು ಅಂದರೆ ಅದರಲ್ಲಿವೂ ಸಾಕಷ್ಟು ರೋಗಗಳು ಪತ್ತೆಯಾಗಿಯೇ. ಈ ಸಂಬಂಧ ಖಾಯಿಲೆ ಬಂದಿದೆ ಎಂದು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ತೆಗೆದುಕೊಳ್ಳುತ್ತಿರೋ ಬಿಡುತ್ತಿರೋ, ನೀರು ಮಾತ್ರ ಕುಡಿಯ ಬೇಡಿ. “ಆರ್​​ಒ ಫಿಲ್ಟರ್ ನೀರು,” ಆದರಂತೂ ಖಂಡಿತಾ ಕುಡಿಯಬೇಡಿ. ಎಂದು ವಿಶ್ವ ಆರೋಗ್ಯ ಸಂಸ್ಥೆ. ತಿಳಿಸುತ್ತಿದೆ. ಹಾಗಾದ್ರೆ ನೀರು ಕುಡಿಯದೆ ಬದುಕುವುದು ಹೇಗೆ? ಎನ್ನುವ ಪ್ರಶ್ನೆಗೆ ಜನರೇ ಉತ್ತರ ಹುಡುಕಬೇಕಾಗಿದೆ. ಏಕೆಂದರೆ ಶುದ್ಧ ನೀರನ್ನು ವಿಷ ನೀರಾಗಲು ಮಾನವನ ವರ್ತನೆ ಕಾರಣವಾಗಿದೆ.