ಎಲ್ಲರ ಹೃದಯ ಗೆದ್ದ ಟ್ರಾಫಿಕ್ ಪೊಲೀಸ್ : ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು 2 ಕಿ.ಮೀ. ಓಡಿದ ಹೀರೋ..!

0
123

ಹೈದರಾಬಾದ್ : ಹೋಗುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಬಂದರೆ ದಾರಿ ಬಿಡಬೇಕು ಎಂಬ ನಿಯಮ ಇದೆ. ಅದು ನಿಯಮವಷ್ಟೇ ಅಲ್ಲ ಮಾನವೀಯತೆ ಕೂಡ. ಕೆಲವೊಮ್ಮೆ ಈ ಮಾನವೀಯತೆ ಟ್ರಾಫಿಕ್ ಕಿರಿಕಿರಿಯಿಂದ ವರ್ಕ್ ಆಗಲ್ಲ. ಹೈದ್ರಾಬಾದ್ ನಲ್ಲೂ ಇಂಥದ್ದೇ ಪರಿಸ್ಥಿತಿ ಎದುರಾಗಿದ್ದು, ಅಲ್ಲಿದ್ದ ಟ್ರಾಫಿಕ್ ಪೊಲೀಸ್ ಮಾನವೀಯತೆ ಮೆರೆದಿದ್ದಾರೆ.

ತುರ್ತು ಚಿಕಿತ್ಸೆಗಾಗಿ ರೋಗಿಯೊಬ್ಬರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿತ್ತು. ಆದ್ರೇ ದಾರಿಯುದ್ದಕ್ಕೂ ಫುಲ್ ಟ್ರಾಫಿಕ್ ಜಾಮ್. ರೋಗಿಯ ಪ್ರಾಣ ಉಳಿಸೋದು ಹೇಗೆ ಎಂಬಗಾಬರಿಯಲ್ಲಿ ಆಂಬ್ಯುಲೆನ್ಸ್ ಚಾಲಕನಿದ್ದ. ಆದ್ರೆ ಅಲ್ಲಿ ರಿಯಲ್ ಹೀರೋ ರೀತಿ ಕೆಲಸ ಮಾಡಿದ್ದು ಮಾತ್ರ ಟ್ರಾಫಿಕ್ ಪೊಲೀಸ್. ಮುಂದೆ ಟ್ರಾಫಿಕ್ ಪೊಲೀಸ್ ಒಬ್ಬರು ಓಡೋಡಿ ಗಾಡಿಗಳನ್ನ ಸೈಡಿಗೆ ಹೋಗುವಂತೆ ಮನವಿ ಮಾಡುತ್ತಿದ್ದರು. ಪೊಲೀಸ್ ಮುಂದೆ ಮುಂದೆ ಹೋದ್ರೆ ಆಂಬ್ಯುಲೆನ್ಸ್ ಪೊಲೀಸ್ ಹಿಂದೆಯೇ ಸಾಗುತ್ತಿತ್ತು. ಹೀಗೆ ಸುಮಾರು 2 ಕಿಲೋ ಮೀಟರ್ ಗಟ್ಟಲೇ ಓಡಿ, ಸುಗಮ ದಾರಿ ಮಾಡಿಕೊಟ್ಟಿದ್ದಾರೆ.

ಹೈದರಾಬಾದ್ ನ ಅಬಿದ್ಸ್ ಜಿಪಿಒ ಜಂಕ್ಷನ್ ಮತ್ತು ಆಂಧ್ರ ಬ್ಯಾಂಕ್ ಕೋಟಿ ಹತ್ತಿರ ಕಳೆದ ಸೋಮವಾರದಂದು ಈ ಘಟನೆ ನಡೆದಿದೆ. ತನ್ನ ಠಾಣೆಯ ವ್ಯಾಪ್ತಿಯನ್ನು ಬಿಟ್ಟು ಸಾಗಿ ಓಡಿದಂತ ಟ್ರಾಫಿಕ್ ಪೇದೆ ಬಾಬ್ಜಿ, ಸಕಾಲದಲ್ಲಿ ಆಂಬ್ಯುಲೆನ್ಸ್ ಆಸ್ಪತ್ರೆ ಸೇರುವಂತೆ ಮಾಡಿ, ರೋಗಿಗೆ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ.

ಈ ಇಡೀ ಘಟನೆಯನ್ನು ಆಂಬ್ಯುಲೆನ್ಸ್ ನಲ್ಲಿದ್ದಂತ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದನ್ನು ಗಮನಿಸಿದಂತ ಹೈದರಾಬಾದ್ ಟ್ರಾಫಿಕ್ ಪೋಲಿಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.