ಕಾಲೇಜಿಗೆ ಹೋಗುತ್ತಿದ್ದ ಯುವತಿಗೆ ನನ್ನ ಮದುವೆಯಾಗಲೇಬೇಕೆಂದು ಯುವತಿ ಜೊತೆ ಕಿತ್ತಾಟ ಮಾಡಿದ ಹುಚ್ಚ ವೆಂಕಟ್ ಒಪ್ಪದಕ್ಕೆ ಕಾರ್ ಗ್ಲಾಸ್ ಪುಡಿ ಪುಡಿ.!

0
271

ನಶೆಯಲ್ಲಿ ಮಾತನಾಡುವ ಮೂಲಕ ಹೆಸರುವಾಸಿಯಾಗಿದ್ದ ನಟ ಹುಚ್ಚ ವೆಂಕಟ್ ಕೆಲವು ದಿನಗಳ ಹಿಂದೆ ಮಡಿಕೇರಿ ಶಿವಮೊಗ್ಗದಲ್ಲಿ ಯುವಕರ ಮೇಲೆ ಹಲ್ಲೆ ಮಾಡಿ ಸಾರ್ವಜನಿಕರಿಂದ ತಲಿಸಿಕೊಂಡು ಸ್ವಲ್ಪ ದಿನ ತೆಪ್ಪಗಿಂದ ವೆಂಕಟ್ ಈಗ ಯುವತಿಯ ಮೇಲೆ ಅನುಚಿತವಾಗಿ ವರ್ತನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಕಾಲೇಜ್ ಹೋಗುವ ಯುವತಿಗೆ ರಸ್ತೆಯಲ್ಲೇ ಪ್ರಪೋಸ್ ಮಾಡಿ ಕಾರಲ್ಲಿ ಹತ್ತು, ಎಂದು ಬಲವಂತ ಮಾಡಿದ್ದಾನೆ ಯುವತಿ ಒಪ್ಪದಕ್ಕೆ ನಿನ್ನ ತಲೆಗೆ ಹೊಡಿತೀನಿ ಎಂದು ಅವಾಜ್ ಹಾಕಿದ್ದಾನೆ.

Also read: ಚೆನ್ನೈನ ಬೀದಿಯಲ್ಲಿ ‘ಕಾಲಿಗೆ ಚಪ್ಪಲಿಯೂ ಇಲ್ಲದೆ, ಕೊಳಕು ಬಟ್ಟೆಯಲ್ಲಿ ಹುಚ್ಚ ವೆಂಕಟ್‌ ಅಲೆದಾಟ! ನಿಜ ಜಿವನದಲ್ಲಿವೂ ಹುಚ್ಚರಾದ್ರ ವೆಂಕಟ್??

ಯವತಿಗೆ ರಸ್ತೆಯಲ್ಲೇ ಪ್ರಪೋಸ?

ಹೌದು ಕೆಲವು ದಿನಗಳ ಹಿಂದೆ ಹುಚ್ಚ ವೆಂಕಟ್ ಚೆನೈಯಲ್ಲಿ ರಸ್ತೆಯಲ್ಲಿ ಸುತ್ತುತ್ತಿದ್ದ ನಂತರ ಮಡಿಕೇರಿಯಲ್ಲಿ ಯುವಕರ ಮೇಲೆ ಹಲ್ಲೆ ಮಾಡಿ ಕಾರ್ ಗ್ಲಾಸ್ ಒಡೆದು ಹೊಡೆತ ತಿಂದಿದ್ದ, ನಂತರ ಶಿವಮೊಗ್ಗದಲ್ಲಿ ಗಲಾಟೆ ಮಾಡಿಕೊಂಡು ಸುದ್ದಿಯಾಗಿದ್ದ ಹುಚ್ಚ, ಈಗ ಬೆಂಗಳೂರು ಮತ್ತು ಹಿಂದುಪುರ ರಾಜಾನುಕುಂಟೆ ಸಮೀಪದ ಹರದೇಶನಹಳ್ಳಿ ಟೋಲ್ ಬಳಿ ರಾದ್ಧಾಂತ ಮಾಡಿಕೊಂಡಿದ್ದಾನೆ. ”ನನ್ನನ್ನು ಮದುವೆಯಾಗು” ಎಂದು ಯುವತಿಯನ್ನು ಒತ್ತಾಯ ಮಾಡಿದ್ದಾನೆ. ರಸ್ತೆ ಬದಿ ಕಾರು ನಿಲ್ಲಿಸಿ, ಯುವತಿ ಜೊತೆ ಈ ರೀತಿ ರಂಪಾಟ ಮಾಡಿದ್ದಾನೆ.

ತನ್ನ ಪಾಡಿಗೆ ತಾನು ಬಸ್ ನಿಲ್ದಾಣ ಬಳಿ‌ ನಿಂತಿದ್ದ ಯುವತಿಯನ್ನು ಹುಚ್ಚ ವೆಂಕೆಟ್ ಮಾತನಾಡಿಸಿದ. ನಂತರ ಆಕೆಗೆ ಮದುವೆ ಆಗುವಂತೆ ಒತ್ತಾಯ ಮಾಡಿದ. ಇದರಿಂದ ಭಯಗೊಂಡ ಯುವತಿ, ಏನು ತೊಚದೆ, ಹುಚ್ಚ ವೆಂಕಟ್ ಜೊತೆಗೆ ಹೆದರುತ್ತಲೆ ಮಾತನಾಡಿದ್ದಾಳೆ. ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಹುಚ್ಚ ವೆಂಕಟ್ ತನ್ನ ಕಾರ್ ಒಡೆದು ಹಾಕಿ, ಕಿಟಕಿ ಗಾಜನ್ನು ಪುಡಿ ಮಾಡಿದ್ದಾನೆ. ಬಳಿಕ ಬಸ್ ಹತ್ತಲು ಮುಂದಾದ ಯುವತಿಯನ್ನ ಅಡ್ಡಗಟ್ಟಿದ ಹುಚ್ಚ ವೆಂಕಟ್, “ನೀನು ನನ್ನ ಮದುವೆಯಾಗಲೇ ಬೇಕು. ನೀ ಏನಾದ್ರೂ ಹೋದ್ರೆ ನಿನ್ ತಲೆ ಹೊಡಿತೀನಿ ಎಂದು ಹೇಳಿದ್ದಾನೆ. ಅಲ್ಲದೆ ಟೋಲ್‍ನಲ್ಲಿಯೇ ಯುವತಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಯುವತಿ ಪೊಲೀಸರಿಗೆ ಫೋನ್ ಮಾಡುವುದಾಗಿ ಹೇಳಿದರೂ ಹುಚ್ಚ ವೆಂಕಟ್ ತಲೆಕೆಡಿಸಿಕೊಳ್ಳಲಿಲ್ಲ.

Also read: ಮೃತಪಟ್ಟ ಗಂಡನ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ; ಯಾರಿಗೂ ತಿಳಿಯದಂತೆ 7 ಜನರನ್ನು ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡ.!

ಘಟನೆ ಬಳಿಕ ಹುಚ್ಚ‌ ವೆಂಕಟ್ ಅವಸ್ಥೆ ಕಂಡು ಆತನಿಗೆ ಸ್ಥಳಿಯರು ಹಣ ನೀಡಿದ್ದಾರೆ. ಚೆನ್ನೈನ ಬೀದಿಯಲ್ಲಿ ತಿರುಗಾಡುತ್ತಿರುವ ವಿಡಿಯೋವನ್ನು ಭುವನ್ ತಮ್ಮ ಎಫ್‍ಬಿಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಅಲ್ಲದೆ ವೆಂಕಟ್‍ನನ್ನು ಬೆಂಗಳೂರಿಗೆ ಕರೆ ತರಲು ಪ್ರಯತ್ನಿಸಿ ಎಂದು ಮನವಿ ಮಾಡಿಕೊಂಡಿದ್ದರು. ವಿಡಿಯೋ ನೋಡಿದ್ದ ಭುವನ್ ಸ್ನೇಹಿತರೊಬ್ಬರು ಹುಚ್ಚ ವೆಂಕಟ್‍ನನ್ನು ಬೆಂಗಳೂರಿಗೆ ಕರೆತರಲು ಪ್ರಯತ್ನಿಸಿದ್ದರು. ಬಳಿಕ ಚೆನ್ನೈನ ಬೀದಿಯಲ್ಲಿ ಚಪ್ಪಲಿ ಧರಿಸದೇ, ಕೊಳಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಹುಚ್ಚ ವೆಂಕಟ್‍ನನ್ನ ಭುವನ್ ಸ್ನೇಹಿತ ಪತ್ತೆ ಹಚ್ಚಿದ್ದರು. ಹುಚ್ಚ ವೆಂಕಟ್‍ನನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೋಗುವ ಬಗ್ಗೆ ಮಾತನಾಡಿದ್ದರು. ಆದರೆ ಸಹಾಯ ಮಾಡಲು ಹೋದ ಭುವನ್ ಸ್ನೇಹಿತನಿಗೆ ಹುಚ್ಚ ವೆಂಕಟ್ ತಿರುಗಿ ಬಿದ್ದಿದರು.

ಅದಾದ ಬಳಿಕ ವೆಂಕಟ್ ಕೊಡಗು, ಮಂಡ್ಯ ಹಾಗೂ ರಾಮನಗರದಲ್ಲಿ ಗಲಾಟೆ ಶುರು ಮಾಡಿದ್ದರು. ಆಗ ಜನರು ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಇದನ್ನು ಗಮನಿಸಿದ ನಟ ಭುವನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಭುವನ್ ಸಾಮಾಜಿಕ ಜಾಲತಾಣದಲ್ಲಿ, “ಗೆಳೆಯರೆ ದಯವಿಟ್ಟು ಹುಚ್ಚ ವೆಂಕಟ್ ಅನ್ನು ಎಲ್ಲಿ ಕಂಡರೂ ಹೊಡಿಬೇಡಿ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರು ಕೆಟ್ಟವರಲ್ಲ. ಮಾನಸಿಕ ತೊಂದರೆಯಲ್ಲಿರುವವರು. ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಈಗ ಯುವತಿರಿಗೆ ಜೊತೆಗೆ ಅನುಚಿತ್ತವಾಗಿ ನಡೆದುಕೊಳ್ಳುತ್ತಿರುವುದು ನೋಡಿದರೆ ಇವರಿಗೆ ಮಾನಸಿಕ ಚಿಕಿತ್ಸೆ ಕೊಡಿಸುವುದು ಒಳ್ಳೆಯದು.