ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ಅನ್ನು ಸಿಂಪಲ್ ಆಗಿ ಮನೆಯಲ್ಲಿಯೇ ರಿಮೂವ್ ಮಾಡಿ. ಬ್ಯೂಟಿ ಪಾರ್ಲರ್ ಗಳಿಗೆ ದೂಡ್ಡು ಕಟ್ಟುವುದನ್ನು ಕಡಿಮೆ ಮಾಡಿ.

0
6902

Kannada News | Health tips in kannada

ಮುಖ ಸುಂದರವಾಗಿದ್ದರೂ ಈ ಬ್ಲಾಕ್ ಹೆಡ್ಸ್ ನಿಂದಾಗಿ ಕಿರಿಕಿರಿಯಾಗುತ್ತದೆ.. ಇದರಿಂದ ಕೆಲವು ಬಾರಿ ಮುಜುಗರಕ್ಕೂ ಒಳಗಾಗುತ್ತೇವೆ.. ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ತೆಗಿಸಲು ಸಾಧ್ಯವಿಲ್ಲ.. ಅದರಲ್ಲೂ ಹುಡುಗರು ಪಾರ್ಲರ್ ಗಳಲ್ಲಿ ತೆಗೆಸಲು ಮುಜುಗರವೂ ಆಗುತ್ತದೆ.. ಇದಕ್ಕಾಗಿಯೇ ಮನೆ ಮದ್ದುಗಳ ಮೊರೆ ಹೋಗುವುದೇ ಒಳ್ಳೆಯದು.. ನಿಮಗಾಗಿಯೇ ಇಲ್ಲಿ ಕೆಲವು ಮನೆಮದ್ದುಗಳ ಮಾಹಿತಿ ನೀಡಿದ್ದೇವೆ ನೋಡಿ..

ನಿಂಬೆ ಹಣ್ಣು

ಬ್ಲಾಕ್ ಹೆಡ್ಸ್ ರಿಮೂವ್ ಮಾಡಲು ನಿಂಬೆ ಹಣ್ಣು ಬಲು ಉಪಯುಕ್ತ.. ಮೊದಲು ಬಿಸಿನೀರಿನಲ್ಲಿ ಮುಖ ತೊಳೆದು ನಂತರ ನಿಂಬೆ ಹಣ್ಣನ್ನು ಮುಖಕ್ಕೆ ಹಾಕಿ ನಿಧಾನವಾಗಿ ಸ್ಕ್ರಬ್ ಮಾಡಿ.. ಅತಿಯಾಗಿ ಮಾಡಲು ಹೋಗಬೇಡಿ ಮುಖ ಉರಿ ಬರುವುದು.. ನಿಧಾನವಾಗಿ ಒಂದು 5 ನಿಮಿಷ ಮಾಡಿ ಮತ್ತೆ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ..

ಅಡುಗೆ ಸೋಡ

ಅಡುಗೆ ಸೋಡಾ ಕೂಡ ಒಂದೊಳ್ಳೆ ಉಪಾಯ ಆದರೇ ನೆನಪಿನಲ್ಲಿಡಿ ಅಡುಗೆ ಸೋಡಾ ಕೆಲವರಿಗೆ ಉರಿ ತರಿಸುತ್ತದೆ.. ಆದರೇ ಇದು ಅತಿ ವೇಗವಾಗಿ ಬ್ಲಾಕ್ ಹೆಡ್ಸ್ ಅನ್ನು ರಿಮೂವ್ ಮಾಡುತ್ತದೆ.. ¼ ಸ್ಪೂನ್ ಅಡುಗೆ ಸೋಡದಲ್ಲಿ ಪೇಸ್ಟ್ ರೀತಿಯಾಗಿ ಮಾಡಿಕೊಂಡು ನಿಮ್ಮ ಮೂಗಿನ ಮೇಲೆ ಹಾಕಿ ಮೆಲ್ಲನೆ ಸ್ಕ್ರಬ್ ಮಾಡಿ.. ಜೋರಾಗಿ ಮಾಡಬೇಡಿ.. ಈ ರೀತಿಯಾಗಿ 2 ನಿಮಿಷಗಳಷ್ಟು ಮಾಡಿ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ..

ರೋಸ್ ವಾಟರ್

ಇದು ಸೈಡ್ ಎಫೆಕ್ಟ್ ಅಥವಾ ಮುಖ ಉರಿ ಬರದೆ ಇರುವ ಹಾಗೆ ಬ್ಲಾಕ್ ಹೆಡ್ಸ್ ರಿಮೂವ್ ಮಾಡಬಹುದಾದ ವಿಧಾನ.. ರೋಸ್ ವಾಟರ್ ಅನ್ನು ಮುಖಕ್ಕೆ ಹಾಕಿಕೊಂಡು 5 ನಿಮಿಷ ಬಿಟ್ಟು ಬಿಸಿ ನೀರಿನ ಹಾವಿಯನ್ನು ಮುಖಕ್ಕೆಕೊಡಿ, ನಂತರ ಹತ್ತಿಯಿಂದ ರಬ್ ಮಾಡುತ್ತಾ ಬನ್ನಿ ಬ್ಲಾಕ್ ಹೆಡ್ಸ್ ರಿಮೂವ್ ಆಗುವುದು..

ಅರಿಶಿಣ.

ಅರಿಶಿಣವನ್ನು ಹಾಲಿನ ಕೆನೆಯೊಂದಿಗೆ ಪೇಸ್ಟ್ ರೀತಿಯಾಗಿ ಮಾಡಿಕೊಂಡು ಮೂಗಿನ ಮೇಲೆ ಹಾಕಿ 5 ನಿಮಿಷಗಳ ಕಾಲ ರಬ್ ಮಾಡಿ.. ನಂತರ ಹತ್ತಿಯಿಂದ ಮೂಗಿನ ಮೇಲೆ ಪ್ರೆಸ್ಸ್ ಮಾಡುತ್ತಾ ಬ್ಲಾಕ್ ಹೆಡ್ಸ್ ರಿಮೂವ್ ಮಾಡಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಮಾಹಿತಿ ತಿಳಿಯಲಿ..
Also read: ನಿಮ್ಮ ಮನೆಯಲ್ಲಿ ಡಯಾಬಿಟಿಸ್ ಇರುವವರು ಇದ್ದಾರೆಯೇ?? ಹಾಗಿದ್ದರೇ ನೀವು ಈ ಲೇಖನವನ್ನು ಓದಲೇಬೇಕು..

Watch: