ಕನಸಿನಲ್ಲಿ ಈ ರೀತಿಯ 9 ಅಂಶಗಳು ಕಂಡುಬಂದರೆ ಸಾವಿನ ಸೂಚನೆ ಅಂತೇ..!

0
4849

ಹೌದು ಕನಸಿನಲ್ಲಿ ಕೆಲವೊಂದು ಘಟನೆಗಳು ಮತ್ತು ಕೆಲವೊಂದು ಲಕ್ಷಣಗಳು ಕಂಡು ಬಂದ್ರೆ ಸಾವಿನ ಸೂಚನೆ ಅಂತೇ ಅನ್ನೋದು ವಿಶೇಷ. ಇದಕ್ಕೆ ಉದಾಹರಣೆಗಳು ಸಾಕಷ್ಟು ಇವೆ ಅನ್ನೋದು ನಮಗೆ ಗೊತ್ತು. ಯಾಕೆ ಅಂದ್ರೆ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಇಂತಹ ಸನ್ನಿವೇಶಗಳು ಉಲ್ಲೇಖವಾಗಿವೆ.

if-these-9-factors-are-found-in-the-dream-then-death-is-the-same-1
source:theodysseyonline.com

೧.ಕನಸಿನಲ್ಲಿ ಒಂದು ಮಹಿಳೆ ತುಂಬಾ ಬಾಡಿದ ಹೂ ಮುಡಿದು ಕೊಂಡು ನಿಮ್ಮ ಕನಸಿನಲ್ಲಿ ಬಂದರೆ ಒಳಿತಲ್ಲ.

೨.ಮಹಿಳೆ ಬಿಳಿ ಸೀರೆ ಧರಿಸಿ, ಕೂದಲನ್ನು ಬಿಟ್ಟುಕೊಂಡಿದ್ದರೆ. ಇದು ಸಹ ಒಂದು ಕೆಟ್ಟ ಕನಸಾಗಿದೆ.

೩.ಹೆಣ್ಣು ದೇವರ ವಿಗ್ರಹ ಮುರಿದ ಸ್ಥಿತಿಯಲ್ಲಿ ಕಂಡು ಬಂದರೆ ಇದು ಶುಭವಲ್ಲ.

೪.ಒಂದು ಮರ ಮುರಿದು ಬಿದ್ದಂತೆ ಅಥವ ಮೇಲಿನಿಂದ ಬಿದ್ದಂತೆ ಕನಸಿನಲ್ಲಿ ಕಂಡರೆ ಇದು ಸಹ ಒಂದು ಕೆಟ್ಟ ಮುನ್ಸೂಚನೆ.

೫.ಪದೇ ಪದೇ ಸಾವು ಮತ್ತು ಸ್ಮಶಾನದ ಬಹ್ಹೆ ಕನಸುಗಳು ಬಿದ್ದರೆ ನಿಮ್ಮ ಸಾವಿನ ಬಗ್ಗೆ ಕೊಡುವ ಒಂದು ಲಕ್ಷಣವಾಗಿದೆ.

if-these-9-factors-are-found-in-the-dream-then-death-is-the-same-2
source:http://alikarakus.blogspot.in/

೬.ನಿಮ್ಮ ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಇದು ಒಂದು ಕೆಟ್ಟ ಘಟನೆ ನೆಡೆಯುವ ಮುನ್ಸೂಚನೆ.

೭.ನೀವು ನಿಮ್ಮ ಕನಸಿನಲ್ಲಿ ನೀವು ಟ್ರಿಪ್ ಹೋದಂತೆ ಅನಿಸಿದರೆ. ನೀವು ಅಂದಿನ ದಿನ ಯಾವುದೇ ಟ್ರಿಪ್ಸ್ ಅಥವಾ ದೂರ ಪಯಣ ಬೆಳೆಸುವುದು ಒಳ್ಳೇದಲ್ಲ.

೮.ನಿಮ್ಮ ಕನಸಿನಲ್ಲಿ ತಮಟೆ ಇನ್ನಿತಿರ ಶಂಖ ಬಾರಿಸುವಂತಹ ಕನಸು ಕಂಡರೆ ಇದು ಸಹ ಒಂದು ಕೆಟ್ಟ ಘಟನೆ.

೯.ನಿಮ್ಮ ಕನಸಿನಲ್ಲಿ ನಿಮ್ಮ ತಲೆ ಕೂದಲು ತೆಗೆಸಿದ ಹಾಗೆ ಕನಸು ಬಿದ್ದರೆ ನಿಮ್ಮ ಹತ್ತಿರದವರ ಸಾವಿನ ಮುನ್ಸೂಚನೆ ಎಂದು ಅರ್ಥ.