ಪುಲ್ವಾಮ ದಾಳಿ ಇಡಿ ದೇಶವನ್ನೇ ಬೆಚ್ಚಿ ಬಿಳಿಸಿತ್ತು, ಈ ದಾಳಿಯಲ್ಲಿ 44 ಯೋಧರನ್ನು ಕಳೆದುಕೊಂಡ ಭಾರತ ಸೇಡಿಗೆ ಸೇಡು ಎಂದು ಸದ್ಯದಲ್ಲೇ ಉಗ್ರರನ್ನು ಸುಟ್ಟು ಹಾಕುವುದಾಗಿ ತಿಳಿಸಿತ್ತು ಈ ವಿಷಯವಾಗಿ ಗರಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಮೇಲೆ ವಿವಿಧ ರೀತಿಯಲ್ಲಿ ದಾಳಿ ನಡೆಸಿ ಆರ್ಥಿಕ ಸಂಕಷ್ಟ ಎದುರಿಸುವಂತೆ ಮಾಡಿ ಪಾಕಿಗೆ ಭಾರತದ ಶಕ್ತಿ ಏನು? ಅಂತ ತಿಳಿಸಿದ್ದರು. ಇಷ್ಟಕ್ಕೆ ತತ್ತರಿಸಿ ಹೋದ ಪಾಕ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಭಾರತೀಯ ಯುದ್ದ ವಿಮಾನಗಳು ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಸುಟ್ಟು ಹಾಕಿ ಪುಲ್ವಾಮಾ ದಾಳಿಗೆ ಪ್ರತೀಕಾರ ತಿರಿಸಿಕೊಂಡಿದೆ.
300 ಉಗ್ರರು ನಾಶ?
ಹೌದು ಪ್ರಧಾನಿಯವರು ಹೇಳಿದಂತೆ ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಎಂಬಂತೆ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನದಲ್ಲಿರುವ ಜೈಷ್-ಇ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಗೆ 300ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರ (ಎಲ್ಒಸಿ)ದಲ್ಲಿ ಭಾರತೀಯ ಸೇನೆ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರ ಎರಡನೆ ಅತಿದೊಡ್ಡ ದಾಳಿ ಇದಾಗಿದೆ. ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಗೆ ಹೊಂದಿಕೊಂಡಿರುವ ಮುಜಾಫರ್ಬಾದ್ನ ಮೂರು ಜೈಷ್-ಇ-ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ಮುಂಜಾನೆ 3.30ಕ್ಕೆ ಎರಗಿದ ಮಿರಾಜ್ 12 ಯುದ್ಧ ವಿಮಾನಗಳು ಉಗ್ರರನ್ನು ಸುಟ್ಟುಹಾಕಿದೆ.
21 ನಿಮಿಷಗಳಲ್ಲಿ 300 ಉಗ್ರರು ಬಲಿ;
ಬೆಳಗಿನ ಜಾವ 3.30ರ ಸುಮಾರಿಗೆ ಸುಮಾರು 100 ಕೆಜಿ ಬಾಂಬ್ ಅನ್ನು ಉಗ್ರರ ನೆಲೆ ಮೇಲೆ ಹಾಕಲಾಗಿದೆ. ಒಟ್ಟು 12 ಮಿರಾಜ್ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. 21 ನಿಮಿಷಗಳ ಕಾಲ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿ 12 ವಾಯುಪಡೆ ವಿಮಾನಗಳು ಸುರಕ್ಷಿತವಾಗಿ ವಾಪಸ್ ಬಂದಿವೆ ಇದೇ ವೇಳೆ ಭಾರತದ ಸರ್ಜಿಕಲ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಕೂಡ ದಾಳಿ ನಡೆಸಬಹುದು ಎಂಬ ಶಂಕೆಯ ಮೇರೆಗೆ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ಸಜ್ಜಾಗಿರುವಂತೆ ಸೂಚಿಸಲಾಗಿದೆ. ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ವಾಯು ಗಡಿ ರೇಖೆಯನ್ನು ಭಾರತೀಯ ಯುದ್ಧ ವಿಮಾನಗಳು ದಾಟಿವೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ಆರೋಪ ಮಾಡಿದ್ದಾರೆ.
ಈ ಘಟನೆ ಎರಡು ರಾಷ್ಟ್ರಗಳ ನಡುವೆ ಮೂಡಿರುವ ವೈಮನಸ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೇಜರ್ ಜನರಲ್ ಆಸಿಫ್ ಗಫೂರ್, “ಭಾರತದ ವಿಮಾನಗಳು ಮುಜಾಫರ್ಬಾದ್ ಸೆಕ್ಟರ್ನಲ್ಲಿ ಹಾರಾಟ ನಡೆಸಿವೆ. ಪಾಕಿಸ್ತಾನ ವಾಯುಸೇನೆ ಇದಕ್ಕೆ ತಕ್ಕ ಉತ್ತರ ನೀಡಿದೆ. ಯಾವುದೇ ಜೀವಹಾನಿ ಉಂಟಾಗಿಲ್ಲ,” ಎಂದಿದ್ದಾರೆ.
ಉಗ್ರರಿಗೆ ನರಕ ತೋರಿಸಿದ ಭಾರತ;
ಇನ್ನು ನಿನ್ನೆಯಷ್ಟೇ ಪಾಕ್ ಪ್ರಧಾನಿ ಇಮ್ರಾನ್ಖಾನ್ ಭಾರತದ ಎಚ್ಚರಿಕೆಗೆ ಬೆದರಿ ಶಾಂತಿ ಸ್ಥಾಪನೆಗೆ ಒಂದೇ ಒಂದು ಅವಕಾಶ ಕೊಡಿ ಎಂದು ಗೋಗರೆದಿದ್ದರು. ಆದರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಭಾರತ ಇಂದು ಪಾಕ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರಿಗೆ ನರಕ ತೋರಿಸಿದೆ. ಬಾರಿ ಗಾತ್ರದ 15ಕ್ಕೂ ಹೆಚ್ಚು ಬಾಂಬ್ಗಳನ್ನು ಉಗ್ರರ ಶಿಬಿರಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿ ಜೈಷ್-ಇ-ಮೊಹಮ್ಮದ್ ಇನ್ನೆಂದೂ ಕೂಡ ಭಾರತದ ಕಡೆ ತಿರುಗಿ ನೋಡದಂತೆ ಮುಟ್ಟಿನೋಡಿಕೊಳ್ಳುವ ಹಾಗೆ ಪಾಠ ಕಲಿಸಿವೆ.
Also read: ಇನ್ಮುಂದೆ ಯೋಧರು ತಮಗೆ ಇಷ್ಟ ಬಂದ ಫ್ಲೈಟ್ನಲ್ಲಿ ಫ್ರೀಯಾಗಿ ಪ್ರಯಾಣಿಸಬಹುದು..