ಬುಲೆಟ್ ರೈಲಿಗಿಂತ ಮೂರು ಪಟ್ಟುವೇಗ ಹೊಂದಿರುವ ಹೈಪರ್ ಲೂಪ್ ಎಂಬ ಭವಿಷ್ಯದ ಸಾರಿಗೆ

0
641

ಹೈಪರ್ ಲೂಪ್

ಬುಲೆಟ್ ರೈಲಿಗಿಂತ ಮೂರು ಪಟ್ಟುವೇಗ ಹೊಂದಿರುವ ಹೈಪರ್ ಲೂಪ್ ಎಂಬ ಭವಿಷ್ಯದ ಸಾರಿಗೆ ವ್ಯವಸ್ಥೆ ಅಳವಡಿಸಿಕೊಳ್ಳಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಶಬ್ದಕ್ಕೆಂತಲೂ ವೇಗವಾಗಿ ಚಲಿಸುವ ಈ ಸಾರಿಗೆ ತಂತ್ರಜ್ಞಾನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

*ಏನಿದು ಹೈಪರ್ ಲೂಪ್?

ಹೈಪರ್ ಲೂಪ್ ಎನ್ನುವುದು ಭವಿಷ್ಯದ ಸಾರಿಗೆ ತಂತ್ರಜ್ಞಾನವಾಗಿದೆ. ಗಂಟೆಗೆ 1,200 ಕಿ.ಮೀ. ವೇಗದಲ್ಲಿ ಚಿಲಿಸುವ ತಂತ್ರಜ್ಞಾನವಿದು. ಎಲೋನ್ ಮಸ್ಕ್ ಎನ್ನುವವರ ಆವಿಷ್ಕಾರ ಇದು. ಇದನ್ನು 2013ರಲ್ಲಿ ಜಗತ್ತಿನ ಪರಿಚಯಿಸಿದರು. ಹೈಪರ್ ಲೂಪ್ ಎನ್ನುವುದು ದೊಡ್ಡ ವಾಯುಚಾಲಿತ ಕೊಳವೆ ವೃತ್ತಕಾರದ ಕ್ಯಾಪ್ಸೂಲ್ ಬಳಸಿ ಒತ್ತಡ ಉಂಟು ಮಾಡಿ ಓಡಿಸುವುದು, ಇನ್ನೊಂದು ನಿರ್ವಾತ ಪ್ರದೇಶ ಉಂಟು ಮಾಡಿ ಎಲೆಕ್ಟ್ರೊ ಮ್ಯಾಗ್ನೆಟಿಕ್ ಸಸ್ಪೆನ್ಷನ್ (ಮ್ಯಾಗ್ಲೇವ್ ರೈಲುಗಳಂತೆ) ಸಂಚರಿಸುವ ವಿಧಾನದ ಬಗ್ಗೆ ಸಂಶೋಧನೆ ನಡೆಯುತ್ತದೆ.

*ಎಲ್ಲಿ ಬಳಕೆ ಯಾಗುತ್ತದೆ?

ಹೆಚ್ಚು ದಟ್ಟನೆ ಇರುವ ನಗರಗಳ ಮಧ್ಯೆ ಹೈಪರ್ ಲೂಪ್ ಸಾರಿಗೆ ಹೇಳಿ ಮಾಡಿಸಿದ್ದು ಎಂದು ಎಲೋನ್ ಹೇಳಿದ್ದಾರೆ. 1500 ಕಿ. ಮೀ ಒಳಗಿನ ಸಂಚಾರಕ್ಕೆ ಇದು ಉತ್ತಮ, ಶಬ್ದ ವೇಗಕ್ಕೂ ಮೀರಿದ ವೇಗದ ವ್ಯವಸ್ಥೆ ಇದಾಗಿದ್ದು, ವಿಮಾನಕ್ಕಿಂತಲೂ ಕಡಿಮೆ ಅವ ಸಾಕಾಗುತ್ತದೆ. ರನ್ ವೇ ಯಿಂದ ಟೇಕಾಫ್ ಲ್ಯಾಂಡಿಂಗ್ ಸಮಯವೂ ಉಳಿತಾಯ ಎಂದು ಹೇಳಲಾಗಿದೆ.

*ಶಕ್ತಿ ಎಲ್ಲಿಂದ ?

ಹೈಪರ್ ಲೂಪ್ ನ ಪೈಪ್ ಗಳ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸುವುದು, ರೀಚಾರ್ಜ್ ಆಗುವ ಬ್ಯಾಟರಿಗಳನ್ನು ಕ್ಯಾಪ್ಸೂಲ್’ಗಳಲಿದ್ದು, ಅದಕ್ಕೆ ಸೋಲಾರ್ ಶಕ್ತಿಯನ್ನು ನೀಡುವುದು. ಜತೆಗೆ ಸಂಚಾರದ ವೇಳೆ ಚಾರ್ಜ್ ಆಗುವ ಬ್ಯಾಟರಿಗಳು ಕ್ಯಾಪ್ಸೂಲ್’ಗಲಳಿದ್ದು, ಅದಕ್ಕೆ ಸೋಲಾರ್ ಶಕ್ತಿಯನ್ನು ನೀಡುವುದು. ಜತೆಗೆ ಸಂಚಾರದ ವೇಳೆ ಚಾರ್ಜ್ ಆಗುವ ವ್ಯವಸ್ಥೆಯನ್ನು ರೂಪಿಸುವ ಇರಾದೆಯನ್ನು ಹೊಂದಲಾಗಿದೆ.

*ಕಡಿಮೆ ಖರ್ಚಿನದ್ದೇ ?

ಹೈಪರ್ ಲೂಪ್ ವ್ಯವಸ್ಥೆ ಅಗ್ಗದ್ದೇನೂ ಅಲ್ಲ. ಎಲೋನ್ ಮಸ್ಕ್ ಅವರೇ ಹೇಳುವಂತೆ ಇದಕ್ಕೆ ಹಲವು ಕೋಟಿ ರೂ.ಗಳ ವೆಚ್ಚವಾಗಬಹುದು. ಅದರೆ ಇದು ಅತ್ಯಾಧುನಿಕ ಬುಲೆಟ್/ ವೇಗದ ರೈಲುಗಳಿಗಿಂತ ಅಗ್ಗದ್ದು ಎಂಬುದು ಅವರ ವಾದ. ಹೈಪರ್ ಲೂಪ್ ಪ್ರತಿ ಕ್ಯಾಪ್ಸೂಲ್ ಗೆ ನೂರು ಕೋಟಿ ಒಳಗೆ ಜನ ಸಂಚರಿಸುವ. ಸರಕು ಸಾಗಣೆಗೆ ಕ್ಯಾಪ್ಸೂಲ್ ಗಳನ್ನು ಅಳವಡಿಸಬಹುದಾಗಿದೆ. ಹೈಪರ್ ಲೂಪ್ ನಲ್ಲಿ ಹೆಚ್ಚುಶಬ್ದವೇ ಬರುವುದಿಲ್ಲ. ಜನತೆ ಹೈಸ್ಪೀಡ್ ರೈಲು ಟ್ರ್ಯಾಕ್ ಗಳಿಗೆ ಹಾಕುವಂತೆ ಎರಡು ಬದಿ ಬೇಲಿಗಳನ್ನು ನಿರ್ಮಿಸಬೇಕಾಗಿಯೂ ಇಲ್ಲ.