ಮೊಬೈಲ್ ಪ್ರಿಯರೆ ಎಚ್ಚರ, ಟಾಯ್ಲೆಟ್-ನಲ್ಲಿ ನೀವೇನಾದರು ಮೊಬೈಲ್ ಬಳಕೆ ಮಾಡಿದ್ದೇ ಆದಲ್ಲಿ, ಮೂಲವ್ಯಾಧಿ ಸೇರಿದಂತೆ ಅನೇಕ ಖಾಯಿಲೆಗಳು ಬರುತ್ತವೆಯಂತೆ!!

0
1193

ಮೊಬೈಲ್ ಬಂದಾಗಿನಿಂದ ಜನರು ಹೇಗೆ ಆಗಿದ್ದಾರೆ ಎಂದರೆ, ದಿನದಲ್ಲಿ 15 ಘಂಟೆ ಮೊಬೈಲ್ ಬಳಕೆ ಮಾಡುವ ಹಾಗೆ ಆಗಿದ್ದಾರೆ. ಅದರಲ್ಲಿ ಊಟ ಮಾಡುವಾಗ ಎಲ್ಲರ ಕೈಯಲ್ಲಿ ಮೊಬೈಲ್ ಬೇಕೇಬೇಕು ಅಷ್ಟೆಕ್ಕೆ ನಿಲ್ಲದೆ ವಾಹನ ಓಡಿಸುವಾಗ, ವ್ಯಾಯಾಮ ಮಾಡುವಾಗ, ಸೇರಿದಂತೆ ಜೀವನಕ್ಕೆ ಮೊಬೈಲ್ ಮೊದಲು ಎನ್ನುವಂತೆ ಜನರು ಮೊಬೈಲ್ ದಾಸರಾಗಿದ್ದಾರೆ. ಅದರಲ್ಲಿ ಹೆಚ್ಚಿನ ಜನರು ಟಾಯ್ಲೆಟ್-ನಲ್ಲಿವೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಸಂಶೋಧನೆಯೊಂದು ನಡೆದಿದ್ದು, ಟಾಯ್ಲೆಟ್​ನಲ್ಲಿ ಮೊಬೈಲ್ ಬಳಕೆ ಮಾಡಿದರೆ ಮೂಲವ್ಯಾಧಿ ಕಾಡುವ ಸಾಧ್ಯತೆ ಹೆಚ್ಚಿದೆಯಂತೆ.

Also read: ಪಾಲಕರೇ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಎಚ್ಚರ; ಮೊಬೈಲ್ ಬಳಕೆ ಮಕ್ಕಳ ಮೆದುಳಿನ ಬೆಳೆವಣಿಗೆಯನ್ನು ಕುಂಟಿತಗೊಳಿಸುತ್ತೆ..

ಟಾಯ್ಲೆಟ್​ನಲ್ಲಿ ಮೊಬೈಲ್ ಬಳಕೆ ಮಾಡುವ ಮುನ್ನ ಎಚ್ಚರ;

ಹೌದು ಕೂತರೂ ಮೊಬೈಲ್, ನಿಂತರೂ ಮೊಬೈಲ್, ಮಲಗಿದರೂ ಮೊಬೈಲ್, ಬೈಕ್ನಲ್ಲಿದ್ದಾಗ ಮೊಬೈಲ್, ಕಾರಿನಲ್ಲಿದ್ದಾಗ ಮೊಬೈಲ್. ಇನ್ನೂ ಕೆಲವರು ಟಾಯ್ಲೆಟ್​ನಲ್ಲೂ ಮೊಬೈಲ್ ಬಳಸುವವರಿದ್ದಾರೆ! ಇದು ಅನೇಕರಿಗೆ ಅಚ್ಚರಿ ತರುವ ವಿಚಾರವೇ ಅಲ್ಲ. ಮೊದಲೆಲ್ಲ ಟಾಯ್ಲೆಟ್​ನಲ್ಲಿ ಕೂತು ಪೇಪರ್ ಓದುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದೆ. ಟಾಯ್ಲೆಟ್​ನಲ್ಲಿ ಪೇಪರ್ ಓದುವ ಬದಲು ಮೊಬೈಲ್ ಬಳಕೆ ಮಾಡುತ್ತಾರೆ. ಮೊದಲು ಪೇಪರ್ ಇಲ್ಲದೇ ಸರಾಗವಾಗಿ ಆಗುವುದೇ ಇಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಈಗ ಕಾಲ ಕೊಂಚ ಬದಲಾಗಿದೆ.

Also read: ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನುವ ಜನರಿಗೆ ಬಿಗ್ ಶಾಕಿಂಗ್ ನ್ಯೂಸ್; ಕತ್ತಲಲ್ಲಿ 30 ನಿಮಿಷ ಮೊಬೈಲ್ ನೋಡಿದ್ರೆ ಏನ್ ಆಗುತ್ತೆ ಗೊತ್ತ??

ಈಗ ಟಾಯ್ಲೆಟ್​ನಲ್ಲಿ ಮೊಬೈಲ್ ಇಲ್ಲದಿದ್ದರೆ ಮಲ ವಿಸರ್ಜನೆ ಸರಿ ಆಗುವುದೇ ಇಲ್ಲ ಎಂದು ಹೇಳುವ ಕೆಲ ವ್ಯಕ್ತಿಗಳೂ ಇದ್ದಾರೆ. ಟಾಯ್ಲೆಟ್​ನಲ್ಲಿ ಕುಳಿತಾಗ ಉಳಿದೆಲ್ಲವೂ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ. ಹೀಗಿರುವಾಗ ಸುಮ್ಮನೆ ಕುಳಿತಿರುವುದೇಕೆ ಎಂದು ಕೆಲವರು ಮೊಬೈಲ್ ಬಳಕೆ ಮಾಡುತ್ತಾರೆ. ಆದರೆ, ಇದು ತೀರಾ ಅಪಾಯಕಾರಿ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಬ್ರಿಟನ್​ನಲ್ಲಿ ಒಟ್ಟು ಜನ ಸಂಖ್ಯೆಯಲ್ಲಿ ಶೇ. 57 ಜನರು ಮಲವಿಸರ್ಜನೆ ಮಾಡುವಾಗ ಮೊಬೈಲ್ ಬಳಕೆ ಮಾಡುತ್ತಾರೆ. ಇದನ್ನು ಬಹುತೇಕ ಜನರು ಒಪ್ಪಿಕೊಳ್ಳುತ್ತಾರೆ. ಅದರಲ್ಲಿ ಇನ್ನೊಂದು ಮುಖ್ಯ ವಿಚಾರ ವೇನೆಂದರೆ ಟಾಯ್ಲೆಟ್​ನಲ್ಲಿ ಮೊಬೈಲ್ ತೆಗೆದುಕೊಂಡ ಹೋದಾಗ ಅಲ್ಲಿರುವ ಬ್ಯಾಕ್ಟೀರಿಯಾಗಳು ಮೊಬೈಲ್-ಗೆ ಅಂಟಿಕೊಂಡು ಮನೆಯ ಒಳಗೆ ಬಂದು ಊಟದಲ್ಲಿ ಸೇರಿ ಹಲವು ರೋಗಗಳು ಬರಲು ಕಾರಣವಾಗುತ್ತಿವೆ.

Also read: ಮೊಬೈಲ್ ಎಷ್ಟೊಂದು ಉಪಯುಕ್ತ ಎನ್ನುವರಿಗೆ ಆಘಾತ; ಹೆಚ್ಚು ಮೊಬೈಲ್ ಬಳಕೆ ಮಾಡಿದರೆ ನಿದ್ರೆ ರೋಗ, ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ ಕಾರಣವಂತೆ!!

ಅದರಂತೆಯೇ ಟಾಯ್ಲೆಟ್​ನಲ್ಲಿ ಮೊಬೈಲ್ ಬಳಕೆ ಮಾಡಿದರೆ ಮೂಲವ್ಯಾಧಿ ಕಾಡುವ ಸಾಧ್ಯತೆ ಹೆಚ್ಚಿದೆಯಂತೆ. ಟಾಯ್ಲೆಟ್​ನಲ್ಲಿ ಮೊಬೈಲ್ ಬಳಕೆ ಮಾಡಿದರೆ ಮೂಲವ್ಯಾಧಿ ಕಾಡುವ ಸಾಧ್ಯತೆ ಹೆಚ್ಚಿದೆಯಂತೆ. ಟಾಯ್ಲೆಟ್​ನಲ್ಲಿ ಮೊಬೈಲ್ ಬಳಕೆ ಮಾಡಿದರೆ ಮೂಲವ್ಯಾಧಿ ಕಾಡುವ ಸಾಧ್ಯತೆ ಹೆಚ್ಚಿದೆಯಂತೆ. ಇದಕ್ಕೆ ಸೂಕ್ತ ಕಾರಣವನ್ನೂ ನೀಡುತ್ತಾರೆ ವೈದ್ಯರು. ಮೊಬೈಲ್ ಬಳಕೆ ಮಾಡುತ್ತಾ ಟಾಯ್ಲೆಟ್​ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ಜನರು ಕಳೆಯುತ್ತಾರೆ. ಹೀಗೆ ಜಾಸ್ತಿ ಹೊತ್ತು ಕೂತಿದ್ದರೆ ನಿಮ್ಮ ಗುದದ್ವಾರದಲ್ಲಿರುವ ರಕ್ತನಾಳದ ಮೇಲೆ ಒತ್ತಡ ಬೀಳಲಿದೆಯಂತೆ. ಇದರಿಂದ ಪೈಲ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಹೀಗಾಗಿ, ಟಾಯ್ಲೆಟ್​ನಲ್ಲಿ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಉತ್ತಮ ಎನ್ನುವುದು ವೈದ್ಯರ ಸೂಚನೆ.