ಎಲ್ಲೆ ಮೀರಿದ ಹುಚ್ಚಾಟ! ಶಿವಣ್ಣನ ವಿರುದ್ಧವೇ ಬಾಯಿಗೆ ಬಂದಂತೆ ಮಾತಾಡಿದ ಹುಚ್ಚವೆಂಕಟ್..

0
741

Kannada News | Karnataka News

ಮಾತೆತ್ತಿದರೆ ನನಮಗಂದ್ ನನ ಎಕ್ಡಾ ಎಂದೇ ಹಲ್ಲು ಕಡಿಯುತ್ತಾ ಒಂದಷ್ಟು ದಿನ ಚಿಕ್ಕ ಮಕ್ಕಳ ಬಾಯಲ್ಲೂ ಲೇವಡಿಯ ಮನುಷ್ಯನಾಗಿ ಬಿಟ್ಟಿದ್ದ ದಿ ಗ್ರೇಟ್ ಫೈರಿಂಗ್ ಸ್ಟಾರ್ ಹುಚ್ಚವೆಂಕಟ್ ರದ್ದು ಮೇರೆ ಮೀರಿದ ವರ್ತನೆ.. ಸದಾ ವಿವಾದದಿಂದಲೇ ಜನಪ್ರಿಯನಾಗಲು ಯತ್ನಿಸಿ ಕನ್ನಡ ಚಿತ್ರರಂಗದಿಂದಲೇ ಮೂಲೆಗುಂಪಾಗಿರುವ ಹುಚ್ಚ ವೆಂಕಟ್ ಪೊಗರು ಮಾತ್ರ ಇನ್ನೂ ಇಳಿದಿಲ್ಲ. ಸಧ್ಯ ಕರುನಾಡ ಚಕ್ರವರ್ತಿ ಶಿವಣ್ಣಂಗೇ ಬಾಯಿಗೆ ಬಂದಂತೆ ಮಾತನಾಡಿ ಮತ್ತೊಂದು ವಿವಾದಕ್ಕೆ ಸಿಲುಕಿರುವುದಲ್ಲದೆ, ಶಿವಣ್ಣರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆಗಿದ್ದಿಷ್ಟು:
ಮಾಮೂಲಿನಂತೆಯೇ ಶಿವರಾಜ್ ಕುಮಾರ್ ರವರ ಮನೆಗೆ ಶಿವಣ್ಣರನ್ನು ಭೇಟಿಯಾಗಲು ಹೋಗಿದ್ದ ಹುಚ್ಚ ವೆಂಕಟ್ ರನ್ನು ಶಿವಣ್ಣ ಭೇಟಿಯಾಗಿರಲಿಲ್ಲ. ಕೆಲಸದ ನಿಮಿತ್ತ ಹೊರಗಿದ್ದ ಶಿವಣ್ಣಂಗೆ ಮನೆಯವರ ಮುಖಾಂತರ ನಂಬರ್ ತೆಗೆದುಕೊಂಡು ಫೋನಾಯಿಸಿದ್ದರೆ, ಶಿವಣ್ಣರ ಕಾರು ಚಾಲಕ ಫೋನು ಕಿವಿಗೊತ್ತಿಕೊಂಡಿದ್ದ. ಮತ್ತೆ ಶಿವಣ್ಣ ಸಧ್ಯ ಕೆಲಸದಲ್ಲಿರುವುದಾಗಿಯೂ ನಂತರ ನಾನೇ ಮಾಡುತ್ತೇನೆ ಎಂದೂ ತಿಳಿಸಿದ್ದ. ಇಷ್ಟಾಗುತ್ತಿದ್ದಂತೆ ಏಕಾ ಏಕಿ ಗರಂ ಆದ ಹುಚ್ಚ ವೆಂಕಟ್ ಯೂಟ್ಯೂಬ್ ನಲ್ಲಿ ಮನಬಂದಂತೆ ಶಿವಣ್ಣನ ವಿರುದ್ಧ ಕೆಂಡಕಾರಿದ್ದಾರೆ.

ನಾನು ಚಿತ್ರರಂಗದಲ್ಲಿ ಮೆಚ್ಚುವುದು ಡಾ.ವಿಷ್ಣುವರ್ಧನ್ ರನ್ನು ಮಾತ್ರ. ನಾನು ಅವರ ಅಭಿಮಾನಿಯಾಗಿದ್ದೆ. ಈಗ ನಿಮ್ಮ ಅಭಿಮಾನಕ್ಕಾಗಿ ನಿಮ್ಮ ಮನೆ ಬಾಗಿಲಿಗೆ ಬಂದರೆ ಒಂದು ಲೋಟ ನೀರು ತೊಡದೆ ಕಳುಹಿಸಿದ್ದೀರಿ. ನಮಗೇನು ಮರ್ಯಾದೆ ಇಲ್ಲವಾ.. ಎಂದು ಕೆಂಡ ಕಾರಿರುವುದಲ್ಲದೆ. ಒಂದು ಅಭಿಮಾನಿಗೆ ನೀರು ಕೊಡಲಿಲ್ಲ ಅಂದ್ರೆ ತಪ್ಪು. ನಾನು ಹುಚ್ಚ ವೆಂಕಟ್ ನಿಮ್ಮ ಪರವಾಗಿ ನಿಂತಿದ್ದೆ.. ಒಂದು ಗ್ಲಾಸ್ ನೀರಿಲ್ಲ. ಮನೆ ಗೇಟ್ ಕೂಡ ತೆಗೆಯಲಿಲ್ಲ. ನಾನು ಬರಬಾರದಿತ್ತು. ಇನ್ಯಾವತ್ತೂ ಬರಲ್ಲ ಶಿವರಾಜ್ ಕುಮಾರ್ ಅವರೇ… ನೀವೇ ಫೋನ್ ಮಾಡ್ತೀರಾ ಅಂತ ಹೇಳಿದ್ರು. ಆದ್ರೆ, ನಿಮ್ಮಿಂದ ಫೋನ್ ಬರಲಿಲ್ಲ. ಚೆನ್ನಾಗಿರಿ. ಹುಚ್ಚ ವೆಂಕಟ್ ವಾಲ್ಯೂ ಯಾವತ್ತೂ ಕಮ್ಮಿ ಆಗಲ್ಲ. ವಿಷ್ಣುವರ್ಧನ್ ಬಿಟ್ಟರೆ, ನನಗೆ ಆಗುವುದು ಮಾಧ್ಯಮದವರು ಹಾಗೂ ಪತ್ರಕರ್ತರು ಮಾತ್ರ ಎಂದು ತಮ್ಮ ಎಂದಿನ ಬುದ್ದಿ ತೋರಿಸಿದ್ದಾರೆ..

ನನ್ನ ದುರಹಂಕಾರ ಬಿಟ್ಟು, ನಿಮ್ಮ ಮನೆ ಮುಂದೆ ಬಂದು ನಿಂತು ಮಾತನಾಡುತ್ತಿದ್ದೇನೆ. ಇದು ಎರಡನೇ ದಿನ ನಿಮ್ಮ ಮನೆ ಮುಂದೆ ಬಂದಿರೋದು. ಇನ್ಯಾವತ್ತೂ ಬರಲ್ಲ. ಬಂದೋರಿಗೆ ನೀರು ಕೊಡೋದು ಮರೆಯಬೇಡಿ. ಒಂದಿಷ್ಟು ನೀರಾದರೂ ಅಭಿಮಾನಿಗಳಿಗೆ ಕೊಡಲು ನಿಮ್ಮ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.

ಹಿಂದೊಮ್ಮೆ ಕಿಚ್ಚ ಸುದೀಪ್ ವಿರುದ್ಧ ಬಿಗ್ ಬಾಸ್ ವೇದಿಕೆಯಲ್ಲಿ ಏಕವಚನ ಪ್ರಯೋಗಿಸಿ ಕಿಚ್ಚನ,ಅಭಿಮಾನಿಗಳಿಂದ ತಪರಾಕಿ ತಿನ್ನುತ್ತಿದ್ದ ವೆಂಕಟ್ ಇನ್ನೂ ಯಾಕೋ ಬುದ್ದಿ ಕಲಿತಂತಿಲ್ಲ. ಸಧ್ಯ ಶಿವಣ್ಣ ಅಭಿಮಾನಿಗಳು ಹುಚ್ಚವೆಂಕಟನ ಹುಚ್ಚಾಟಕ್ಕೆ ರೊಚ್ಚಿಗೆದ್ದಿದ್ದಾರೆ…

Also Read: ಟಗರು ಚಿತ್ರದ ವಿವಾದಾತ್ಮಕ ಡೈಲಾಗ್ ಬಗ್ಗೆ ಶಿವಣ್ಣ ಅಭಿಮಾನಿಗಳಿಗೆ ಏನ್ ಹೇಳಿದ್ರು ಗೊತ್ತಾ??