ಮತ್ತೆ ಸುದ್ದಿಯಲ್ಲಿದ್ದಾರೆ ಹುಚ್ಚ ವೆಂಕಟ್, ಫೈರಿಂಗ್ ಸ್ಟಾರ್-ಗೆ ಥಳಿಸಿದ ಈ ಯುವಕ, ಡೀಟೇಲ್ಸ್-ಗಾಗಿ ಇದನ್ನು ಓದಿ…!

0
839

“ಹುಚ್ಚಾ ವೆಂಕಟ್” ಈ ಹೆಸರು ಕೇಳಿದ ತಕ್ಷಣ ಎಲ್ಲರಿಗೆ ಸಾಮಾನ್ಯವಾಗಿ ನೆನಪಗೋ ಡೈಲಾಗ್ “ನನ್ ಮಗನ್”, “ನನ್ನ ಎಕ್ಕಡ”, ಹೀಗೆ ತುಂಬಾನೆ ಕೆಟ್ಟದಾಗಿ ಬೈದು ಹೊಡೆದು ಫೇಮಸ್ ಆದ ಫೈರಿಂಗ್ ಸ್ಟಾರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಜನ ಸಾಮಾನ್ಯವಾಗಿ ಹುಚ್ಚಾ ವೆಂಕಟ್ ಎಂದಾಕ್ಷಣ ತುಂಬಾನೆ ಕಿರಿಕ್ ಮನುಷ್ಯ, ಏನು ಅವನದು ಹೊಸ ಜಗಳ, ಮತ್ತೇನು ಮಾಡಿದ, ಯಾರಿಗೆ ಹೊಡೆದ, ಯಾರಿಗೆ ಬೈದ ಅಂತ ಹೇಳೋದು ಸಹಜ ಆದರೆ ಈ ಬಾರಿ ಹುಚ್ಚಾ ಏನು ಮಾಡಿಲ್ಲ ಆದರು ಸುದ್ದಿಯಾಗಿದ್ದಾನೆ, ಅರೆ ಅದು ಹೇಗೆ ಅಂತೀರ ನೀವೇ ನೋಡಿ.

ಟಿ.ಆರ್.ಪಿ ರಾಜ, ಫೈರಿಂಗ್ ಸ್ಟಾರ್, ಯೂಟ್ಯೂಬ್ ಸ್ಟಾರ್, ಅಂತಾನೆ ಸಿಕ್ಕಾಪಟ್ಟೆ ಹೆಸರು ಮಾಡಿದ್ದ ಹುಚ್ಚ ವೆಂಕಟ್, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ‘ಬಿಗ್ ಬಾಸ್’ ಮನೆಯೊಳಗೆ ಹೋಗಿ ಸಾಕಷ್ಟು ಮನರಂಜನೆ ನೀಡುತ್ತಿರುವಾಗಲೇ, ತನ್ನ ಸಹ ಸ್ಪರ್ಧಿ ಮೇಲೆ ಹಲ್ಲೆ ಮಾಡಿ ಕಾರ್ಯಕ್ರಮದಿಂದ ಹೊರಬಿದ್ದರು.

‘ಬಿಗ್ ಬಾಸ್’ ಶೋನ ಮತ್ತೊಂದು ಸೀಸನ್-ನಲ್ಲಿ ಅತಿಥಿಯಾಗಿ ಮನೆಯೊಳಗೆ ಹೋಗಿದ್ದ, ಆಗ ಸ್ಪರ್ಧಿ ಪ್ರಥಮ್ ಗೆ ಥಳಿಸಿ ಬಂದಿದ್ದ. ಈ ಬಾರಿ ಹುಚ್ಚ ವೆಂಕಟ್ ಯಾರ ಮೇಲೂ ಹಲ್ಲೆ ಮಾಡಿಲ್ಲ, ಬದಲಾಗಿ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ. ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆದಿದೆ, ರಸ್ತೆಯಲ್ಲಿ ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಯುವಕನೊಬ್ಬ ಥಳಿಸಿದ್ದಾನೆ, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನವೆಂಬರ್ 29 ರ ರಾತ್ರಿ ಸುಮಾರು ಹತ್ತು ಗಂಟೆಗೆ ಈ ಗಲಾಟೆ ನಡೆದಿದ್ದು, ರಾತ್ರಿ ಊಟ ಮಾಡಲು ಹುಚ್ಚ ವೆಂಕಟ್ ಯಶವಂತಪುರದಲ್ಲಿರುವ ಹೋಟೆಲ್ ಒಂದಕ್ಕೆ ಹೋಗಿದ್ದರಂತೆ, ಊಟ ಮಾಡಿ ಮನೆಗೆ ವಾಪಸ್ ಬರುತ್ತಿದಾಗ, ಯುವಕರು ಮಾತನಾಡಿಸಿ ಗೇಲಿ ಮಾಡಿದ್ದಾರಂತೆ. ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿ ಅವರಲ್ಲಿ ಒಬ್ಬ ಯುವಕ ಕೈಯಲ್ಲಿದ್ದ ಹೆಲ್ಮೆಟ್-ನಿಂದ ಹುಚ್ಚ ವೆಂಕಟ್ ತಲೆಗೆ ಹೊಡೆದ್ದಿದ್ದಾನೆ.

ತಲೆಗೆ ಹೆಲ್ಮೆಟ್-ನಿಂದ ಪೆಟ್ಟು ಬಿದ್ದ ಮೇಲೆ ಏನ್ನನ್ನೂ ಮಾತನಾಡದೆ ಮನೆಗೆ ತೆರಳಿದ ಹುಚ್ಚ ವೆಂಕಟ್, ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಿಲ್ಲ. ಈ ಘಟನೆಯ ದೃಶ್ಯ ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ, ಇದರ ಬಗ್ಗೆ ಹುಚ್ಚ ವೆಂಕಟ್ ಈವರೆಗೆ ಯಾವುದೇ ಮಾಧ್ಯಮದ ಮುಂದೆ ಹೇಳಿಕೆ ನೀಡಿಲ್ಲ.