ಜವಾಬ್ದಾರಿಯುತವಾಗಿ ಕುಡಿಯುವುದು ಹೇಗೆ…? ತಿಳಿದುಕೊಳ್ಳಿ…

0
8866

ಎಷ್ಟೋ ಜನರು ಕುಡಿತದಿಂದ ಜೀವನ ಹಾಳು ಮಾಡಿಕೊಂಡಿರುವ ನಿದರ್ಶನಗಳು ನಮ್ಮ ನಿಮ್ಮೆಲ್ಲರ ಕಣ್ಣು ಮುಂದೆ ನೋಡಿದ್ದೇವೆ ಮತ್ತು ಕೇಳಿದ್ದೇವೆ, ಕೇಳುತ್ತಲೇ ಇರುತ್ತೇವೆ… ಕುಡಿಯೋದು ಬಿಡುವುದಕ್ಕೆ ಆಗುತ್ತಿಲ್ಲ ಎನ್ನುವವರು ಯಾವ ರೀತಿ ಕುಡಿಯಬೇಕು ಎಂದು ತಿಳಿದುಕೊಳ್ಳುವುದು ಒಳಿತು… ನಿಮಗೆ ಗೊತ್ತಿದೆಯೋ ಇಲ್ಲವೊ ಎಷ್ಟೋ ಮಂದಿ ಇಂದಿಗೂ ಬಹಳ ವರ್ಷಗಳಿಂದ decent ಆಗಿ ಕುಡಿದು ಯಾವುದೇ ದೇಹಕ್ಕೆ ಹಾನಿ ಇಲ್ಲದೆ ಜೀವನ ನೆಡೆಸುತ್ತಿದ್ದಾರೆ. ಅದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ…

1 ಅರ್ಜೆಂಟ್ ನಲ್ಲಿ ಅನ್ನ ತಿನ್ನುವುದು ತಪ್ಪು ಎಂದು ಹಿರಿಯರು ಹೇಳಿದ್ದಾರೆ, ಅಂತದ್ರಲ್ಲಿ ಕುಡಿಯುವುದೇ ತಪ್ಪು ಜೊತೆಗೆ ತರಾತುರಿಯಲ್ಲಿ ಕುಡಿಯುವುದು ಇನ್ನು ತಪ್ಪು… ತಿಳಿದುಕೊಳ್ಳಿ. ಇದರಿಂದ ಲಿವರ್ ಗೆ ಒತ್ತಡ ಜಾಸ್ತಿಯಾಗುತ್ತದೆ.

2 ಕುಡಿಯುವ ಖುಷಿಯಲ್ಲಿ ತಿನ್ನುವುದನ್ನೇ ಮರೆಯಬೇಡಿ, ಆದಷ್ಟು ಕ್ಯಾರಟ್, ತರಕಾರಿಗಳು, ಸಲಾಡ್ ಮತ್ತು ಮಾಂಸಾಹಾರಿ ಪ್ರಿಯರು ಚಿಕನ್, ಮಟನ್ ಗಳನ್ನೂ ಹೆಚ್ಚು ಹೆಚ್ಚು ಉಪಯೋಗಿಸಿ…

3 hot ಡ್ರಿಂಕ್ಸ್ ಕುಡಿಯುವಾಗ ನೀರನ್ನು ಹೆಚ್ಚು ಮಿಕ್ಸ್ ಮಾಡಿ ಕೊಳ್ಳಿ ಇದರಿಂದ ಎಣ್ಣೆಯೂ neutral ಆಗುವುದರಿಂದ ಹೆಚ್ಚು ತೊಂದರೆಯಾಗುವುದಿಲ್ಲ…

4 ಆಲ್ಕೋಹಾಲ್ content ಕಡಿಮೆ ಇರುವಂತಹ ಬಿಯರ್, ಶಾಂಪೇನ್, ಎನರ್ಜಿ ಡ್ರಿಂಕ್ಸ್ ನಂತಹ ಪಿಯಗಳ ಕಡೆ ಒಲವು ಹೆಚ್ಚಿಸಿಕೊಳ್ಳಿ, ಆದಷ್ಟು hot ಡ್ರಿಂಕ್ಸ್ ಕುಡಿತ ಕಡಿಮೆ ಮಾಡಿಕೊಳ್ಳಿ…

5 ಪ್ರತಿ ದಿನ ಕುಡಿಯುವುದು ಆರೋಗ್ಯ ಸ್ವಾಸ್ತ್ಯ ಹಾಳುಗೆಡವುತ್ತದೆ, ಆದಷ್ಟು ಕುಡಿತದ ದಿನಗಳ ಅಂತರ ಹೆಚ್ಚು ಇರುವಂತೆ ನೋಡಿಕೊಳ್ಳಿ… ತಿಂಗಳಿಗೆ ಒಂದು ದಿನ ಅಥವ ಏನಾದರು ಫಂಕ್ಷನ್ ಗಳಾದಾಗ, ಇಲ್ಲ ಹೊರಗಡೆ ಟ್ರಿಪ್ ಹೋದಾಗ ಲೈಟಾಗಿ ಕುಡಿದು ಎಂಜಾಯ್ ಮಾಡಿ… ದೇಹ ಮುಖ್ಯ ಕುಡಿತದ ದಾಹ ಅಲ್ಲ ಎನ್ನುವುದು ಮನಸಿನಲ್ಲಿ ಇರಲಿ

6 ಕುಡಿಯುವಾಗ ಸಿಗರೇಟ್ ಸೇದಬೇಡಿ, ಯಾಕಂದರೆ ಅದು ನಶೆಯಲ್ಲಿ ನೆತ್ತಿಗೆ ಏರಿದರೆ
ಪಾರ್ಶ್ವವಾಯು ಹೊಡೆಯುವ ಸಾಧ್ಯತೆ ಹೆಚ್ಚು ಇರುತ್ತದೆ ಮತ್ತು ಕುಡಿದು ಮಲಗಿದಾಗ ಶ್ವಾಸಕೋಶದಲ್ಲಿ ಉಸಿರಾಟದ ಒತ್ತಡ ಉಂಟಾಗಿ ನಿದ್ದೆಯಲ್ಲಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು…

7 ನಿಮ್ಮ ಸ್ತಿಮಿತ ತಪ್ಪುತ್ತಿದೆ ಎಂದು ಅರಿವಾಗುತ್ತಿದ್ದಂತೆ ಕುಡಿತ ನಿಲ್ಲಿಸಿಬಿಡಿ… ರಸ್ತೆಯಲ್ಲಿ ನಡೆಯಲಾಗದಷ್ಟು ಕುಡಿಯುವ ಬದಲು, ಸ್ವಲ್ಪ ಕುಡಿದು ಜೀವನವನ್ನ ನಗುತಾ ಎಂಜಾಯ್ ಮಾಡುವುದು ಒಳಿತಲ್ಲವೇ…?

8 ಕುಡಿಯೋದು ಒಂದು ಕಲೆ, ಅದನ್ನ ಅನುಭವಿಸಿ ಆಸ್ವಾಧಿಸಿ ಸ್ನೇಹಿತರೊಂದಿಗೆ ಎಂಜಾಯ್ ಮಾಡಿ… ಕುಡಿಯುತ್ತೇನೆ ಎಂದು ಬಾಟಲ್ ನ ಕುತ್ತಿಗೆಗೆ ಹಾಕಿಕೊಂಡು ಓಡಾಡುವುದರಿಂದ ಸಮಾಜದಲ್ಲಿ ಮರ್ಯಾದೆ ಹಾಳು… ಹೌದಲ್ವಾ…!?

9 ಕುಡಿಯುವಾಗ, ಕುಡಿದ ಮೇಲೆ ಯೋಗಿಯಾಗಿರಿ ಅತಿಯಾಗಿ ಕುಡಿದು ರೋಗಿಯಾಗ ಬೇಡಿ ಎಂದು ಕಳಕಳಿಯ ಮನವಿ…!

ಇದನ್ನು ಓದಿದ ಮೇಲೆ ಕುಡಿಯದೆ ಇರುವವರು ನೋಡಿ ಈ matter ಬೇಕಿತ್ತಾ ಎನ್ನಬಹುದು… ಕುಡಿಯದೆ ಇರುವ ಸ್ನೇಹಿತರೆ ನಿಮಗೆ ಒಂದು ಮಾತು ಹೇಳುವುದಕ್ಕೆ ಇಷ್ಟ ಪಡ್ತೀವಿ ಅದೇನಪ್ಪ ಅಂದ್ರೆ, ಕುಡಿತವೆನ್ನುವುದು ಮೈಗಂಟಿದ ಚಟ ಅದನ್ನು ಬಿಡಿಸಲು ಶೇಕಡ 70 % ಆಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ‘ದುಶ್ಚಟಗಳ ದಾಸರಾಗದೆ ಉತ್ತಮ ಪ್ರಜೆಗಳಾಗಿ’ ಎಂದು ನೀವುಗಳು ಕುಡಿಯುವುವವರಿಗೆ ತಿಳಿ ಹೇಳಿದರು, mike ತಗೊಂಡು ಕೂಗಿ ಹೇಳಿದರು, ಹೊಡೆದು ಹೇಳಿದರು ಕೇಳುವುದಿಲ್ಲ… ನೀವು ಅದೆಷ್ಟೇ ಒಳ್ಳೆ ಮಾತುಗಳಿಂದ, ಪ್ರೀತಿ ಇಂದ ಹೇಳಿದರೂ “ಬಿಡು ಗುರು, ಪಿಟೀಲ್ ಕುಯ್ತಾ ಇದ್ದಾರೆ” ಎಂದು ಹೇಳಿ ಮತ್ತೆ ತಮ್ಮ ಚಟಗಳತ್ತ ವಾಲುವುದು ಸರ್ವೇ ಸಾಮಾನ್ಯವಾಗಿದೆ…
ನಾವು ಎಷ್ಟೇ ಬಡಿದುಕೊಂಡರು ಕುಡಿಯೋರು ಮಾತ್ರ ಕುಡಿಯೋದು ಬಿಡಲ್ಲ, ಸ್ವಲ್ಪ ಆರೋಗ್ಯ ಆದರೂ ಕಾಪಾಡಿ ಕೊಳ್ಳಿ ಅಂತ ಸಲಹೆ ಅಷ್ಟೇ..!

ನಿಮ್ ದುಡ್ಡು ನಿಮ್ ಇಷ್ಟ ಆದರೆ,
ನಿಮ್ಮ ಹೆಂಡತಿ ಮಕ್ಕಳ ಜೀವನ ಕುಡಿಯುವಾಗ ಕಣ್ಮುಂದೆ ಇರಲಿ.
ನಿಮಗಾಗಿ ಬದುಕಿರುವವರನ್ನು ಅಳಿಸಬೇಡಿ..!!