ಮೋದಿ ಸರಕಾರದ ಅಟಲ್ ಪಿಂಚಣಿ ಮೂಲಕ ಕೇವಲ ಸರ್ಕಾರಿ ನೌಕರರಲ್ಲದೇ ಬೇರೆಯವರೂ ಹೇಗೆ ತಿಂಗಳಿಗೆ ಸಾವಿರಾರು ರುಪಾಯಿ ಪಿಂಚಣಿ ಪಡೆಯಬಹುದು ಎಂದು ಓದಿ!!

0
2529

ನಮ್ಮದು ಸರ್ಕಾರಿ ಉದ್ಯೋಗ ಅಲ್ಲವೇ ಅಲ್ಲ. ವಯಸ್ಸಾದ ಮೇಲೆ ಪಿಂಚಣಿ ಕನಸು ಕನಸಾಗಿಯೇ ಉಳಿಯುತ್ತದೆ. ಏಕೆಂದ್ರೆ ಈಗ ಸರ್ಕಾರನೇ ಪಿಂಚಣಿ ನೀಡಲು ಹಿಂದೇಟು ಹಾಕುತ್ತಿರುವಾಗ ಇನ್ನು ನಮಗೆಲ್ಲಾ ಯಾವ ಲೆಕ್ಕಾ.. ನಮ್ಮ ಪಾಡು ಜೀವನ ಪೂರ್ತಿ ದುಡಿಯುವದೇ ಅಷ್ಟೇ.. ಅದನ್ನು ಬಿಟ್ಟು ಬೇರೇನು ದಾರಿ ಇಲ್ಲ. ಎಂದು ಕೊರಗುತ್ತಿದ್ದಾರೆ. ನಿಮಿಗಿದೋ ಒಂದು ಪ್ಲಾನ್​ ಕೇಂದ್ರ ಸರ್ಕಾರ ಕೊಡ ಮಾಡಿದೆ.

ಎಸ್​​.. ನರೇಂದ್ರ ಮೋದಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮೇಲೆ ಹೆಚ್ಚು ಜನಪ್ರೀಯ ಯೋಜನೆಗಳಲ್ಲಿ ಇದು ಒಂದು. ಅಟಲ್​ ಪಿಂಚಣಿ ಯೋಜನೆ. ನಿವೃತ್ತಿಗೆ ಭದ್ರತೆಯನ್ನು ಒದಗಿಸುವ ಕೆಲಸವನ್ನು ಈ ಯೋಜನೆ ಮಾಡುತ್ತದೆ. ಪ್ರಾವೇಟ್​ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡಲಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಯೋಜನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ.
ಬಡ ಹಾಗೂ ಮಧ್ಯಮ ವರ್ಗದ ಜನ ನಿವೃತ್ತಿ ಜೀವನವನ್ನು ಆನಂದದಿಂದ ಕಳೆಯಲು ಸರ್ಕಾರ ಹಾಕಿಕೊಂಡ ಯೋಜನೆ ಇದಾಗಿದ್ದು, ನಾಳೆಯ ಉತ್ತಮ ಬದುಕಿಗೆ ಅಟಲ್​ ಪಿಂಚಣಿ ಯೋಜನೆ ಪ್ರಾಮುಖ್ಯತೆ ನೀಡಿದೆ. ಮುಪ್ಪಿನ ಕಾಲದಲ್ಲಿ ಬೇರೆಯವರ ಮೇಲೆ ಅವಲಂಬಿತರಾಗದೆ ಸ್ವಾವಲಂಬಿ ಬದುಕು ಸಾಗಿಸಲು ಈ ಯೋಜನೆ ಸಹಕಾರಿ.

ಇನ್ನು ನೀವು ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್​​ಗಳಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆಯ ಬಹುದು. ನಿಮ್ಮ ವಯಸ್ಸು ಹಾಗೂ ನೀವು ಪಿಂಚಣಿ ಪಡೆಯಲು ಬಯುಸುವ ಹಣದ ಆಧಾರದ ಮೇಲೆ ನೀವು ತಿಂಗಳಿಗೆ ಕಟ್ಟುವ ಹಣದ ಲೆಕ್ಕಾಚಾರ ಮಾಡಲಾಗುತ್ತದೆ. ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಯಿಂದ ಯೋಜನೆಗೆ ಅಗತ್ಯವಿರುವ ಹಣ ಖಾತೆಯಿಂದ ತನ್ನಿಂದ ತಾನೇ ವರ್ಗಾವಣೆಯಾಗುತ್ತದೆ.
ಇನ್ನು ನೀವು ನಿಮ್ಮ ಮೊಬೈಲ್​ ಹಾಗೂ ಆಧಾರ ನಂಬರ್​​ ಈ ಯೋಜನೆಗೆ ಲಿಂಕ್​ ಮಾಡಿದ್ರೆ ಉತ್ತಮ. ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆದ ಬಳಿಕ ನಿಮ್ಮ ಮೊಬೈಲ್​ಗೆ ಮೆಸೆಜ್​ ಬರುತ್ತದೆ. ಎಲ್ಲ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಅಟಲ್ ಪಿಂಚಣಿ ಯೋಜನೆ ಸೌಲಭ್ಯವನ್ನು ಹೊಂದಿವೆ.

ಈ ಯೋಜನೆಯ ಅಡಿ 18 ವರ್ಷದ ಮೇಲ್ಪಟವರು ಇದರ ಲಾಭ ಪಡೆಯಬಹುದು. ಈ ಯೋಜನೆ 18 ವರ್ಷದವರು 42 ವರ್ಷ ತಿಂಗಳಿಗೆ 210 ತುಂಬ ಬೇಕು. ಇನ್ನು 20 ವರ್ಷದವರು 248, 25 ವರ್ಷವಾದರೆ 376, 30 ವರ್ಷದವರಾದ್ರೆ 577, 40 ವರ್ಷದವರಾದ್ರೆ ತಿಂಗಳು 1454 ಹಣ ಕಟ್​ ಬೇಕು.

ಈ ಖಾತೆಯನ್ನು ಮಾಡಿಸಿಕೊಂಡವರು 60 ವರ್ಷ ಆದ ಬಳಿಕ ಪಿಂಚಣಿಗೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದು. ಈ ಮೇಲಿನಂತೆ ಮಾಸಿಕ ಹಣ ಹೂಡಿಕೆ ಮಾಡಿದರೆ 60ನೇ ವರ್ಷದಿಂದ ತಿಂಗಳಿಗೆ ರೂ. 5000 ಪಿಂಚಣಿ ಪಡೆಯಬಹುದಾಗಿದೆ. ಯೋಜನೆ ಅನ್ವಯ ತಿಂಗಳಿಗೆ 1000 ದಿಂದ 5000 ವರೆಗೆ ಪಡೆದುಕೊಳ್ಳಲು ಸಾಧ್ಯವಿದೆ. 60 ವರ್ಷದ ನಂತರ ಪೆನ್ಶನ್ ದೊರೆಯಲಿದ್ದು, ನೀವು ಕಟ್ಟುವ ಹಣದ ಆಧಾರದ ಮೇಲೆ ಪೆನ್ಶನ್ ಹಣ ನಿರ್ಧರಿತವಾಗಿರುತ್ತದೆ.